ಚಳ್ಳಕೆರೆ ನವಂಬರ್ 13
ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ಮ್ಯಾಸ ನಾಯಕ ಬುಡಕಟ್ಟು ಜನರ ಜಾಗೃತಿ ಅಭಿಯಾನಕ್ಕೆ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ನಾಯಕ ಪದದ ನಿಜವಾದ ಸಮಾನಾರ್ಥಕ ಪದವಾದ ಮ್ಯಾಸನಾಯಕ ಪದವನ್ನು ಓಬಿಸಿ/ಪ್ರವರ್ಗ-೧ರ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಮ್ಯಾಸನಾಯಕರಿಗೆ ಮೋಸ ಮಾಡಿದ ಮೋಸಗಾರರ ಕುತಂತ್ರವನ್ನು ಮಟ್ಟ ಹಾಕಲು ಸಮುದಾಯದವರು ಪ್ರತಿಯೊಬ್ಬರು ಮುಂದಾಗಬೇಕು ಎಂದು ಕರೆ ನೀಡಿದರು.
ಸಚಿವ ಬಿ. ಶ್ರೀರಾಮಲು ಸೇರಿದಂತೆ ಮುಂತಾದ ಪ್ರಭಾವಿಗಳು ಕುತಂತ್ರ ಮಾಡಿ ೨೦೧೧ ರಲ್ಲಿ ಮ್ಯಾಸ ನಾಯಕ ಪದವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಿ ಮ್ಯಾಸನಾಯಕರಿಗೆ ಕಾನೂನಿನ ತೊಡಕಾಗುವಂತೆ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಸಚಿವ ಶ್ರೀರಾಮುಲು ವಿರುದ್ದ ಕಿಡಿಕಾರಿದ್ದಾರೆ.
ಸಚಿವ ಬಿ. ಶ್ರೀರಾಮುಲು ಅವರು ಮ್ಯಾಸ ನಾಯಕ ಪದವನ್ನು ಕೇಂದ್ರದ ಓಬಿಸಿ ಪಟ್ಟಿಯಿಂದ ಕೈಬಿಟ್ಟು, ಪರಿಶಿಷ್ಟ ಪಂಗಡದಲ್ಲಿ ಸೇರ್ಪಡೆ ಮಾಡಬೇಕು. ಇಲ್ಲವಾದರೆ ಮುಂದಿ ದಿನಗಳಲ್ಲಿ ನಡೆಯುವ ಘಟನೆಗಳಿಗೆ ನೀವೆ ಹೊಣೆ ಎಂದು ಸಚಿವರಿಗೆ ಮಾಜಿ ಶಾಸಕ ಟಾಂಗ್ ನೀಡಿದ್ದಾರೆ.
ತಳವಾರ ಹಾಗು ಪರಿವಾರ ಜಾತಿಯನ್ನು ಎಸ್ ಟಿ ಜಾತಿಗೆ ಸೇರಿಸಿಕೊಂಡು ಮ್ಯಾಸ ನಾಯಕ ಪದವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಿ ಮ್ಯಾಸನಾಯಕರಿಗೆ ಮೋಸ ಮಾಡಿದ್ದಾರೆ. ಮ್ಯಾಸನಾಯಕರಿಗೆ ವಂಚನೆ ಮಾಡಿದವರು ಹಮ್ಮಿಕೊಂಡಿರುವ ಎಸ್ ಟಿ ಸಮಾವೇಶಕ್ಕೆ, ವಾಲ್ಮೀಕಿ ಜಯಂತಿಗೆ ಬುಡಕಟ್ಟು ಮ್ಯಾಸನಾಯಕರ ಭಾಗವಹಿಸಬಾದರದು ಎಂದು ಕರೆ ನೀಡಿದರು.
ಈ ವೇಳೆ ಮ್ಯಾಸನಾಯಕ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಡಾ.ಗೆರೆಗಲ್ ಪಾಪಯ್ಯ, ಕಾರ್ಯದರ್ಶಿ ದೊಡ್ಡಮನಿ ಪ್ರಸಾದ್, ತಿಪ್ಪೇಸ್ವಾಮಿ, ಮಂಜಿನಾಥ, ಕನ್ನಯ್ಯ ದಳವಾಯಿ ಸೇರಿದಂತೆ ಮುಂತದವರು ಇದ್ದರು.
ಮ್ಯಾಸ ನಾಯಕ ಬುಡಕಟ್ಟು ಜನರ ಜಾಗೃತಿ ಅಭಿಯಾನಕ್ಕೆ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಚಾಲನೆ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments