ಚಳ್ಳಕೆರೆ ಮೌಲಾನ ಅಬುಲ್ ಕಲಾಂ ಅಜಾದ್ ಇವರ ಹೆಸರನ್ನು ನಗರದ
ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ನಾಮಕರಣ ಮಾಡುವಂತೆ ಮುಸ್ಲೀಂ ಸಮುದಾಯದವರು ನಗರಸಭೆಗೆ ಮನವಿ ಮಾಡಿಕೊಂಡಿಧದಾರೆ
ಚಳ್ಳಕೆರೆ ನಗರದಲ್ಲಿ ಹಲವಾರು ರಾಷ್ಟ್ರೀಯ ನಾಯಕರು, ಸಮಾಜ ಸುಧಾರಕರ
ಹೆಸರುಗಳನ್ನು ಇಟ್ಟಿರುತ್ತೀರಿ, ಇತ್ತೀಚೆಗೆ ನೂತನವಾಗಿ ಕೆಲವು ಮಹನಿಯರ ಪೌರಾಜ್ಯ ಸರ್ಕಲ್ ರಸ್ತೆ ನಿರ್ಮಿಸುವ
ಬಗ್ಗೆ ನಗರಸಭೆಯಲ್ಲಿ ತೀರ್ಮಾನಿಸಿರುತ್ತೀರೆಂದು ತಿಳಿದು ಸಂತೋಷವಾಗಿದೆ.
ಮೌಲಾನ ಅಬುಲ್ ಕಲಾಂ ಆಜಾದ್ ರವರು ಈ ದೇಶದ ಸ್ವಾತಂತ್ರ ಹೋರಾಟಗಾರರು, ಗಾಂಧಿವಾದಿಗಳು ಹಾಗೂ
ಪ್ರಪ್ರಥಮ ಭಾರತ ಸರ್ಕಾರದ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದವರು ಹಾಗೂ ಕಡ್ಡಾಯ ಶಿಕ್ಷಣವನ್ನು ಜಾರಿಗೆ
ತಂದವರು ಮತ್ತು ಕೇಂದ್ರ ಸರ್ಕಾರ ಪ್ರತಿ ವರ್ಷದ 11ನೇ ನವೆಂಬರ್ ರಂದು ಇವರ ಜನ್ಮದಿನದ ಅಂಗವಾಗಿ
ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ.
ಇವರ ಹೆಸರನ್ನು
ಚಳ್ಳಕೆರೆ ನಗರದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿಯೇ ಇವರ ಹೆಸರಿನಲ್ಲಿ ವೃತ್ತ ನಿರ್ಮಾಣ
ಮಾಡುವಂತೆ ಮುಸ್ಲೀಂ ಸಮುದಾಯದವರು ನಗರಸಭೆ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.
0 Comments