ರಂಗಭೂಮಿ

ರವಿಚಂದ್ರ ಮಲ್ಕಾಪುರಗೆ ‘ ಅಕ್ಷರ ಸಿರಿ’ ರಾಜ್ಯ ಪ್ರಶಸ್ತಿ ಪ್ರಧಾನ

ರಾಯಚೂರು : ಮಾನ್ವಿ ತಾಲೂಕಿನ ರವಿಚಂದ್ರ ಮಲ್ಕಾಪುರ ಇವರಿಗೆ ಅವರ ನಿರಂತರ ಶೈಕ್ಷಣಿಕ ನಾವಿನ್ಯ ಚಟುವಟಿಕೆಗಳನ್ನು , ಮಕ್ಕಳಲ್ಲಿ ಸೃಜನಶೀಲತೆಯನ್ನು ಹೆಚ್ಚಿಸುವ ಚಟುವಟಿಕೆಗಳು, ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ,ಮಕ್ಕಳ ನಾಟಕ, ಮಕ್ಕಳ ಸಾಹಿತ್ಯ ಸೇವೆ ಗಮನಿಸಿ ‘ಅಕ್ಷರ’ ಸಿರಿ ರಾಜ್ಯ ಪ್ರಶಸ್ತಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ವತಿಯಿಂದ ಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ಅವರು ತಿಪಟೂರಿನಲ್ಲಿ ನಡೆದ ರಾಜ್ಯ ಶೈಕ್ಷಣಿಕ ಕಾರ್ಯಗಾರದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.

15 ವರ್ಷಗಳಿಂದ ಮಕ್ಕಳಿಗಾಗಿ ಮಕ್ಕಳ ಸಂಪಾದಕೀಯದ ಮಕ್ಕಳ ಮಂದಾರ ಶಾಲಾ ಪತ್ರಿಕೆ ಸಂಪಾದನೆ ಮತ್ತು ಉಚಿತ ಪ್ರಕಟಣೆ, ಮಕ್ಕಳಿಗಾಗಿ ಹಲವಾರು ನಾಟಕಗಳು ,ಸ್ಥಳೀಯ ಜಾನಪದ ಸಂಪಾದನೆ, ಮಕ್ಕಳ ಹಕ್ಕುಗಳ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆ ಕುರಿತು ಜಾಗೃತಿ, ಸಂಪ್ರದಾಯಿಕ ಚಿತ್ರಕಲೆಗಳೊಂದಿಗೆ ಸೃಜನಶೀಲ ಕಲಿಕೆ, ಜನಪದ ಅನುಸಂಧಾನ ಹೀಗೆ ಹಲವಾರು ನಾವಿನ್ಯ ಶೈಕ್ಷಣಿಕ ಪ್ರಯೋಗಗಳನ್ನು ಇವರು ಮಲ್ಕಾಪುರ ಶಾಲೆಯಲ್ಲಿ 15 ವರ್ಷಗಳಿಂದ ಮಾಡಿದ್ದು ರಾಜ್ಯದ ಶಿಕ್ಷಣ ತಜ್ಞರು, ಶಿಕ್ಷಣ ಪ್ರೇಮಿಗಳು , ಶಿಕ್ಷಣ ಇಲಾಖೆ ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡರು, ಚಂದ್ರಶೇಖರ್ ನುಗ್ಲಿ, ರಾಯಚೂರು ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ರೆಡ್ಡಿ ಅವರು, ನೌಕರ ಸಂಘದ ಕಾರ್ಯದರ್ಶಿಗಳಾದ ಮಾಂತೇಶ ಬಿರಾದರ್, ಮಸ್ಕಿ ತಾಲೂಕಿನ ಅಧ್ಯಕ್ಷರಾದ ಬಾಲಸ್ವಾಮಿ ಕೊಡ್ಲಿ, ಮಂಜುನಾಥ ಹಾಲಾಪುರ್, ಅಜರುದ್ಧಿನ್ , ಹುಸೇನ್ ಸಾಬ್, ಶಿಕ್ಷಕ ಸಂಘದ ಹಲವಾರು ಮಿತ್ರರು, ಮಲ್ಕಾಪುರದ ಪಾಲಕ ಪೋಷಕರು ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು , ಮಾನ್ವಿ ತಾಲೂಕಿನ ಶಿಕ್ಷಕರ ಸಂಘ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದರು.

#SuddiTV #raichur #teacher #LatestNews #ravichandra #BreakingNews B C Nagesh Tiptur #NewsUpdate #KannadaNewsChannel #sudditvdigital #KannadaNews Raviraj Sagar

ಕಾಂಗ್ರೆಸ್ ಅಭ್ಯರ್ಥಿಯಾಗಲು ಕೆಪಿಸಿಸಿಗೆ ಅರ್ಜಿ ಸಲ್ಲಿಸುವುದಕ್ಕಾಗಿ ಇಟ್ಟಿದ್ದ ₹ 2 ಲಕ್ಷವನ್ನು ವಾಕ್‌ ಮತ್ತು ಶ್ರವಣದೋಷ ಇರುವ ಬಡ ಕುಟುಂಬದ ಮದುವೆಗೆ ನೀಡುವ ಮೂಲಕ ತೇಜಸ್ವಿ ಪಟೇಲ್‌ ಮಾನವೀಯತೆ ಮೆರೆದಿದ್ದಾರೆ.

ದಾವಣಗೆರೆ: ಚನ್ನಗಿರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲು ಕೆಪಿಸಿಸಿಗೆ ಅರ್ಜಿ ಸಲ್ಲಿಸುವುದಕ್ಕಾಗಿ ಇಟ್ಟಿದ್ದ ₹ 2 ಲಕ್ಷವನ್ನು ವಾಕ್‌ ಮತ್ತು ಶ್ರವಣದೋಷ ಇರುವ ಬಡ ಕುಟುಂಬದ ಮದುವೆಗೆ ನೀಡುವ ಮೂಲಕ ತೇಜಸ್ವಿ ಪಟೇಲ್‌ ಮಾನವೀಯತೆ ಮೆರೆದಿದ್ದಾರೆ.
ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿರುವ ತೇಜಸ್ವಿ ವಿ. ಪಟೇಲ್‌ ಅವರು ಜಿಲ್ಲಾ ಪಂಚಾಯಿತಿಗೆ ಕಾರಿಗನೂರು ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದಿದ್ದರು. ಅದರ ಅವಧಿ ಮುಗಿದಿದೆ. ಈಗ ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದು, ಅರ್ಜಿ ಸಲ್ಲಿಸಲು ಸೋಮವಾರ ಬೆಂಗಳೂರಿಗೆ ಹೊರಡಬೇಕಿತ್ತು. ಆದರೆ, ₹ 2 ಲಕ್ಷವನ್ನು ಕೆಪಿಸಿಸಿಯನ್ನು ಒಪ್ಪಿಸಿ ಬಡ ಕುಟುಂಬಕ್ಕೆ ನೀಡಲು ನಿರ್ಧರಿಸಿದರು.

ಚನ್ನಗಿರಿ ತಾಲ್ಲೂಕು ಬೆಳಲಗೆರೆ ಗ್ರಾಮದ ಅಖಾಡದ ರಂಗಪ್ಪ ಮತ್ತು ಯಲ್ಲಮ್ಮಗೆ ಒಬ್ಬ ಪುತ್ರ ಸೇರಿ 8 ಮಕ್ಕಳು. ಪುತ್ರ ಮೃತಪಟ್ಟಿದ್ದಾರೆ. ಉಳಿದ ಏಳು ಹೆಣ್ಣುಮಕ್ಕಳಲ್ಲಿ ಐದು ಮಂದಿಗೆ ವಾಕ್‌ ಮತ್ತು ಶ್ರವಣದೋಷ ಇದೆ.ಇತ್ತೀಚೆಗೆ ರಂಗಪ್ಪ ಅವರೂ ನಿಧನರಾಗಿದ್ದರು. ಮಾತು ಬರುವ ಇಬ್ಬರು ಹೆಣ್ಣುಮಕ್ಕಳು ಮತ್ತು ಮಾತು ಬಾರದ ಇಬ್ಬರು ಹೆಣ್ಣುಮಕ್ಕಳಿಗೆ ಮದುವೆಯಾಗಿದೆ. ಉಳಿದ ಮೂವರಲ್ಲಿ ಕೆಂಚಮ್ಮ ಎಂಬವರಿಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗ ಸಮೀಪ ವಡ್ಡಳ್ಳಿ ಮಂಜುನಾಥ್ ಎಂಬ ವಾಕ್ ದೋಷ ಇರುವ ಯುವಕ ಮಂಜುನಾಥ್‌ ಜತೆಗೆ ಮದುವೆ ಮಾಡಲು ಏಳು ತಿಂಗಳ ಹಿಂದೆ ನಿರ್ಧರಿಸಿದ್ದರು. ಆದರೆ, ಈ ಬಡ ಕುಟುಂಬಹಣ ಹೊಂದಿಸಲಾರದೇ ಮದುವೆಯನ್ನು ಮುಂದೂಡುತ್ತಾ ಬಂದಿತ್ತು.

‘ನನ್ನಲ್ಲಿಗೆ ಬೇರೆ ಸಮಸ್ಯೆಯನ್ನು ಹೇಳಿಕೊಳ್ಳಲು ಬಂದಿದ್ದರು. ಆಗ ಈ ಮದುವೆಯ ವಿಚಾರ ತಿಳಿಸಿದ್ದರು. ಇಬ್ಬರೂ ವಾಕ್‌ದೋಷ ಇರುವವರು ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಆಗಿದ್ದರಿಂದ ಸಮಾಜ ಕಲ್ಯಾಣ ಇಲಾಖೆ, ಬುಡಕಟ್ಟು ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೀಗೆ ಯಾವುದಾದರೂ ಒಂದು ಇಲಾಖೆಯಿಂದ ಸಹಾಯ ಒದಗಿಸುವ ಭರವಸೆ ನೀಡಿದ್ದೆ. ಅದನ್ನು ನಂಬಿ ಮದುವೆಗೆ ದಿನ ನಿಗದಿ ಮಾಡಿದ್ದರು. ಆದರೆ, ಇಬ್ಬರೂ ಒಂದೇ ಸಮುದಾಯದವರಾದರೆ ಮದುವೆಗೆ ಸಹಾಯಧನ ಸಿಗುವುದಿಲ್ಲ ಎಂದು ಗೊತ್ತಾಯಿತು. ನನ್ನ ಮೇಲೆ ವಿಶ್ವಾಸ ಇಟ್ಟು ಮದುವೆ ನಿಗದಿ ಮಾಡಿದ್ದರಿಂದ ನನ್ನ ಮೇಲೆ ಜವಾಬ್ದಾರಿ ಬಿತ್ತು’ ಎಂದು ತೇಜಸ್ವಿ ಪಟೇಲ್‌ ತಿಳಿಸಿದರು.

‘ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ₹ 2 ಲಕ್ಷದ ಡಿಡಿ ಜತೆಗೆ ಕೆಪಿಸಿಸಿಗೆ ಅರ್ಜಿಸ ಸಲ್ಲಿಸಬೇಕಿತ್ತು. ಕೆಪಿಸಿಸಿಗೆ ₹ 2 ಲಕ್ಷ ಬಹಳ ಸಣ್ಣಮೊತ್ತ. ಈ ಕುಟುಂಬಕ್ಕೆ ಅದು ಭಾರಿ ದೊಡ್ಡ ಮೊತ್ತ. ಅದಕ್ಕಾಗಿ ಈ ಡಿಡಿಯನ್ನು ಈ ಕುಟುಂಬಕ್ಕೆ ನೀಡುತ್ತೇನೆ. ಕೆಂಚಮ್ಮಗೆ ನೀಡಿರುವ ಡಿಡಿಯನ್ನೇ ಕೆಪಿಸಿಸಿ ಪರಿಗಣಿಸಬೇಕು ಎಂದು ಮನವಿ ಮಾಡುತ್ತೇನೆ’ ಎಂದು ವಿವರಿಸಿದರು.

ಕೆಪಿಸಿಸಿ ಈ ಕಾರ್ಯಕ್ಕೆ ಸಹಮತ ವ್ಯಕ್ತಪಡಿಸುತ್ತದೆ ಎಂಬ ವಿಶ್ವಾಸ ಇದೆ. ಕೆಪಿಸಿಸಿ ಒಪ್ಪಿಕೊಂಡರೆ ಬಡಕುಟುಂಬಕ್ಕೆ ಕೆಪಿಸಿಸಿಯಿಂದ ಸಹಾಯ ಮಾಡಿದಂತೆ ಆಗುತ್ತದೆ. ಸಹಮತ ವ್ಯಕ್ತಪಡಿಸಿದರೆ ಆಗ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಕೈಯಿಂದ ಅಧಿಕೃತವಾಗಿ ಮತ್ತೊಮ್ಮೆ ಡಿಡಿ ಹಸ್ತಾಂತರ ಮಾಡಲಾಗುವುದು. ಬಡವರಿಗೆ ಜೀವನ ಕಟ್ಟಿಕೊಡುವ ಕಾರ್ಯ ಇದಾಗಿದೆ ಎಂದು ತಿಳಿಸಿದರು.

‘ಕೆಪಿಸಿಸಿ ಒಪ್ಪದೇ ಹೋದರೆ ಜನರಿಂದ ಹಣ ಸಂಗ್ರಹಿಸಿ ₹ 2 ಲಕ್ಷ ಭರ್ತಿ ಮಾಡಲಾಗುವುದು’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

‘ತಾಯಿ ಮನೆಯೂ ಬಿದ್ದಿದೆ. ಮದುವೆ ಮಾಡಲು ಬಹಳ ಕಷ್ಟ ಆಗಿತ್ತು. ತೇಜಸ್ವಿ ಪಟೇಲ್‌ ನಮ್ಮ ನೆರವಿಗೆ ಬಂದಿದ್ದಾರೆ. ನ.27ರಂದು ದೇವರಾಜ ಅರಸು ಬಡಾವಣೆಯ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಲಿದೆ’ ಎಂದು ಕೆಂಚಮ್ಮ ಅವರ ಅಕ್ಕಂದಿರಾದ ಲಕ್ಷ್ಮಮ್ಮ ಮತ್ತು ಪ್ರೇಮಕ್ಕ ತಿಳಿಸಿದರು.

ಟಿ. ಎಸ್.‍ ಲೋಹಿತಾಶ್ವ ನಿಧನ

ಪ್ರಾಧ್ಯಾಪಕರಾಗಿ, ರಂಗಭೂಮಿ – ಕಿರುತೆರೆ – ಚಲನಚತ್ರ ಕಲಾವಿದರಾಗಿ ಮತ್ತು ಬರಹಗಾರರಾಗಿ ಹೀಗೆ ಬಹುಮುಖಿಯಾಗಿ ಹೆಸರಾಗಿದ್ದ ಡಾ.ಟಿ. ಎಸ್. ಲೋಹಿತಾಶ್ವ ಇಂದು ನಿಧನರಾಗಿದ್ದಾರೆ.

ಪ್ರಸಿದ್ಧ ‘ಮುಖ್ಯಮಂತ್ರಿ’ ನಾಟಕವನ್ನು ಹಿಂದಿಯಿಂದ ಕನ್ನಡಕ್ಕೆ ರೂಪಾಂತರಿಸಿದ ಕೀರ್ತಿ ಲೋಹಿತಾಶ್ವ ಅವರದ್ದು.

ಲೋಹಿತಾಶ್ವ ಅವರು ತುಮಕೂರಿನ ತೊಂಡಗೆರೆಯಲ್ಲಿ 1942ರ ಆಗಸ್ಟ್ 5ರಂದು ಜನಿಸಿದರು. ತಂದೆ ಸಿದ್ಧವೀರಪ್ಪ. ತಾಯಿ ಭದ್ರಮ್ಮ. ಇಂಗ್ಲೀಷ್ ಸಾಹಿತ್ಯದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಹೆಚ್.ಡಿ ಸಾಧನೆ ಮಾಡಿದರು. ಮುಂದೆ 34 ವರ್ಷಗಳ ಸುದೀರ್ಘಕಾಲ ತುಮಕೂರು, ಚಿತ್ರದುರ್ಗ ಮತ್ತು ಬೆಂಗಳೂರಿನಲ್ಲಿ ಪ್ರಾಧ್ಯಾಪಕರಾಗಿ ದುಡಿದು ನಿವೃತ್ತರಾಗಿದ್ದರು. ನಿವೃತ್ತಿ ಎಂದು ಸುಮ್ಮನಿರದೆ ಕೃಷಿಯಲ್ಲಿಯೂ ನಿರತರಾಗಿದ್ದರು.

ಲೋಹಿತಾಶ್ವ ಅವರ ಬರಹಗಳಲ್ಲಿ ಬಣ್ಣದ ತಗಡಿನ ತುತ್ತೂರಿ, ಅಕ್ಕಡಿ ಸಾಲು, ಹೊತ್ತು ಹೋಗುವ ಮುನ್ನ (ಕಾವ್ಯ), ಮಾಡುಸಿಕ್ಕದಲ್ಲ, ಎ ಮಿಲಿಯನ್ ಮಾನ್ಷನ್ಸ್, ಮುಖ್ಯಮಂತ್ರಿ, ಸಲ್ಲಾಪ, ಸಂತೆಯಲ್ಲಿ ನಿಂತ ಕಬೀರ (ಅನುವಾದ), ಸಿದ್ದಾಂಗನೆಯ ಸಿದ್ಧಪುರುಷ ಮುಂತಾದವು ಸೇರಿವೆ. ಇವರ ಮೇಲೆ ಗಾಢ ಪ್ರಭಾವ ಬೀರಿದವರು ಬಂಗಾಳಿ ಸಾಹಿತಿ ಶರತ್‍ಚಂದ್ರ ಚಟರ್ಜಿ. ಹೀಗಾಗಿ ಸಿನಿಮಾ ಕಲಾವಿದರಾಗಿರುವ ಇವರ ಪುತ್ರರ ಹೆಸರು ಶರತ್ ಲೋಹಿತಾಶ್ವ.

ಲೋಹಿತಾಶ್ವ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆಗಳಲ್ಲಿ ನಿರಂತವಾಗಿ ದುಡಿದಿದ್ದಾರೆ.

27 ಮಾವಳ್ಳಿ ಸರ್ಕಲ್, ಮುಖ್ಯಮಂತ್ರಿ, ಬೆಳ್ಚಿ, ಭಾರತ ದರ್ಶನ, ಚಸ್ನಾಳ ಟ್ರಾಜಿಡಿ, ದಂಗೆಯ ಮುಂಚಿನ ದಿನಗಳು, ಹುಲಿಯ ನೆರಳು, ಹುತ್ತವ ಬಡಿದರೆ, ಕತ್ತಲೆಯ ದಾರಿ ದೂರ, ಕುಬಿ ಮತ್ತು ಇಯಾಲ, ಮೆರವಣಿಗೆ, ಮೋಟೆ ರಾಮನ ಸತ್ಯಾಗ್ರಹ, ಪಂಚಮ ಮುಂತಾದವು ಲೋಹಿತಾಶ್ವ ಅವರು ಪಾತ್ರ ನಿರ್ವಹಿಸಿದ ಪ್ರಸಿದ್ಧ ನಾಟಕಗಳಲ್ಲಿ ಸೇರಿವೆ.

ಲೋಹಿತಾಶ್ವ ಸುಮಾರು 650 ಚಿತ್ರಗಳಲ್ಲಿ ನಟಿಸಿದ್ದು ಅವುಗಳಲ್ಲಿ ಅಭಿಮನ್ಯು, ಎ.ಕೆ. 47, ದಾದಾ, ದೇವಾ, ಎಲ್ಲರಂಥಲ್ಲ ನನ್ನ ಗಂಡ, ಏಕಲವ್ಯ, ಹೊಸ ನೀರು, ಇಂದಿನ ರಾಮಾಯಣ, ಕಲಾವಿದ, ನೀ ಬರೆದ ಕಾದಂಬರಿ, ಒಂದು ಊರಿನ ಕಥೆ, ಪ್ರೀತಿ ವಾತ್ಸಲ್ಯ, ಸಾಂಗ್ಲಿಯಾನ, ಸಮಯದ ಗೊಂಬೆ, ಸಿಂಹಾಸನ ಮುಂತಾದವು ಸೇರಿವೆ.

ಲೋಹಿತಾಶ್ವ ಅವರು ಕಿರುತೆರೆಯಲ್ಲಿ ಎಂ. ಎಸ್. ಸತ್ಯು ಅವರ ಅಂತಿಮ ರಾಜಾ, ಪ್ರತಿಧ್ವನಿ; ಗಿರೀಶ್ ಕಾಸರವಳ್ಳಿ ಅವರ ಗೃಹಭಂಗ, ಶಂಕರನಾಗ್ ಅವರ ಮಾಲ್ಗುಡಿ ಡೇಸ್, ಜಿ. ವಿ. ಅಯ್ಯರ್ ಅವರ ನಾಟ್ಯರಾಣಿ ಶಾಂತಲಾ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರು..

ಲೋಹಿತಾಶ್ವ ಅವರಿಗ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಗೌರವ ಮತ್ತು ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.

ಲೋಹಿತಾಶ್ವ 2022ರ ನವೆಂಬರ್ 8ರಂದು ನಿಧನರಾಗಿದ್ದಾರೆ. ಈ ಮಹಾನ್ ಚೇತನಕ್ಕೆ ನಮನ.

(ನಮ್ಮ ‘ಕನ್ನಡ ಸಂಪದ’ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ ‘ಸಂಸ್ಕೃತಿ ಸಲ್ಲಾಪ ತಾಣವಾದ www.sallapa.comನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.)

ರೀಮತಿ ಶಾಂತಾದೇವಿ .ಮ. ಬಣಕಾರ ದತ್ತಿನಿಧಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಮಹಿಳೆಯರು “ವಯೋಮಾನ ಮತ್ತು ಫಲವತ್ತತೆ”ಬಗ್ಗೆ ಹೆಚ್ಚಿನ ಮಹತ್ವ ನೀಡುವಂತೆ ಡಾ: ವನಿತಾ ಮೆಟಗುಡ್ಡ ಕರೆ

ಬೆಳಗಾವಿ 07: ಮಹಿಳೆಯರು 25 ರಿಂದ 35 ವರ್ಷದ ವಯಸ್ಸಿನವರೆಗೆ ಗರ್ಬಿಣಿಯರಾಗಿ ಮಕ್ಕಳ ಹೆರಿಗೆ ಮಾಡಿಸಿಕೊಳ್ಳುವುದು ಆರೋಗ್ಯ ಮತ್ತು ಪಲವತ್ತೆಯ ದೃಷ್ಠಿಯಿಂದ ಅತ್ಯುತ್ತಮವಾಗಿದ್ದು ಆದರೆ ಇಂದಿನ ಪರಿಸ್ಥಿತಿಯಲ್ಲಿ ಮಹಿಳೆಯರು ಕೆಲಸದ ಒತ್ತಡ ಹಾಗೂ ಇನ್ನೀತರ ಕಾರಣಗಳಿಂದಾಗಿ ಮದುವೆ ತಡವಾಗಿ ಆಗುವುದು ಅದರ ಜೊತೆಗೆ ಮಕ್ಕಳ ಪಲವತ್ತತೆ ಬಗ್ಗೆಯೂ ಸಹ ಅಸಡ್ಡೆ ತೋರಿಸುತ್ತಿರುವುದರಿಂದ ಹೆಚ್ಚಿನ ತಾಯಂದಿರು ಕೃತಕ ಗರ್ಭದಾರಣೆ ಸಲುವಾಗಿ ಐ.ವಿ.ಎಫ್. ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಇದರ ಪರಿಣಾಮ ಪ್ರತಿ ವರ್ಷ ಶೇ.3% ರಷ್ಟು ಚಿಕಿತ್ಸೆ ಪ್ರಮಾಣ ಹೆಚ್ಚಾಗುತ್ತಿದೆ. ಇದು ಕಳವಳಕಾರಿ ವಿಷಯವಾಗಿದೆ ಎಂದು ನಗರದ ಖ್ಯಾತ ಸ್ತಿçರೋಗ ತಜ್ಞೆ ಡಾ: ವನಿತಾ ಮೆಟಗುಡ್ಡ ಕಳವಳ ವ್ಯಕ್ತ ಪಡಿಸಿದರು.
ಅವರು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಿಂದ ನಗರದ ಆಂಜನೇಯ ನಗರದ ಎಸ್.ಜಿ.ವಿ.ಮಹೇಶ ಪಿ.ಯು.ಕಾಲೇಜಿನಲ್ಲಿ ಶ್ರೀಮತಿ ಶಾಂತಾದೇವಿ .ಮ. ಬಣಕಾರ ದತ್ತಿನಿಧಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ವಯೋಮಾನ ಮತ್ತು ಫಲವತ್ತತೆ ಕುರಿತು ಮಾರ್ಮಿಕವಾಗಿ ತಿಳಿಸುತ್ತಾ ಪ್ರಸ್ತುತ ದಿನಗಳಲ್ಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನಾಂಗ ಉನ್ನತ ಶಿಕ್ಷಣ,ಉದ್ಯೋಗ,ಆರ್ಥಿಕ,ಸ್ವಾತಂತ್ರದ ಕಾರಣ ಮಕ್ಕಳನ್ನು ಪಡೆಯುವುದು ವಿಳಂಬವಾಗುತ್ತಿದೆ.ವಯಸ್ಸು ಫಲವತ್ತತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.ವಯಸ್ಸು ಹೆಚ್ಚಾದಂತೆ ಅಂಡಾAಶದ ಶಕ್ತಿ ಕಡಿಮೆಯಾಗುವುದು. ಸುಮಾರು 2500 ಅಂಡಾAಶಗಳಿರುತ್ತವೆ. ಋತುಬಂಧದ ಹಂತಗಳು ಸೇರಿ ಮೋನೋಪಾಸ್ ಗರ್ಭಾಶಯ ತೀವ್ರವಾಗಿ ಕ್ಷೀಣಿಸುತ್ತದೆ. ಋತುಬಂಧ ನಾಲ್ಕರಿಂದ ಐವತ್ತು ವರ್ಷದವರೆಗೆ ಮೋನೋಪಾಸ್ ನಂತರ ಅಂಡಾAಶದ ವೈಫಲ್ಯ ಕಾಡುತ್ತಿವೆ. ಪರಿಹಾರ ಕ್ರಮವಾಗಿ ಎಚ್.ಆರ್. ಟಿ, ಐ.ವಿ.ಪಿ. ಮತ್ತು ದಾನಿ ಮೊಟ್ಟೆಯೊಂದಿಗೆ ಎಲೆಕ್ಟ್ರಿಕ್ ಎಗ್ ಪ್ರಿಚಿಂಗ್ ಮುಂತಾದ ಚಿಕಿತ್ಸೆಗಳಿಗೆ ಒಳಗಾಗಬೇಕಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ಶ್ರೀಮತಿ. ಮಂಗಲಾ ಮೆಟಗುಡ್ ಅವರು ಸಾಹಿತ್ಯ ಪರಿಷತ್ತಿನಲ್ಲಿಂದು ಲೇಖನ, ಕಥೆ,ಕವನ,ಸಾಹಿತ್ಯ ಕಾರ್ಯಕ್ರಮಗಳಷ್ಟೇ ಅಲ್ಲದೆ ಆರೋಗ್ಯಕ್ಕೆ ಸಂಬAಧಿಸಿದ ವೈಜ್ಞಾನಿಕ ಸಾಹಿತ್ಯ ಕಾರ್ಯಕ್ರಮಗಳನ್ನು ಉಪನ್ಯಾಸದ ರೂಪದಲ್ಲಿ ನಡೆಸುತ್ತಿದ್ದೇವೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಸಲಹೆಯನ್ನು ನೀಡಿದರು.

“ಕಾನನದ ಸಿರಿ”ಎಂಬ ಕೃತಿಗಾಗಿ ಶ್ರೀಮತಿ.ಶಬಾನಾ. ಅಣ್ಣಿಗೇರಿಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಹೇಶ ಪಿ. ಯು.ಕಾಲೇಜಿನ ಪ್ರಾಚಾರ್ಯ ಶ್ರೀ.ಎಂ.ವಿ ಭಟ್ ರವರು ಪಾಲ್ಗೊಂಡಿದ್ದರು..
ಕಾರ್ಯಕ್ರಮದಲ್ಲಿ ಖಾನಾಪುರ ತಾಲೂಕಾ ಕ.ಸಾ.ಪ.ಅಧ್ಯಕ್ಷರಾದ ಬಸವಪ್ರಭು ಹಿರೇಮಠ,ಬೆಳಗಾವಿ ತಾಲೂಕಾ ಕ.ಸಾ.ಪ ಅಧ್ಯಕ್ಷರಾದ ಸುರೇಶ ಹಂಜಿ,ಶಿವಾನAದ ತಲ್ಲೂರ,ಬಸವರಾಜ ಮಠಪತಿ,ಶ್ರೀಮತಿ.ಸುಮಾ.ಎಸ್.ಬೇವಿನಕೊಪ್ಪಮಠ, ಜಯಶೀಲಾ ಬ್ಯಾಕೋಡ, ನಾಗರತ್ನ ಅರಳಿಮಟ್ಟಿ, ಗುಜನಾಳ ಸುಪ್ರಭಾತ.ಬೇಟಗಾರ ಪ್ರಣೋತಿ ಪಾಟೀಲ,ಲಕ್ಷ್ಮೀ ಹಂಚಿನಮನಿ,ಅಡಿವೆಪ್ಪಾ ಇಟಗಿ ಹಾಗೂ ಕಾಲೇಜಿನ ಅನೇಕ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ದತ್ತಿ ಪರಿಚಯವನ್ನು ಭಾರತಿ ಮಠದ ಮಾಡಿದರು. ಎಂ.ವೈ.ಮೆಣಸಿನಕಾಯಿ ಕಾರ್ಯಕ್ರಮ ನಿರೂಪಿಸಿದರು. ಪ್ರಭುದೇವ ಹಿರೇಮಠ ವಂದಿಸಿದರು.

ಶ್ರೀಮತಿ ಆಶಾ ಕಡಪಟ್ಟಿ ಗೆ ಕಸಾಪ ಸನ್ಮಾನ

ಬೆಳಗಾವಿ 07 : ಡಿಸೆಂಬರ್ 12ರಂದು ಅರಳಿಕಟ್ಟಿ ಗ್ರಾಮದಲ್ಲಿ ನಡೆಯಲಿರುವ ಬೆಳಗಾವಿ ತಾಲೂಕಿನ 8ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಆಶಾ ಕಡಪಟ್ಟಿ ( ಮಠ ) ರವರನ್ನು ಅವರ ಮನೆಗೆ ಬೆಳಗಾವಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಪಧಾಧಿಕಾರಿಗಳು ಭೇಟಿ ನೀಡಿ ಸನ್ಮಾನಿಸಿದರು. . ಮೊದಲಿಗೆ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನಾಗಪ್ಪ ಕರವಿನಕೊಪ್ಪ ಸ್ವಾಗತಿಸಿದರು ತಾಲೂಕ ಅಧ್ಯಕ್ಷರಾದ ಸುರೇಶ ಹಂಜಿ, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ಎಂ ವೈ ಮೆಣಸಿನಕಾಯಿ, ಶ್ರೀ ಶಿವಾನಂದ ಹಲಕರಣಿಮಠ, ಶ್ರೀ ಎನ್ ಆರ್ ಮನೆನ್ನಿ, ಸುರೇಶ್ ಪಾರ್ವತಿ, ಎಂ ಜಿ ಪಾಟೀಲ್, ಗಿರೀಶ್ ಜಗಜಂಪಿ, ಶ್ರೀಮತಿ ರಾಜನಂದ ಘಾರ್ಗಿ ಮೊದಲಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ಡಾ.ಎಡಿ ಇಟಗಿ ವಂದಿಸಿದರು.

You cannot copy content of this page