ರಾಜ್ಯ ಸರ್ಕಾರಗಳನ್ನು ಉರುಳಿಸಲು ರಾಜ್ಯಪಾಲರನ್ನು ಬಳಸಿ ಸಂವಿಧಾನದ ಕಗ್ಗೊಲೆ
ಮಾಡನತ್ತಿರುವ ಕೇಂದ್ರ ಬಿಜೆಪಿ ಸರ್ಕಾರ.
ಸುಳ್ಳನ್ನು ನಿಜ ಮಾಡಲು ಧರಣಿ ಪಾದಯಾತ್ರೆ ನಡೆಸಿ ನಿರಾಶರಾಗಿ ಬಿಜೆಪಿ ಈಗ ರಾಜ್ಯಪಾಲರನ್ನು ಬಳಸಿ ಸರ್ಕಾರವನ್ನು ಉರುಳಿಸುವ ಕುತಂತ್ರ ನಡೆಸುತ್ತಿದೆ.
ರಾಜಭವನ್ನು ದುರ್ಬಳಕೆ ಮಾಡಿಕೊಂಡು ಕರ್ನಾಟಕ ಜನರ ಆಶೀರ್ವಾದ ಹೊಂದಿರನವ 136 ಶಾಸಕರಿರುವ ಚುನಾಯಿತ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ಕುತಂತ್ರ ನಡೆಸುತ್ತಿದೆ.ರಾಜ್ಯಪಾಲರು ಕೇಂದ್ರ ಸರ್ಕಾರ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಕೆೈಗೊಂಬೆಯಂತೆ ಕೆಲಸ ಮಾಡನತ್ತಿದ್ದು ಮುಖ್ಯಮಂತ್ರಿಗೆ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿರುವುದು ಕಾನೂನು ಮತ್ತು ಸಂವಿಧಾನ ಬಾಹಿರ.
ಜುಲೈ 26, 2024 ರಂದು, 11:30 ಗಂಟೆಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕೆ.ಜೆ.ಅಬ್ರಹಾಂ ಮೂಡಾ ಹಗರಣಕ್ಕೆ ಮುಖ್ಯ ಮಂತ್ರಿಗಳು ದೋಷಿತರೆಂದು ದೂರನ್ನು ನೀಡಿದರು, ಒಂದೇ ದಿನದೊಳಗೆ ಯಾವುದೇ ಸಾಕ್ಷಿಗಳನ್ನು ಪರಿಶೀಲಿಸದೇ ಕೆೈಗೊೊಂಬೆಯಾದ ರಾಜ್ಯಪಾಲರು ಮುಖ್ಯಮಂತ್ರಿಗೆ ಶೋಕಾಸ್ ನೋಟಿಸ್ ನೀಡಿದ್ದರು.
ಮುಡಾ ಪ್ರಕರಣಕ್ಕೆ ಸಂಬಂದಿಸಿದಂತೆ ಜುಲೈ 14 ರಂದು ಸರ್ಕಾರ ನ್ಯಾಯಾಂಗ ಆಯೋಗವನ್ನು ರಚಿಸಿದ್ದು, ಆಯೋಗದ ವರದಿಗಾಗಿ ಕಾಯಲಾಗುತ್ತಿದ್ದು ತಪ್ಪುಗಳಿದ್ದರೆ ಆಯೋಗ ತನಿಖೆ ನಡೆಸಿ ವರದಿ ಸಲ್ಲಿಸಲಿದೆ.ಇದನ್ನು ಪರಿಗಣಿಸದೇ ರಾಜ್ಯಪಾಲರು ನೋಟಿಸ್ ಜಾರಿ ಮಾಡಿದ್ದಾರೆ.ಹಿಂದಿನ ಸರ್ಕಾರ ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ,ಜನಾರ್ಧನ ರೆಡ್ಡಿ ಅವರ ವಿರುದ್ದ ಹಲವು ವರ್ಷಗಳಿಂದ ಪ್ರಕರಣಗಳಿದ್ದರೂ ಕೂಡ ಇಲ್ಲಿಯವರಗೂ ಯಾವ ಕ್ರಮವನ್ನು ಕೆೈಗೊಳ್ಳಲಿರದ ರಾಜ್ಯಪಾಲರು ಕೇಂದ್ರದ ಕೆೈಗೊಂಬೆಯಾಗಿದ್ದಾರೆ.
ಈ ಹಿಂದೆ ಮಹಾರಾಷ್ಟ್ರ, ಮಧ್ಯಪ್ರದೇಶ , ಕರ್ನಾಟಕ ಮತ್ತು ಇನ್ನಿತರ ರಾಜ್ಯಗಳಲ್ಲಿ ಮೋದಿಯವರ ಕೇಂದ್ರ ಬಿಜೆಪಿ ಸರ್ಕಾರ ಜನಾಭಿಪ್ರಾಯದ ವಿರುಧ್ದ ರಾಜ್ಯಪಾಲರ ಅಸ್ತ್ರ ಬಳಸಿಕೊಂಡು ರಾಜ್ಯ ಸರ್ಕಾರಗಳನ್ನು ಉರುಳಿಸುವ ಕುತಂತ್ರವನ್ನು ನಡೆಸುವುದೇ ಇವರ ನೀಚತನವಾಗಿದೆ.
ನಿಮ್ಮವ ,
ಪ್ರಕಾಶ್ ರಾಮಾನಾಯ್ಕ್
ಜಿಲ್ಲಾಧ್ಯಕ್ಷರು,
ಪದವೀಧರರ ವಿಭಾಗ.ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ.
ಮೊ-9945545936
0 Comments