
ಚಳ್ಳಕೆರೆ ಜನಧ್ವನಿವಾರ್ತೆ ಮಾ.20
ಇಸ್ಪೀಟ್ ಜೂಜಾಟ ಸೇರಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕುವ ಉದ್ದೇಶದಿಂದ ಜಿಲ್ಲೆಯಾದ್ಯಾಂತ ಹದ್ದಿನ ಕಣ್ಣಿಡಲು ಜಿಲ್ಲಾ ವರಿಷ್ಠಾಧಿಕಾರಿ ಕೆ.ಪರಶುರಾಂ ಮಾರ್ಗದರ್ಶನಲ್ಲಿ ಚಳ್ಳಕೆರೆ ಪೊಲೀಸ್ ಇಲಾಖೆ ಸಜ್ಜಾಗಿದೆ ಎಂದು ಚಳ್ಳಕೆರೆ ಠಾಣೆಯ ಪಿಐ ದೇಸಾಯಿ ತಿಳಿಸಿದ್ದಾರೆ.
ಚಳ್ಳಕೆರೆ ಸೇರಿದಂತೆ ಗ್ರಾಮೀಣ ಭಾಗದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುಗಾದಿ ಹಬ್ಬದ ನೆಪವೊಡ್ಡಿ ಕಲ್ಯಾಣ ಮಂಟಪ, ಲಾಡ್ಜ್, ಮನೆ,ಶ್ಯಾಮಿಯಾನ ನೀಡಿದ ಹಾಗೂ ಹೊರವಲಯ ಪ್ರದೇಶಗಳಲ್ಲಿ ಹೊಲಗದ್ದೆಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳಾದ ಜೂಜಾಟ ಇಸ್ಪೆöÊಟ್ ಕೋಳಿ ಪಂದ್ಯ, ಸೇರಿದಂತೆ ಕಾನೂನುಬಾಹಿರಾ ಚಟುವಟಿಕೆಗಳು ಕಂಡು ಬಂದಲ್ಲಿ ಹಾಗೂ ಬಾಡಿಗೆ ನೀಡಿದ ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಿಮಿನಲ್ ಕೇಸ್ ದಾಖಲಿಸಿ, ಕಾನೂನು ರೀತಿಯಲ್ಲಿ ಕ್ರಮ ಕೈಗೊಳಲಾಗುವುದು ಮತ್ತು ಇಂತಹ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಲು ಸಾರ್ವಜನಿಕರು ಸಹಕರಿಸಬೇಕೆಂದು ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಪೊಲೀಸ್ ಆಧಿಕಾರಿಗಳಿಗೆ ಮಾಹಿತಿ ನೀಡ ಬೇಕು ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿಡಲಾಗುವುದು ಸಾರ್ವಜನಿಕರು ಪೊಲೀಸ್‌ರವರೊಂದಿಗೆ ಸಹಕರಿಸಲು ಕೋರಿದೆ.
ಆರ್.ಎಫ್. ದೇಸಾಯಿ, ಪೊಲೀಸ್ ನಿರೀಕ್ಷಕರು, ಚಳ್ಳಕೆರೆ ಪೊಲೀಸ್ ಠಾಣೆ, ಚಳ್ಳಕೆರೆ, ಮೊ.:9480803112
ಕೆ. ಸತೀಶ್‌ನಾಯ್ಕ ಪೊಲೀಸ್ ಉಪ ನಿರೀಕ್ಷಕರು, ಚಳ್ಳಕೆರೆ ಪೊಲೀಸ್ ಠಾಣೆ, ಚಳ್ಳಕೆರೆ, ಮೊ.8105984486
ಧರೇಪ್ಪ ದೊಡ್ಡಮನಿ, ಪೊಲೀಸ್ ಉಪ ನಿರೀಕ್ಷಕರು, ಚಳ್ಳಕೆರೆ ಪೊಲೀಸ್ ಠಾಣೆ, ಚಳ್ಳಕೆರೆ, 8546909914
ಪ್ರಮೀಳಮ್ಮ ಮಹಿಳಾ ಪೊಲೀಸ್ ಉಪ ನಿರೀಕ್ಷಕರು, ಚಳ್ಳಕೆರೆ ಪೊಲೀಸ್ ಠಾಣೆ, ಚಳ್ಳಕೆರೆ, 8105984486ಈ ದೂರವಾಣಿ ಸಂಖ್ಯೆಗಳಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

0 Comments