ರಸ್ತೆ ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟನೆ ಚನ್ನರಾಯಪಟ್ಟಣ

by | 19/11/23 | ಪ್ರತಿಭಟನೆ


ಚನ್ನರಾಯಪಟ್ಟಣ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಬಂದ್
ಹೊಸಕೋಟೆ ಬೂದಿಗೆರೆ ಮಾರ್ಗವಾಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಲ್ಪಿಸುವ ರಸ್ತೆ ಕಾಮಗಾರಿ ವಿಳಂಬ ಖಂಡಿಸಿ ಬೂದಿಗೆರೆ ಗ್ರಾಮಸ್ಥರಿಂದ ಪ್ರತಿಭಟನೆ ನಡೆಯಿತು


ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಬೂದಿಗೆರೆ ಗ್ರಾಮದ ಹತ್ತಿರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೋಗುವ ರಸ್ತೆ ಕಾಮಗಾರಿ ವಿಳಂಬ ದಿಂದ ಅಪಘಾತಗಳು ಹಾಗೂ ಧೂಳಿನ ರಸ್ತೆಯಾಗಿದ್ದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು
ಪ್ರತಿಭಟನೆ ಎಲ್ಲಿ ಸಾಮಾಜಿಕ ಕಾರ್ಯಕರ್ತ ಮೂರ್ತಿ ಮಾತನಾಡಿ ಸುಮಾರು ಆರು ವರ್ಷಗಳಿಂದ ಸುಮಾರು 24 ಕಿಲೋ ಮೀಟರ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆ ಕಾಮಗಾರಿ ಪೂರ್ಣವಾಗದೆ ವಾಹನ ಸವಾಲರಿಗೆ ಯಮ ಯಾತನೆ ಪಡುವಂತಾಗಿದೆ ರೈತರಿಗೆ ಸರಿಯಾದ ಮಾಹಿತಿ ಇಲ್ಲದೆ 8ಕುಂಟೆ 6 ಕುಂಟೆ ಜಾಗವನ್ನು ವಿಳಂಬ ಮಾಡುತ್ತಿದ್ದಾರೆ ಕುತ್ತಿಗೆದಾರರಿಗೆ ಕೇಳಿದರೆ ಕೆಆರ್ ಡಿಸಿಎಲ್ ಅವರಿಗೆ ಕೇಳಿ ಎಂದು ಜಾರಿ ಕೊಳ್ಳುತ್ತಾರೆ ಕಾಮಗಾರಿ ವಿಳಂಬದಿಂದ ಮಂಡೂರು ಜ್ಯೋತಿಪುರ ಗ್ರಾಮಗಳ ಹತ್ತಿರ ಪ್ರತಿಭಟನೆ ಮಾಡಿ ಇದು ನಾಲ್ಕನೇ ಬಾರಿ ಪ್ರತಿಭಟನೆ ಮಾಡುತ್ತಿರುವುದು ಬೂದಿಗೆರೆ ಸುತ್ತಮುತ್ತಲಿನ ಗ್ರಾಮಸ್ಥರು ಬೆಂಗಳೂರಿಗೆ ಕೆಲಸ ಕಾರ್ಯಕ್ಕೆ ಹೋಗಬೇಕಾದರೆ ಬಾಳ ಕಷ್ಟಕರವಾಗುತ್ತದೆ ಇದನ್ನು ಗಮನಿಸಿ ರಸ್ತೆ ಕಾಮಗಾರಿಯ ಕೆಆರ್ ಡಿಸಿಎಲ್ ಅವರಿಗೆ ಬಿಸಿ ಮುಟ್ಟಿಸಬೇಕೆಂದು ಗ್ರಾಮಸ್ಥರು ಸಹಕಾರದಿಂದ ಪ್ರತಿಭಟನೆ ಮಾಡುತಿದ್ದೇವೆ ಇನ್ನು ಮುಂದೆ ಆದರೂ ಕಾಮಗಾರಿ ಚುರುಕುಗೊಳ್ಳಬೇಕು ಕಳಪೆ ಆಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು

ಕೆಆರ್ ಡಿಸಿಎಲ್ ಟೀಮ್ ಲೀಡರ್ ನಾಜೀರ್ ಪ್ರತಿಭಟನೆಕಾರರೊಂದಿಗೆ ಮಾತನಾಡಿ ಕಾಮಗಾರಿ ವಿಳಂಬವಾಗುತ್ತಿರುವುದು ಕೆಇಬಿ ಎಲೆಕ್ಟ್ರಿಕ್ ಕಂಬ ಬದಲಾವಣೆ ಕೆಲವು ರೈತರಿಗೆ ನೋಟಿಸ್ ನೀಡಿದ್ದೇವೆ ದಾಖಲೆಗಳು ನೀಡಿಲ್ಲ ಅವರಿಗೆ ಹಣ ಸಂದಾಯವಾಗಿಲ್ಲ ಇದರಿಂದ ಸ್ವಲ್ಪ ವಿಳಂಬವಾಗುತ್ತಿದೆ ಎಂದು ಪ್ರತಿಭಟನೆಕಾರರಿಗೆ ಸಮಾಧಾನದ ಮಾತುಗಳು ಹೇಳಿದರು


ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳದಲ್ಲಿ ಗ್ರಾಮದ ಮುಖಂಡರುಗಳಾದ ಲಕ್ಷ್ಮಣ್ ಮೂರ್ತಿ ಲಕ್ಷ್ಮಣ್ ಗೌಡ ಶ್ರೀನಿವಾಸ ಗೌಡ. ಇತ್ತರಹಳ್ಳಿ ರಮೇಶ್. ಶ್ರೀನಾಥ್ ಗೌಡ.ನಾರಾಯಣಸ್ವಾಮಿ ಎ ವಿ ಆರ್ ಪ್ರಭಾಕರ್. ಆನಂದ್. ರಾಮಾಂಜನೇಯ ದಾಸ್. ಹಾಗೂ ಬೂದಿಗೆರೆ ಅಂದ್ರಹಳ್ಳಿ ಇತ್ತರಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು
ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಹಾಜರಿದ್ದರು.
ರಾಜ್ಯ ಸ್ವಹ ನಿರೀಕ್ಷಕ ಜನಾರ್ಧನ್ ರವರು ರಸ್ತೆಯ ಕಾಮಗಾರಿಯ ಬಗ್ಗೆ 15 ದಿನಗಳ ಕಾಲ ಗಡುವು ತೆಗೆದುಕೊಂಡಿದ್ದಾರೆ ಇದಕ್ಕೆ ಪ್ರತಿಭಟನೆಕಾರರು ಪ್ರತಿಭಟನೆ ಹಿಪ್ಪಡೆದರು

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *