ಯುವಜನತೆ ಜೀವನದಲ್ಲಿ ಮಹಾಋಷಿ ವಾಲ್ಮೀಕಿ ರಾಮಾಯಣ ಮಹಾಕಾವ್ಯದ ಮೂಲಕ ಸಾದರ ಪಡಿಸಿದ ಆದರ್ಶಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಕರೆ

by | 29/10/23 | ಸುದ್ದಿ


ನಾಯಕನಹಟ್ಟಿ:: ಪ್ರತಿಯೊಬ್ಬರು ವಾಲ್ಮೀಕಿ ಬೋಧಿಸಿದ ಉಪದೇಶವನ್ನು ಪಾಲಿಸಿದರೆ ಕುಟುಂಬ ಹಾಗೂ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಹೇಳಿದ್ದಾರೆ.
ಅವರು ಶನಿವಾರ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಹಟ್ಟಿ ಮಲ್ಲಪ್ಪ ನಾಯಕ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀ ಶ್ರೀ ಮಹಾಋಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜ್ಯೋತಿ ಬೆಳಗುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದ್ದಾರೆ. ನಮ್ಮ ಗ್ರಾಮೀಣ ಪ್ರದೇಶದ ಜನರಿಗೆ ವಾಲ್ಮೀಕಿ ಕುರಿತು ಹೆಚ್ಚು ಅಧ್ಯಯನ ಮಾಡಿ ಬೆಳಕು ಚೆಲ್ಲುವ ಅಗತ್ಯವಿದೆ.
ನಮ್ಮ ಹೋಬಳಿಯಲ್ಲಿ ಅತಿ ಹೆಚ್ಚು ವಾಲ್ಮೀಕಿ ಸಮುದಾಯಕ್ಕೆ ಸೇರಿದ ಜನರ ಸಂಖ್ಯೆ ಹೆಚ್ಚಿದೆ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ವಾಲ್ಮೀಕಿ ಸಮುದಾಯ ಹೆಚ್ಚು ಅಭಿವೃದ್ಧಿ ಹೊಂದಬೇಕು ಎಂದರೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು ಮಹಾಋಷಿ ವಾಲ್ಮೀಕಿ ಅವರ ಉಪದೇಶವನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಮನವರಿಕೆ ಮಾಡಿದರು.


ಇದೇ ವೇಳೆ ವಾಲ್ಮೀಕಿ ಜೀವನ ಚರಿತ್ರೆಯನ್ನು ಕುರಿತು ವಿಶೇಷ ಉಪನ್ಯಾಸವನ್ನು ನಿವೃತ್ತ ಪ್ರಾಂಶುಪಾಲರಾದ ಡಾ ಸಿ ಬಿ ಅನ್ನಪೂರ್ಣ ಬಸವನಗುಡಿ ಬೆಂಗಳೂರು ಮಾಹಿತಿಯನ್ನು ನೀಡಿದರು.

ಇನ್ನೂ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಕಟ್ಟಡಕ್ಕೆ ಆರ್ಥಿಕ ನೆರವು ನೀಡಿದ ದಾನಿಗಳಿಗೆ ಸಭೆಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹಟ್ಟಿ ಮಲ್ಲಪ್ಪನಾಯಕ ಸಂಘದ ಅಧ್ಯಕ್ಷರಾದ ಪಾಟೀಲ್ ಜಿಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು, ಉಪಾಧ್ಯಕ್ಷ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಟೇಲ್ ಜಿ ತಿಪ್ಪೇಸ್ವಾಮಿ, ಪ್ರಭುಸ್ವಾಮಿ, ಪಟ್ಟಣ ಪಂಚಾಯತಿ ಸದಸ್ಯರಾದ ಸೈಯದ್ ಅನ್ವರ್, ಮುಸ್ಲಿಂ ಸಮುದಾಯದ ಮುಖಂಡರಾದ ಸಿದ್ದಿಕ್, ನಿರ್ದೇಶಕರಾದ ಎಸ್ ಓಬಯ್ಯ ಮಾಜಿ ತಾಲೂಕು ಪಂಚಾಯಿತಿ ಸದಸ್ಯರು, ಹನುಮಣ್ಣ, ಚನ್ನಬಸಯ್ಯನಹಟ್ಟಿ ನಾಗರಾಜ್, ಬಂಡೆ ಕಪಿಲೆ ಓಬಣ್ಣ, ಎಸ್ ಟಿ ಬಸವರಾಜ್ ಮಾಜಿ ತಾಲೂಕು ಪಂಚಾಯಿತಿ ಸದಸ್ಯರು, ಪಿಓಟಿ ತಿಪ್ಪೇಸ್ವಾಮಿ, ಕಾರ್ಯದರ್ಶಿ ಜಿ ವೈ ತಿಪ್ಪೇಸ್ವಾಮಿ ನಲಗೇತನಹಟ್ಟಿ, ಜಿ ಬಿ ಮುದಿಯಪ್ಪ ಬೋರ್ ಸ್ವಾಮಿ, ಏಜೆಂಟ್ರು ಪಾಲಯ್ಯ, ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾದ ಮುಖ್ಯ ಶಿಕ್ಷಕರಾದ ಕೆ ಒ ರಾಜಣ್ಣ, ಜಿ ಒ ನಾಗರಾಜ್,
ಎಂ ಬಿ ಓಬಣ್ಣ, ವಿಶ್ವಕರ್ಮ ಸಂಘದ ಅಧ್ಯಕ್ಷ ಲೋಕೇಶ್, ರೇಖಲಗೆರೆ ಲಂಬಾಣಿಹಟ್ಟಿ ವಿಜ್ಞಾನ ಶಿಕ್ಷಕ ಕೆ ಟಿ ನಾಗಭೂಷಣ್, ಸುಚೇತ ವಾಲ್ಮೀಕಿ ಮಹಿಳಾ ಸಂಘದ ಸದಸ್ಯರು ,ಪಟ್ಟಣದ ಕಂಪ್ಯೂಟರ್ ಸೆಂಟರ್ ಮಾಲೀಕರು ಹಾಗೂ ಸಮಸ್ತ ನಾಯಕನಹಟ್ಟಿ ಹೋಬಳಿಯ ಗ್ರಾಮಸ್ಥರು ಉಪಸ್ಥಿತರಿದ್ದರು

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *