ಚಿತ್ರದುರ್ಗ ನಗರದ ರವಿ ಮಯೂರ ಹೋಟೆಲ್ ಮುಂಭಾಗದ ದಾವಣಗೆರೆ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ಎನ್.ಹೆಚ್–48 ರಸ್ತೆಯಲ್ಲಿ ಸುಮಾರು 60 ರಿಂದ 65 ವರ್ಷದ ಪುರುಷನ ಅನಾಮಧೇಯ ಶವ ಪತ್ತೆಯಾಗಿರುವ ಪ್ರಕರಣ 2022ರ ಸೆಪ್ಟೆಂಬರ್ 24ರಂದು ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಅನಾಮಧೇಯ ಪುರುಷನ ಚಹರೆ ಇಂತಿದೆ. ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಎತ್ತರ ಐದು ಅಡಿ ಎರಡು ಇಂಚು, ಬೀಳಿ ಮತ್ತು ಕಪ್ಪು ಕೂದಲು, ಬಿಳಿ ಬಣ್ಣದ ತುಂಬುತೋಳಿನ ಅಂಗಿ, ಬಿಳಿ ಬಣ್ಣದ ಸ್ಯಾಂಡೋಬನಿಯನ್, ಬಿಳಿ ಬಣ್ಣದ ಲುಂಗಿ, ಕಂದು ಬಣ್ಣದ ಚಡ್ಡಿ ಧರಿಸಿರುತ್ತಾರೆ. ಅಪರಿಚಿತ ಶವದ ವಾರಸುದಾರರು ಪತ್ತೆಯಾದಲ್ಲಿ ಚಿತ್ರದುರ್ಗ ಬಡಾವಣೆ ವೃತ್ತ ಪೊಲೀಸ್ ವೃತ್ತ ನಿರೀಕ್ಷಕು–9480803130 ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಬಡಾವಣೆ ವೃತ್ತ ಪೊಲೀಸ್ ವೃತ್ತ ನಿರೀಕ್ಷಕರು ತಿಳಿಸಿದ್ದಾರೆ.
ರವಿ ಮಯೂರ ಹೋಟೆಲ್ ಮುಂಭಾಗದಲ್ಲಿ ಪುರುಷನ ಅನಾಮಧೇಯ ಶವ ಪತ್ತೆ:
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments