ಚಳ್ಳಕೆರೆ: ಮ್ಯಾಸನಾಯಕರ ಮಕ್ಕಳ ವಿದ್ಯಾಬ್ಯಾಸಕ್ಕೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ಟ್ರೈಬಲ್ ಯುನಿವರ್ಸಿಟಿ ಸ್ಥಾಪನೆ ಮಾಡುವಂತೆ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಒತ್ತಾಯ ಮಾಡಿದ್ದಾರೆ.
ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬುಡಕಟ್ಟು ಮ್ಯಾಸನಾಯಕರ ಧಾರ್ಮಿಕ ಆಚರಣೆಗಳಿಗೆ ರಾಜ್ಯದಲ್ಲಿ ತನ್ನದೆಯಾದ ಇತಿಹಾಸವಿದೆ. ಇವರಿಗೆ ಸರಿಯಾಸ ಸ್ಥಾನಮಾನಗಳಲಿಲ್ಲ. ಮ್ಯಾಸನಾಯಕರ ಧಾರ್ಮಿಕ ಆಚರಣೆಗಳು ಗೋವುಗಳಿಲ್ಲದೆ ನಡೆಯುವುದಿಲ್ಲ. ಅವುಗಳನ್ನು ಪೋಷಣೆ ಮಾಡುವ ಗೋಪಾಲಕರಿಗೆ ಮಾಸಿಕವಾಗಿ ೧೦ ರಿಂದ ೧೫ ರಿಂದ ಸಾವಿರ ರೂಗಳು ನೀಡಬೇಕು ಎಂದು ಒತ್ತಾಯ ಮಾಡಿದರು.
ಬುಡಕಟ್ಟು ಮ್ಯಾಸ ನಾಯಕರು ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ದಾವಣಗೆರೆ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಇದ್ದಾರೆ, ಮ್ಯಾಸನಾಯಕರು ಹೆಚ್ಚಿರುವ ಮೊಳಕಾಲ್ಮೂರು ಕ್ಷೇತ್ರದಲ್ಲಿ ಮ್ಯಾಸನಾಯಕರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸಲುವಾಗಿ ಸರ್ಕಾರ ಟ್ರೈಬಲ್ ಯುನಿವರ್ಸಿಟಿ ಸ್ಥಾಪಿಸಿ ಅದಕ್ಕೆ ರಾಜವೀರ ಮದಕರಿ ನಾಯಕರ ಹೆಸರಿಡಬೇಕು ಎಂದರು.
ಬುಡಕಟ್ಟು ಸಂಸ್ಕೃತಿಯ ಪರಂಪಯನ್ನು ಮುಂದುವರಿಸಿಕೊAಡು ಬಂದಿರುವ ಮ್ಯಾಸ ನಾಯಕರಿಗೆ ಹಸು ಶ್ರೇಷ್ಠವಾದ ದೇವರು ಗೋವುಗಳಿಲ್ಲ ಮ್ಯಾಸ ನಾಯಕರು ಯಾವುದೇ ಧಾರ್ಮಿಕ ಆಚರಣೆಗಳಿಲ್ಲ.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದಡ್ಡಿ ಸೂರನಾಯಕನ ದೇವರ ಎತ್ತುಗಳು, ದಡ್ಡಿ ಯರಬಲ್ಲ ನಾಯಕ, ದಡ್ಡಿ ಕಾಮನಾಯಕ, ಜಗಳೂರು ಪಾಪ ನಾಯಕ, ಗಾದ್ರಿಪಾಲನಾಯಕ, ಬೊಮ್ಮದೇವರು, ಮಲ್ಲೂರಹಳ್ಳಿ ರಾಜಲುದೇವರು, ಬೋರೇದೇವರು, ನಲಗೇತನಹಟ್ಟಿ ಮುತ್ತ್ಯಗಳ ದೇವರು, ಬೋಸರದೇವರಹಟ್ಟಿ ಬೋಸೆರಂಗಸ್ವಾಮಿ ದೇವರು, ಕುಮ್ಮತಿ ಶ್ರೀ ಕಂಪಳರAಗ ಸ್ವಾಮಿ ದೇವರು, ಶ್ರೀಶೈಲ ಮುತ್ತೇಗಾರ ಎತ್ತುಗಳು, ನೇರಲಗುಂಟೆ ಬಂಗಾರೇಶ್ವರ ಗಾದ್ರಿಪಾಲನಾಯಕ ದೇವರ, ರುದ್ರಮ್ಮನಹಳ್ಳಿ ನಲ್ಲಜರುವಯ್ಯ ದೇವರ ಎತ್ತು, ಗುಡಿಕೋಟೆ ಜೋಗಿದೇವರು, ಮಲೇಬೋರಯ್ಯಹಟ್ಟಿ ಮ್ಯಾಸ ಒಡೆಲ್ಲ ದೇವರು, ದಾಸರ ಮುತ್ತ್ಯನಹಳ್ಳಿ ಶ್ರೀ ಓಬಳೇಶ್ವರ ದೇವರ, ಮಾಕಿನಾಡಕ್ಕು ಓಬಳದೇವರ, ಕಾಟಂಲಿAಗೇಶ್ವರ ದೇವರ ಎತ್ತುಗಳಿದ್ದು, ಇವುಗಳನ್ನು ಪೋಷಣೆ ಮಾಡುವ ಗೋಪಾಲಕರಿಗೆ ಮಾಸಿಕವಾಗಿ ೧೦ ರಿಂದ ೧೫ ಸಾವಿರ ಹಣವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.
====================================
ಮ್ಯಾಸನಾಯಕರ ಮಕ್ಕಳ ವಿದ್ಯಾಬ್ಯಾಸಕ್ಕೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ಟ್ರೈಬಲ್ ಯುನಿವರ್ಸಿಟಿ ಸ್ಥಾಪನೆ ಮಾಡುವಂತೆ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments