ಚಳ್ಳಕೆರೆ ಸೆ.9 ರಾಷ್ಟ್ರೀಯ ಹೆದ್ದಾರಿಯಲ್ಲಿರಸ್ತೆ ದಾಟುವ ಕುರಿಗಳ ಹಿಂಡಿನ ಮೇಲೆ ಕಾರು ಹರಿದ ಪರಿಣಾಮ 12 ಕುರಿಗಳು ಸ್ಥಳದಲ್ಲೇ ಮೃತ ಪಟ್ಟಿದ್ದು ಹಲವು ಕುರಿಗಳು ಗಂಭೀರ ಗಾಯಗೊಂಡ ಘಟನೆ ನಡಿದಿದೆ. ಚಳ್ಳಕೆರೆ ತಾಲೂಕಿನ ಹೆಗ್ಗೇರೆ ಗೇಟ್ ನ ಸಮೀಪದಲ್ಲಿ ಹಿರಿಯೂರು ಕಡೆಯಿಂದ ಬರಯತ್ತಿದ್ದ ಕಾರು ಕುರಿಗಳ ಮೇಲೆ ಹಾದು ಹೋಗಿದ್ದರಿಂದ ಸ್ಥಳದಲ್ಲೇ 12 ಕ್ಕೂ ಕುರಿಗಳು ಮೃತಪಟ್ಟಿವೆ ಈ ಕುರಿಗಳು ಹೆಗ್ಗೆರೆ ಗ್ರಾಮದ ಈರಣ್ಣ, ಲಿಂಗಣ್ಣ,ಚಂದ್ರಪ್ಪ ಎಂಬುವವರಿಗೆ ಸೇರಿದ್ದುಹಲವು ಕುರಿಗಳು ಗಂಭೀರಗಾಯಗೊಂಡಿವೆ ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಕೆಲ ಕಾಲ ಪ್ರತಿಭಟನೆ ನಡೆಸಲು ಮುದ್ದಾಗಿದ್ದಾರೆ ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ತಿಳಿಗೊಳಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುರಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆ ಮಾಡಿದ್ದಾರೆ. ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
0 Comments