ಯುವಜನತೆ ಖಾದಿ ಉತ್ಪನ್ನಗಳನ್ನು ಖರೀದಿಸಿ ಧರಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಪ್ರಚಾರಪಡಿಸಬೇಕಿದೆ: ಎಂ ಜೆ ರಾಘವೇಂದ್ರ

by | 15/10/23 | ಆರ್ಥಿಕ


ಚಳ್ಳಕೆರೆ ಅ15.ಆಧುನಿಕತೆಯ ಭರಾಟೆ

ಯಲ್ಲಿ ಖಾದಿ ಉದ್ಯಮ ನಶಿಸುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದ್ದು ಖಾದಿ ಉದ್ಯಮವನ್ನು ಪ್ರೋತ್ಸಾಹಿಸುವ ಮಹಾತ್ಮ ಗಾಂಧೀಜಿಯವರ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಖಾದಿ ಫಾರ್ ನೇಷನ್ ಖಾದಿ ಫಾರ್ ಫ್ಯಾಷನ್ ಎಂಬ ಘೋಷ ವಾಕ್ಯದೊಂದಿಗೆ ಖಾದಿ ಉದ್ಯಮವನ್ನು ಉಳಿಸುವ ಪ್ರಯತ್ನ ಮಾಡುತ್ತಿದೆ ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂಜೆ ರಾಘವೇಂದ್ರ ಅಭಿಪ್ರಾಯಪಟ್ಟರು.


ನಗರದ ಕಂಬಳಿ ಮಾರುಕಟ್ಟೆ ಆವರಣದಲ್ಲಿ ಕೇಂದ್ರ ಖಾದಿ ಗ್ರಾಮೋದ್ಯೋಗ ಇಲಾಖೆ ಹಾಗೂ ನೇಕಾರ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ಖಾದಿ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಹಿಂದಿನ ಕಾಲದಲ್ಲಿ ಖಾದಿ ವಸ್ತ್ರಗಳನ್ನು ಧರಿಸುವುದು ಹೆಮ್ಮೆಯ ವಿಷಯವಾಗಿತ್ತು ಈ ಉತ್ಪನ್ನಗಳನ್ನು ಧರಿಸುವುದರಿಂದ ಉತ್ತಮ ಆರೋಗ್ಯ ಹಾಗೂ ಚರ್ಮ ರೋಗಗಳಿಂದ ದೂರವಿರಲು ಸಹಕಾರಿಯಾಗುತ್ತದೆ ಹಾಲುಮತ ಸಮಾಜದ ಬುಡಕಟ್ಟು ಸಂಸ್ಕೃತಿಯ ನೇಕಾರಿಕೆ ವೃತ್ತಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳಲ್ಲಿ ಹೆಚ್ಚಾಗಿ ಕಾಣಬಹುದಾಗಿದ್ದು ಇಂದಿಗೂ ಸಹ ಇಂತಹ ಗುಡಿ ಕೈಗಾರಿಕೆಗಳನ್ನು ಈ ಎರಡು ತಾಲೂಕುಗಳು ಪೋಷಿಸುತ್ತ ಬಂದಿರುವುದು ಹೆಮ್ಮೆಯ ವಿಷಯವಾಗಿದೆ ಸರ್ಕಾರಗಳು ನೇಕಾರಿಕೆ ಸೇರಿದಂತೆ ಗುಡಿ ಕೈಗಾರಿಕೆಗಳ ಬಲವರ್ಧನೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದಾಗ ಮಾತ್ರ ಖಾದಿ ಉತ್ಸವಕ್ಕೆ ಮೆರಗು ಬರುತ್ತದೆ ಹಾಗೂ ನೇಕಾರರ ಜೀವನ ಸುಧಾರಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ನೇಕಾರ ಸಮುದಾಯದ ತಾಲೂಕು ರೇವಣ ಸಿದ್ದೇಶ್ವರ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಮಾತನಾಡಿ ಸ್ವಾತಂತ್ರ್ಯ ಪೂರ್ವದಿಂದಲೂ ಖಾದಿ ಉತ್ಪನ್ನಗಳಿಗೆ ತನ್ನದೇ ಆದ ಮೌಲ್ಯವಿದೆ ಮಹಾತ್ಮ ಗಾಂಧೀಜಿಯವರು ಚರಕದಿಂದ ತಾವೇ ಸ್ವತಃ ನೇಯ್ಗೇ ಮಾಡಿದ ಖಾದಿ ಉತ್ಪನ್ನಗಳನ್ನು ಧರಿಸಿ ದೇಶಕ್ಕೆ ಮಾದರಿಯಾಗಿದ್ದರು ಇವರ ತತ್ವ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಂಡು ಖಾದಿ ಉತ್ಪನ್ನಗಳನ್ನು ಹೆಚ್ಚಾಗಿ ಕೊಳ್ಳುವ ಮೂಲಕ ದೇಶದ ಹಿರಿಮೆಯನ್ನು ಹೆಚ್ಚಿಸಬೇಕಾಗಿದೆ ಉಣ್ಣೆ ಕೈಮಗ್ಗ ನೇಕಾರರು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದ್ದು ಅವರ ಉತ್ಪನ್ನಗಳನ್ನು ಸರ್ಕಾರ ನೇರವಾಗಿ ಖರೀದಿಸಿ ಪ್ರೋತ್ಸಾಹಿಸಬೇಕು ಇದರಿಂದ ನೇಕಾರರ ಬದುಕು ಉತ್ತಮಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ತಾಲೂಕು ಉಣ್ಣೆ ನೌಕರರ ಸಂಘದ ಕಾರ್ಯದರ್ಶಿ ಚೌಳೂರು ಬಸವರಾಜ್ ಮಾತನಾಡಿ ಖಾದಿ ಉದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಖಾದಿ ಉತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವ ಕೇಂದ್ರ ಸರ್ಕಾರದ ನಡೆ ಶ್ಲಾಘನೀಯವಾದದು ಹಾಗೆಯೇ ಕೇಂದ್ರ ಸರ್ಕಾರ ವಿದ್ಯಾರ್ಥಿ ನಿಲಯಗಳಿಗೆ ಆಸ್ಪತ್ರೆಗಳಿಗೆ ಹಾಗೂ ರೈಲ್ವೆ ಇಲಾಖೆ ಸೇರಿದಂತೆ ಇತರೆ ಇಲಾಖೆಗಳು ಕಂಬಳಿಗಳನ್ನು ನೇಕಾರರಿಂದ ನೇರವಾಗಿ ಖರೀದಿಸಲು ಸೂಚಿಸಿದರೆ ನೇಕಾರರು ಇನ್ನು ಉತ್ತಮ ದರ್ಜೆಯ ಕಂಬಳಿಗಳನ್ನು ನೇಯ್ಗೆ ಮಾಡಲು ಪ್ರೋತ್ಸಾಹಿಸಿದಂತಾಗುತ್ತದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗುಡಿ ಕೈಗಾರಿಕೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ನೇಕಾರರ ಕುಟುಂಬಗಳಿಗೆ ನೆರವಾಗಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ನಂತರ ಖಾದಿ ಫಾರ್ ನೇಶನ್ ಖಾದಿ ಫಾರ್ ಫ್ಯಾಷನ್ ಎಂಬ ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕೆ ಎಸ್ ಐ ಸಿ ಯ ನಿರ್ದೇಶಕ ಸೆಂದಿಲ್ ಕುಮಾರ್ ಚನ್ನವೀರಪ್ಪ ಮಂಜುನಾಥ ಶಿವಶಂಕರ್ ವೀರೇಶ್ ಕುಮಾರ್ ಚಂದ್ರಪ್ಪ ಶೇಖರಪ್ಪ ಅನಿಲ್ ಕುಮಾರ್ ಹೊನ್ನೂರಪ್ಪ ತುಕಾರಾಂ ನವೀನ್ ಕುಮಾರ್ ಪಗಡಲ ಬಂಡೆ ತಿಪ್ಪೇಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *