ಚಿತ್ರದುರ್ಗ:
ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಎತ್ತಿನಹೊಳೆ ಕುಡಿಯುವ ನೀರು ಹಾಸನ ಜಿಲ್ಲೆಯ ಅರಸೀಕೆರೆ ತಲುಪುವ ಮೊದಲೇ ಚಿತ್ರದುರ್ಗ ತಲುಪಲಿದೆ. ಯೋಜನೆಯ ನೀಲ ನಕ್ಷೆಯಂತೆ ಚಿತ್ರದುರ್ಗ ಜಿಲ್ಲೆಗೆ ಎತ್ತಿನಹೊಳೆ ಕುಡಿಯುವ ನೀರು ಹರಿಸುವ ಪ್ರಸ್ತಾಪನೆಯೇ ಇಲ್ಲ. ಆದರೂ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರಕ್ಕೆ ಎತ್ತಿನಹೊಳೆ ನೀರು ಹರಿಯಲಿದೆ.ಇದು ಆಶ್ಚರ್ಯವಾದರೂ ಸತ್ಯ.
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ 98ಕಿ.ಮೀ.ಪೈಪ್ ಲೈನ್ ಮೂಲಕ ತಾಲ್ಲೂಕಿನ ಗಡಿ ಗ್ರಾಮ ಹೆಬ್ಬನಹಳ್ಳಿಗೆ ತಲುಪಲಿದ್ದು, ಅಲ್ಲಿಂದ ಬೇಲೂರು, ಅರಸೀಕೆರೆ, ತಿಪಟೂರು ಮೂಲಕ ತುಮಕೂರಿಗೆ ಒಟ್ಟು 270 ಕಿ.ಮೀ. ದೂರದವರೆಗೆ ತೆರೆದ ನಾಲೆಯ ಮೂಲಕ ನೀರು ಹರಿಸುವುದು ಯೋಜನೆ ಉದ್ದೇಶ.
ಆದರೆ ಅರಸೀಕೆರೆ ತಾಲ್ಲೂಕಿನ ಕೆಲವು ಭಾಗಗಳಲ್ಲಿ ನಾಲೆಯೇ ನಿರ್ಮಾಣವಾಗದ ಕಾರಣ ನೀರನ್ನು ವಾಣಿವಿಲಾಸ ಸಾಗರಕ್ಕೆ ಹರಿಸುವುದು ಅನಿವಾರ್ಯವಾಗಿದೆ. ಸಕಲೇಶಪುರ ತಾಲ್ಲೂಕಿನಲ್ಲಿ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, ಯೋಜನೆಯ ಮುಖ್ಯ ಕೇಂದ್ರದಿಂದ 42 ಕಿ.ಮೀ. ವರೆಗೆ ನೀರು ಹರಿಯಲು ನಾಲೆ ಸಿದ್ಧಪಡಿಸಲಾಗಿದೆ. ಆದರೆ, ಅರಸೀಕೆರೆ ತಾಲ್ಲೂಕಿನ ಗಡಿ ಆರಂಭದಲ್ಲೇ ನಾಲೆ ಕಾಮಗಾರಿ ನಡೆಸಲು ಅರಣ್ಯ ಇಲಾಖೆ ಅಡ್ಡಿಯಾಗಿದೆ.
ಅರಸೀಕೆರೆ ತಾಲ್ಲೂಕಿನ ಐದಳ್ಳಕಾವಲು ಹಾಗೂ ರಾಮದೇವರ ಕಾವಲಿನಲ್ಲಿ ಮನೆಗಳಿದ್ದರೂ ಅರಣ್ಯ ಇಲಾಖೆ ಈ ಜಾಗ ತಮ್ಮ ವ್ಯಾಪ್ತಿಗೆ ಬರಲಿದೆ ಎಂದು ತಕರಾರು ಎತ್ತಿರುವುದರಿಂದ ಸುಮಾರು 2ಕಿ.ಮೀ ನಾಲೆ ಕಾಮಗಾರಿಗೆ ತಡೆ ಬಿದ್ದಿದೆ.
ತಿಪಟೂರು, ತುಮಕೂರು ತಾಲ್ಲೂಕಿನ ಹಲವೆಡೆ ವಿವಿಧ ಕಾರಣದಿಂದ ನಾಲೆ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ ಹಾಗೂ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಭೈರಗೊಂಡ್ಲು ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಜಲಾಶಯಕ್ಕೂ ಸ್ಥಳೀಯರು ಭಾರಿ ವಿರೋಧ ವ್ಯಕ್ತಪಡಿಸಿದ್ದರಿಂದ ಜಲಾಶಯ ನಿರ್ಮಾಣ ಕಾರ್ಯ ಕೈ ಬಿಡಲಾಗಿದೆ ಎನ್ನಲಾಗುತ್ತಿದ್ದು ,
ಬದಲಿ ನಿರ್ಮಾಣ ಕಾರ್ಯ ಇನ್ನೂ ಚಿಂತನೆಯ ಹಾದಿಯಲ್ಲೇ ಇದೆ. ಜಲಾಶಯ ನಿರ್ಮಾಣವಾಗದೆ ಎತ್ತಿನಹೊಳೆ ನೀರು ಎಲ್ಲಿಗೆ ಹರಿಸುವುದು ಎಂಬ ಜಿಜ್ಞಾನಾಸೆ ಅಧಿಕಾರಿಗಳ ವಲಯದಲ್ಲಿದೆ. ಅಲ್ಲದೇ ಯೋಜನೆ ಮುಕ್ತಾಯಕ್ಕೆ ಮತ್ತಷ್ಟು ವರ್ಷಗಳು ಹಿಡಿಯಲಿದ್ದು ವೆಚ್ಚವು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ. ಹೆಸರು ಹೇಳದ ಹಿರಿಯ ಅಧಿಕಾರಿಗಳು.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments