ಚಳ್ಳಕೆರೆ
ಚಲನಚಿತ್ರನಟ ಡಾ. ಶಿವರಾಜ್‌ಕುಮಾರ್ ಟಿಸಿರುವ೧೨೫ ನೇ ವೇದ ಸಿನಿಮಾ ಸಂಭ್ರಮಾಚರಣೆಯಲ್ಲಿ ಡಾ.ಶಿವರಾಚಿತ್ರ ತಂಡದೊAದಿಗೆ ಬುಧವಾರ ನಗರಕ್ಕೆ ಅಗಮಸಿದ್ದರು.
ನಗರದ ಕೆಇಬಿ ಕಚೇರಿ ಮುಂಭಾಗದ ಪುನಿತ್ ರಾಜ್ ಕುಮಾರ್ ವೃತ್ತದಲ್ಲಿ ಪುನಿತ್ ರಾಜ್ ಕುಮಾರ್ ಭಾವ ಚಿತ್ರಕ್ಕೆ ಪುಸ್ಪನಮನ ಸಲ್ಲಿಸಿದರು. ಈ ವೇಳೆ ಫ್ಯಾನ್ಸ್ ಕಿಕ್ಕಿರಿದು ಸೇರಿದ್ದು ಸೇರಿದ್ದು ಶಿವರಾಜ್ ಕುಮಾರ್ ಅಭಿನಂತೆಯ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಇದೇವೇಳೆ ಶಿವರಾಜ್ ಕುಮಾರ್ ಮಾತನಾಡಿ ೧೨೫ ನೇ ವೇದ ಚಿತ್ರವನ್ನು ಎ.ಹರ್ಷ ನಿರ್ದೇಶನ ಮಾಡಿದ್ದು, ವೇದ ಚಿತ್ರದ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರಕ್ಕೆ ಕರ್ನಾಟಕ ಅಲ್ಲದೆ ತಮಿಳುನಾಡು, ಮುಂಬೈನಲ್ಲಿ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿದೆ ಇದು ನಮಗೆ ತುಂಬಾ ಖುಷಿ ತಂದು ಕೊಟ್ಟಿದೆ. ಎಲ್ಲಾರೂ ಸಿಮಿಮಾ ಥೇಟರ್ ಹೋಗಿ ವೀಕ್ಷಣೆ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರೋತ್ಸಹ ನೀಡ ಬೇಕು.
ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿದೇವರುಗಳು ಸೇರಿರುವುದುನನಗೆ ಸಂತೋಷವಾಗಿದೆ ಇದೇ ರೀತಿ ಪ್ರೋತ್ಸ ನೀಡುವಂತೆ ;ಮನವಿ ಮಾಡಿಕೊಂಡರು.
ತೆರದ ವಾಹನದಲ್ಲಿ ಮೆರವಣಿಗೆಯಲ್ಲಿ ಪ್ರಮುಖ ರಸ್ತೆಯ ಮೂಲಕ ವೇದ ಚಲನ ಚಿತ್ರ ಪ್ರದರ್ಶವಾಗುತ್ತಿರುವ ರಾಮಕೃಷ್ಣ ಚಿತ್ರಮಂದಿರಕ್ಕೆ ತೆರಳಿ ಚಿತ್ರ ವೀಕ್ಷಣೆ ಹಾಗೂ ಪ್ರೇಕ್ಷರಿಗೆ ಅಭಿನಂಧನೆ ಸಲ್ಲಿಸಿ ಬಳ್ಳಾರಿಯತ್ತ ಪ್ರಮಾಣ ಬೆಳೆಸಿದರು.
ನಟ ಶಿವರಾಜು ಕುಮಾರ್ ನೋಡಲು ಮುಗಿಬಿದ್ದ ಅಭಿಮಾನಿಗಳು ತಳ್ಳಾಡ ನೂಕಾಟ ನಡೆಸಿದರು ಜನದಟ್ಟಣೆಯಲ್ಲಿ ನಿಯಂತ್ರಿಸಲು ಪೊಲೀಸರು ಹರಸಹಾಸ ಪಡುವ ಜತೆಗೆ ಕೆಲವರಿ ಲಾಠಿ ರುಚಿ ತೋಡಿಸಿದ ಪ್ರಸಂಗ ಜರುಗಿತು.
ಈ ವೇಳೆ ಶಾಸಕ ಟಿ.ರಘುಮೂರ್ತಿ ಶಾಲು ಪುಷ್ಪಹಾರ ಹಾಕಿ ನಟ ಶಿವರಾಜು ಕುಮಾರ್ ಹಾಗೂ ವೇದ ಚಿತ್ರ ತಂಡಕ್ಕೆ ಶುಭಕೋರಿದರು.
ಯ್ಯಾಟ್ರಿಕ್ ಹಿರೋ ಚಲನ ಚಿತ್ರ ನಟ ಡಾ.ಶಿವರಾಜ್ ಕುಮಾರ್ ನೋಡಲು ಅಭಿಮಾನಿಗಳ ನೂಕು ನುಗ್ಗಲು
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments