ಚಳ್ಳಕೆರೆ:ತಾಲೂಕಿನ ನಗರಸಭೆಯ 21ನೇ ವಾರ್ಡ್ ನ ಸದಸ್ಯೆ ಆಗಿರುವ ಸಾವಿತ್ರಮ್ಮರವರಿಗೆ ಬಿ ಸಿ ಎಂ ಬಿಗೆ ಸೇರಿದ ಪ್ರಮಾಣ ಪತ್ರವನ್ನು ಚುನಾವಣಾ ಉದ್ದೇಶಕ್ಕಾಗಿ ನೀಡದಿರಲು ಒತ್ತಾಯಿಸಿ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ಪಿ ತಿಪ್ಪೇಸ್ವಾಮಿ ಚಳ್ಳಕೆರೆ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಬಿ ಸಿ ಎಂ ಬಿ ಗೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದು ಎಸ್ ಟಿ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ ಆದರೆ ನಗರಸಭಾ ಸದಸ್ಯೆ ಸಾವಿತ್ರಮ್ಮ ಸಾಮಾನ್ಯ ಮಹಿಳೆ ಕೋಟದ ಅಡಿಯಲ್ಲಿ ನಗರಸಭೆಗೆ ಸ್ಪರ್ಧಿಸಿ ಜಯಗಳಿಸಿದ್ದು ಈಗ ಬಿಸಿಎಂ ಬಿ ಕೋಟಾದ ಅಡಿಯಲ್ಲಿ ನಗರಸಭೆ ಅಧ್ಯಕ್ಷರಾಗಲು ಹೊರಟಿದ್ದಾರೆ ಇದು ಕಾನೂನು ಬಾಹಿರವಾಗಿದ್ದು ಪ್ರಮಾಣ ಪತ್ರವನ್ನು ನೀಡಬಾರದು ಕಾನೂನಾತ್ಮಕವಾಗಿ ದಾಖಲೆಗಳು ಸರಿ ಇದ್ದರೆ ಅಧಿಕಾರಿಗಳು ಪರಿಶೀಲನೆ ನಡೆಸಿ ಪ್ರಮಾಣಪತ್ರ ನೀಡಬೇಕು ರಾಜಕೀಯ ಒತ್ತಡಕ್ಕೆ ಒಳಗಾಗಿ ಪ್ರಮಾಣಪತ್ರ ನೀಡಿದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು
ನಗರಸಭಾ ಸದಸ್ಯ ವಿ ವೈ ಪ್ರಮೋದ್ ಮಾತನಾಡಿ ನಗರಸಭೆ ಅಧ್ಯಕ್ಷ ಸ್ಥಾನವು ಬಿಸಿಎಂ ಬಿ ಸ್ಥಾನಕ್ಕೆ ನಿಗದಿಪಡಿಸಿದ್ದು ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಪರಿಶೀಲನೆ ನಡೆಸಿ ಪ್ರಮಾಣ ಪತ್ರ ನೀಡಬೇಕು ರಾಜಕೀಯದ ಒತ್ತಡಗಳಿಗೆ ಒಳಗಾಗಿ ಕಾರ್ಯನಿರ್ವಹಿಸಿದ್ದಲ್ಲಿ ನ್ಯಾಯಲಯದ ಮೂಲಕ ಕಾನೂನು ಹೋರಾಟ ನಡೆಸಲಾಗುವುದು ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮನವಿ ಪತ್ರವನ್ನು ತಹಶಿಲ್ದಾರ ಅನುಪಸ್ಥಿತಿಯಲ್ಲಿ ಶಿರಸ್ತೆದಾರ ಗಿರೀಶ್ ಮನವಿ ಸ್ವೀಕರಿಸಿದರು
ಈ ಸಂದರ್ಭದಲ್ಲಿ ತಾಲೂಕು ಜೆ.ಡಿ.ಎಸ್ ಅಧ್ಯಕ್ಷರಾದ ಪಿ.ತಿಪೇಸ್ವಾಮಿ ( ಪಿ.ಟಿ ) ನಗರಸಭಾ ಜೆ.ಡಿ.ಎಸ್ ಮತ್ತು ಬಿ.ಜೆ.ಪಿ ಸದಸ್ಯರಾದ ಸಿ.ಶ್ರೀನಿವಾಸ್, ಸಿ.ಎಂ ವಿಶುಕುಮಾರ್, ವಿ.ವೈ.ಪ್ರಮೋದ್, ಜಿ.ಗೋವಿಂದ, ನಾಗಮಣಿ ರಮೇಶ್, ತಿಪ್ಪಮ್ಮ,ಟಿ ಕವಿತಾ ನಾಯಕಿ, ಡಿ ನಿರ್ಮಲ ಪ್ರಸನ್ನ, ಬಿ.ಜೆ.ಪಿ ಸದಸ್ಯರಾದ ಎಸ್.ಜಯಣ್ಣ, ಟಿ ಶಿವಕುಮಾರ್, ಪಾಲಮ್ಮ ಹಾಗೂ ಸಾಕಮ್ಮ ಉಪಸ್ಥಿತರಿದ್ದರು.
0 Comments