-ಚಳ್ಳಕೆರೆ ಜನಧ್ವನಿ ವಾರ್ತೆ ಮಾ.26
ತಾಂತ್ರಿಕ ಯುಗಕ್ಕೆ ಉಪಕಸುಗಳು ಕಣ್ಮರೆಯಾಗುತ್ತಿದ್ದು ನೇಕಾರರ ಬುದುಕು ಅಂತAತ್ರವಾಗಿದ್ದು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುಸುವುದರಿಂದ ಆರ್ಥಿವಾಗಿ, ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯ ಎಂದು ಶಾಸಕ ಟಿ,ರಘುಮೂರ್ತಿ ಕಿವಿಮಾತು ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿ ಹಾಗೂ ನೇಕಾರರ ಸಮುದಾಯಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು,
ಬಸವಣ್ಣ, ದೇವರದಾಸಿಮಯ್ಯ ಹೀಗೆ ಅನೇಕ ವಚನಕಾರರು ತಮ್ಮ ಕಾಲದಲ್ಲಿಯೇ ಮಹಿಳೆ ಮತ್ತು ಪುರುಷರಿಗೆ ಸಮಾನ ಹಕ್ಕು ನೀಡಿದರು. ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದರು. ದೇವರ ದಾಸಿಮಯ್ಯ ಅವರ ವಚನಗಳು ಮನುಷ್ಯನ ದಿಕ್ಕನ್ನೇ ಬದಲಿಸುತ್ತವೆ. ಜೀವನದ ಅನುಭವ ಅವರ ವಚನಗಳಲ್ಲಿವೆ. ವಚನಗಳನ್ನು ಆಲಿಸುವುದರಿಂದ ಜೀವನದಲ್ಲಿ ಸ್ಫೂರ್ತಿ ಹೆಚ್ಚುತ್ತದೆ. ಸರಿಯಾದ ದಾರಿಯಲ್ಲಿ ನಡೆಯುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಲು ಶರಣರ ವಚನಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ದಾರ್ಶನಿಕರ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.
ತಹಶೀಲ್ದಾರ್ ರೇಹಾನ್ ಪಾಷಾ, ಸಮಾಜದ ಮುಖಂಡರಾದ ರುದ್ರಪ್ಪ, ಪೀತಾಂಬರ್ ದೇವರ ದಾಸಿಮಯ್ಯ ನವರ ಬಗ್ಗೆ ಮಾತನಾಡಿದರು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಜೆ.ರಾಘವೇAದ್ರ, ಸದಸ್ಯ, ವೀರಭದ್ರಪ್ಪ, ಸಮಾಜದ ಮುಖಂರಾದ ಎಸ್.ಟಿ.ಎಸ್.ತಿಪ್ಪೇಸ್ವಾಮಿ, ಪ್ರಹ್ಲಾದ್, ರವಿಕುಮಾರ್, ಗೌರಮ್, ನಾಗಭೂಷಣ್,ಜಯರಾಂ, ಬಿಇಒ ಕೆ.ಎಸ್.ಸುರೇಶ್, ತೋಟಗಾರಿಕೆ ಅಧಿಕಾರಿ ವಿರುಪಾಕ್ಷಪ್ಪ, ರೇಷ್ಮೆ ಅಧಿಕಾರಿ ಕೆಂಚೋಜಿ ರಾವ್, ಕೃಷಿ ಅಧಿಕಾರಿ ಮೇಘನ,ಆಹಾರ ಇಲಾಕೆ ಶ್ರೀನಿವಾಸ್ ಇತರರಿದ್ದರು.
ಯಾಂತ್ರಿಕ ಯುಗದಲ್ಲಿ ನೇಕರಾರರ ಬದುಕು ದುಸ್ಥರ ಶಿಕ್ಷಣದಿಂದ ಆರ್ಥಿಕವಾಗಿ ಮುಂದೆ ಬರರಲು ಸಾಧ್ಯ ಶಾಸಕ ಟಿ.ರಘುಮೂರ್ತಿ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments