ರಸ್ತೆ ಅಪಘಾತದಲ್ಲಿ ಮೃತ ಪಟ್ಟ ಸಾರಿಗೆ ಬಸ್ ಚಾಲಕನ ಕುಟುಂಭಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

by | 03/12/22 | Uncategorized, ಪ್ರತಿಭಟನೆ

ಚಳ್ಳಕೆರೆ.
ಸಾರಿಗೆ ಸಚಿವ ಹಾಗೂ ಸಾರಿಗೆ ನಿಮಗದ ಅಧ್ಯಕ್ಷರ ತವರು ಜಿಲ್ಲೆಯಲ್ಲಿ ಸಾರಿಗೆ ಸಿಬ್ಬಂದಿ ಮೃತ ಪಟ್ಟು ಕುಟುಂಬ ಬೀದಿಗೆ ಬಿದ್ದರೂ ನ್ಯಾಯಕೊಡಿಸುವಲ್ಲಿ ವಿಫಲಾರಿದ್ದಾರೆ ಎಂದು ಕುಟುಂಬ್ಥರೊAದಿಗೆ ಅಪಘಾತನ ನಡೆದ ಸ್ಥಳದಲ್ಲಿ ಪ್ರತಿಭಟನೆ ನಡಿಸಿ ಅಕ್ರೋಶಪಡಿಸಿದರು.
ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿ ಸಮೀಪ ರಾಷ್ಟೊçÃಉ ಹೆದ್ದಾರಿಯಲ್ಲಿ ಹಾಕಿದ್ದ ಅವೈಜ್ಞಾನಿಕ ಮಣ್ಣಿನ ರಾಶಿಯಿಂದ ಸಾರಿಗೆ ಬಸ್ ಅಪಘಾತವಾಗಿ ಸಾವನ್ನಪ್ಪಿದ ಚಾಲಕ ಕುಟುಂಬಕ್ಕೆ ಹೆದ್ದಾರಿ ನಿರ್ವಹಣೆ ಗುತ್ತಿಗೆದಾರ ಹಾಗೂ ರಸ್ತೆ ಪ್ರಾಥಿಕಾರದವರು ಬೀದಿಗೆ ಬಿದ್ದ ಕುಟುಂಬಕ್ಕೆ ಪರಿಹಾರ ನೀಡುವಂತೆ ಕುಟಂಬಸ್ಥರು ಪ್ರತಿಭಟನೆ ನಡೆಸಿದರು.
ನವೆಂಬರ್ ೨೦ ರಂದು ಬಳ್ಳಾರಿಯಲ್ಲಿ ನಡೆದ ಎಸ್ ಟಿ ಸಮಾವೇಶಕ್ಕೆ ಕರೆದುಕೊಂಡು ಹೋಗಲಾಗಿದ್ದ ಸಾರಿಗೆ ಬಸ್ ನಗರದ ಹೊರವಲಯದ ಬಳ್ಳಾರಿ ರಸ್ತೆಯಲ್ಲಿ ಹಾಕದ್ದ ಮಣ್ಣಿನ ರಾಶಿಯಿಂದ ಅಪಘಾತವಾಗಿ ಸಾರಿಗೆ ಬಸ್ ಚಾಲಕ ಉಮೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ನಗರದ ರಹೀಂ ನಗರದ ಬಸ್ ಚಾಲಕ ಜೆ.ಎಸ್. ಉಮೇಶ್ ಸಾವನ್ನಪ್ಪಿದ್ದು ಇವರ ಇಬ್ಬರು ಪುಟ್ಟ ಗಂಡು ಮಕ್ಕಳು, ಹೆಂಡಿತಿ ಬೀದಿಗೆ ಬಿದ್ದಿದ್ದಾರೆ. ರಾಷ್ಟಿçÃಯ ಹೆದ್ದಾರಿಯಲ್ಲಿ ಹಾಕಿದ್ದ ಮಣ್ಣಿನ ರಾಶಿಯಿಂದ ಅಪಘಾತವಾಗಿದ್ದು ಕೂಡಲೇ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಪರಿಹಾರ ನೀಡುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಈ ವೇಳೆಮೃತನ ಪತ್ನಿ ದೀಪ, ವೆಂಕಟೇಶ್, ವಿಶ್ವನಾಥ, ಮುರುಳಿ, ವೆಂಕಟೇಶ್,ಮಾಜಿ ನಗರಸಭೆ ಸದಸ್ಯ ಆರ್.ಪ್ರಸನ್ನಕುಮಾರ್, ಅಂಜಿ, ಮಂಜುನಾಥ, ಮಣಿಕಂಠ ಸೇರಿದಂತೆಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಯಾವುದೇ ಅಹಿತಿಕರ ಘಟನೆ ನಡೆಯದಂತೆ ಸ್ಥಳದಲ್ಲಿ ಪಿಎಸ್‌ಐ ಗಳಾದ ಸತೀಶ್ ನಾಯ್ಕ, ತನಿಖೆಪಿಎಸ್‌ಐ ಬಸವರಾಜ್ . ಎಎಸ್‌ಐ ರವಿ,ಹಾಗೂ ಸಿಬ್ಬಂಬAದಿಗಳು ಸ್ಥಳದಲ್ಲಿದ್ದರು.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *