ಹಿರಿಯೂರು, ನವೆಂಬರ್ 18 : ಮಧ್ಯಪ್ರದೇಶ ರಾಜ್ಯದ ಶಾಜಾಪುರ ಜಿಲ್ಲೆಯ ನಲ್ ಗೆಡ
ತಾಲ್ಲೂಕಿನ ಗುಂಜನಿಯ ಗ್ರಾಮದ ನಿವಾಸಿ ಮೆಹಫಲ್ ರಾಜ್‌ಪೂತ್ ತ೦ದೆ ಅ೦ತರ್
ರಾಜ್‌ಪೂತ್ ಸುಮಾರು 20ವರ್ಷ ವಯಸ್ಸು, ಲಾರಿ ಕ್ಲೀನರ್ ಕೆಲಸ, ರವರು ದಿನಾಂಕ:
17.11.2023 ರಂದು ಮಧ್ಯಾಹ್ನ ದುರ್ಗಪ್ರಸಾದ್ ಹಾಗೂ ಜೀವನ್ ಗುಜ್ಜಾರ್ ಎಂಬ ಇಬ್ಬರೂ
ಲಾರಿ ಚಾಲಕರ ಜೊತೆಗೆ ನಂ: ಡಿಡಿ-01 ಕ್ಯೂ-9228 ನೇ ಲಾರಿಯಲ್ಲಿ ಪುಸ್ತಕಗಳನ್ನು ಲೋಡ್
ಮಾಡಿಕೊಂಡು ಹೊಸೂರಿನಿಂದ ಇಂದೋರ್‌ಗೆ ಹೋಗಲು ಬೆಂಗಳೂರು-ಶಿರಾ ಮಾರ್ಗವಾಗಿ
ರಾತ್ರಿ 08.00 ಗಂಟೆಯ ಸಮಯದಲ್ಲಿ ಹಿರಿಯೂರು ತಾಲ್ಲೂಕಿನ ಕೆ.ಆರ್.ಹಳ್ಳಿ ಗೇಟ್ ಹತ್ತಿರದ
ರಾಮದೇವ್ ಹೋಟೆಲ್ ಬಳಿ ಊಟ ಮಾಡಲು ಲಾರಿಯನ್ನು ನಿಲ್ಲಿಸಿದ್ದು, ಸುಮಾರು 09.00
ಸಮಯದಲ್ಲಿ ಕ್ಲೀನರ್ ಆದ ಮೆಹಫಲ್ ರಾಜ್‌ಪೂತ್‌ನು ತಂಬಾಕು ತರಲು ಅಂಗಡಿಗೆ ಹೋಗಿ
ವಾಪಸ್ಸು ಲಾರಿಯ ಬಳಿ ಬರಲು ಎನ್.ಹೆಚ್-48 ರಸ್ತೆಯನ್ನು ದಾಟುತ್ತಿರುವಾಗ ಬೆಂಗಳೂರು
ಕಡೆಯಿ೦ದ ಬಂದ ಅಪರಿಚಿತ ಕಾರಿನ ಚಾಲಕ ತನ್ನ ಕಾರನ್ನು ಅತೀ ವೇಗ ಮತ್ತು
ಅಜಾಗೂರುಕತೆಯಿಂದ ಚಾಲನೆ ಮಾಡಿಕೊ೦ಡು ಬಂದು ರಸ್ತೆ ದಾಟುತ್ತಿದ್ದ ಮೆಹಫಲ್
ರಾಜ್‌ತ್‌ಗೆ ಡಿಕ್ಕಿ ಪಡಿಸಿದ ಪರಿಣಾಮ ತಲೆಗೆ ಹಾಗೂ ಎರಡು ಕಾಲುಗಳಿಗೆ ತೀವ್ರ
ಸ್ವರೂಪದ ರಕ್ತಗಾಯಗಳಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಈ ಬಗ್ಗೆ ಹಿರಿಯೂರು
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.
ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ವ್ಯಕ್ತಿಯ ಸಾವು
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments