ಚಳ್ಳಕೆರೆ ಜನಧ್ವನಿ ವಾರ್ತೆ ನ.6 ನೈಜ ಕಲಾವಿದರನ್ನು ಗುರುತಿಸಿ ಪ್ರೋತ್ಸಹಿಸಿದಾಗ ಮಾತ್ರ ಕಲೆ ಉಳಿಯಲು ಸಾಧ್ಯ ಅವರಲಗಲ್ಲಿ ಅಡಗಿರುವ ಕಲೆ ಕಲಾವಿದನಿಗೆಸಮಾಜದಲ್ಲಿ ಸ್ಥಾನ-ಮಾನ ದೊರಕಿಸುವ ಹಕ್ಕು ಮತ್ತು ಸ್ವತ್ತು ಕಲಾಪ್ರೇಕ್ಷ ಕರದಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಬೆಂಗಳೂರಿನ ರವಿಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದ ನಗರದ ರಂಗಭೂಮಿ ಕಲಾವಿದ ಹಾಗೂ ನಿವೃತ್ತ ಶಿಕ್ಷಕ ಪಿ.ತಿಪ್ಪೇಸ್ವಾಮಿ ರವರನ್ನು ಅವರ ನಿವಾಸದಲ್ಲಿ ಹಾಗೂ ಶಾಸಕಭವನದಲ್ಲಿ ವಿವಿಧ ಸಮುದಾಯ ಮುಖಂಡರು ಹಾಗೂ ಶಾಸಕ ಟಿ ರಘುಮೂರ್ತಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿ ಚಳ್ಳಕೆರೆ ತಾಲೂಕು ಹಿಂದಿನಿಂದಲೂ ಬರದ ನಾಡು ಎಂದು ಹೆಸರು ಪಡೆದಿದ್ದರು ಕಲೆ ಸಾಹಿತ್ಯ ಸಂಸ್ಕೃತಿಯನ್ನು ಪೋಷಿಸುವಲ್ಲಿ ಸದಾ ಮುಂದೆ ಇದೆ ಪಿ ತಿಪ್ಪೇಸ್ವಾಮಿಯವರು ಬಾಲ್ಯದಲ್ಲಿ ಕಲೆಯ ಬಗ್ಗೆ ಒಲವನ್ನು ಬೆಳೆಸಿಕೊಂಡು ಶಿಕ್ಷಕ ವೃತ್ತಿಯನ್ನು ನಿರ್ವಹಿಸುತ್ತ ಅನೇಕ ನಾಟಕಗಳಲ್ಲಿ ಅಭಿನಯಿಸಿ ನಾಟಕಗಳಲ್ಲಿನ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿ ಇಡೀ ಜಿಲ್ಲೆ ಹಾಗೂ ರಾಜ್ಯದ ಕಲಾಭಿಮಾನಿಗಳ ಹೃದಯವನ್ನು ಗೆದ್ದು ಇಂದು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವುದು ಜಿಲ್ಲೆ ಹಾಗೂ ತಾಲೂಕಿಗೆ ಹೆಮ್ಮೆಪಡುವ ವಿಷಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಪ್ರಹ್ಲಾದ್, ಭರಮಯ್ಯ, ಶ್ರೀನಿವಾಸ್, ಮಲ್ಲೇಶಪ್ಪ, ದಳವಾಯಿ ಮೂರ್ತಿ, ಅಪ್ಪಣ್ಣ, ಉಪ್ಪಾರ ಸಮಾಜದ ಹನುಂಮತಪ್ಪ. ಯಲ್ಲಪ್ಪ.ದುರ್ಗಾವರ ರಂಗಸ್ವಾಮಿ. ವೆಂಕಟೇಸ್.ಸುರೇಶ್. ಡಿ.ಎಂ
ಕೆ . ರವಿ.ರೆಡ್ಡಿಹಳ್ಳಿ ಶಿವಣ್ಣ. ಸೇರಿದಂತೆ ಇತರರಿದ್ದರು,
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಿ ತಿಪ್ಪೇಸ್ವಾಮಿಯವರ ಕಲಾ ಸೇವೆ ಯುವಕರಿಗೆ ಮಾದರಿ: ಶಾಸಕ ಟಿ ರಘುಮೂರ್ತಿ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments