ಹಿರಿಯೂರು:
ಯಲ್ಲದಕೆರೆ ವ್ಯಾಪ್ತಿಯ ನೂರಾರು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜುಗಳಿಗೆ ಹೋಗಲು ಅಗತ್ಯ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಯಲ್ಲದಕೆರೆ ಅಕ್ಕಪಕ್ಕದ ಹಳ್ಳಿಗಳಾದ ಕೆಕೆಹಟ್ಟಿ, ಚಿಗಳಿಕಟ್ಟೆ, ಹಂದಿಗನಡು, ಬ್ಯಾರಮಡು ಗ್ರಾಮದ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳು ಯಲ್ಲದಕೆರೆಗೆ ಬಂದು ಬಸ್ ಹತ್ತುವ ಪರಿಸ್ಥಿತಿ ಇದ್ದು ಬೆಳಗ್ಗೆ 10 ಗಂಟೆಯಾದರೂ ವಿದ್ಯಾರ್ಥಿಗಳು ಬಸ್ ಕಾಯುತ್ತಾ ಯಲ್ಲದಕೆರೆಯಲ್ಲಿಯೇ ಉಳಿಯಬೇಕಾಗಿದೆ.
ಈಗಿರುವ ಯಡಿಯೂರು ಮತ್ತು ಗದಗ್ ಬಸ್ ಸಮಯಕ್ಕೆ ಸರಿಯಾಗಿ ಬಾರದೇ ಇರುವ ಕಾರಣ ಪ್ರತಿ ದಿನವೂ ಶಾಲೆ ಕಾಲೇಜುಗಳಿಗೆ ತಡವಾಗಿ ಹೋಗಬೇಕಾಗಿದೆ. ಆದ್ದರಿಂದ ಈ ಭಾಗದಲ್ಲಿ ಹಳ್ಳಿಗಳಿಗೆ ಬೆಳಗ್ಗೆ ಸಮಯದಲ್ಲಿ ಸರ್ಕಾರ ಬಸ್ ಸೌಲಭ್ಯ ಒದಗಿಸಿದರೆ ನೂರಾರು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ.
ದಸೂಡಿ, ಚಿತ್ರದೇವರಹಟ್ಟಿ, ಶೇಷಪ್ಪನಹಳ್ಳಿ, ಬ್ಯಾರಮಡು, ಚಿಗಳಿಕಟ್ಟೆ, ಹಂದಿಗನಡು, ಕೆಕೆಹಟ್ಟಿ ಮಾರ್ಗವಾಗಿ ಯಲ್ಲದಕೆರೆ ಮಾರ್ಗವಾಗಿ ಹಿರಿಯೂರಿಗೆ ಬೆಳಗ್ಗೆ 8.30ಕ್ಕೆ ಒಂದು ಬಸ್ ಬಿಟ್ಟರೆ ಎಲ್ಲಾ ಮಕ್ಕಳಿಗೂ ಅನುಕೂಲವಾಗುತ್ತದೆ. ಈ ಮೊದಲು 4ಗಂಟೆಗೆ ಸಿಂಧನೂರು, ಮೈಸೂರು ಹಾಗೂ 4.30ಕ್ಕೆ ತುರುವೇಕೆರೆ, ಮೈಸೂರು ಬಸ್ ಬರುತ್ತಿದ್ದವು. ಈಗ ಅವು ಸಹ ಬರುತ್ತಿಲ್ಲ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಬೆಳಗ್ಗೆ 8.30ಕ್ಕೆ ಈ ಮಾರ್ಗವಾಗಿ ಒಂದು ಬಸ್ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂಬುದಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments