ಐಮಂಗಲ ನ.16 ದೀಪಾವಳಿ ಹಬ್ಬಕ್ಕೆಂದು ಊರಿಗೆ ಬಂದು ಹಬ್ಬ ಮುಗಿಸಿ ಕರ್ತವ್ಯಕ್ಕೆ ಹೋಗುವಾಗ ಬೈಕ್ ಅಪಘಾತದಲ್ಲಿ ಯುವಕ ನೋರ್ವ ಮೃತಪಟ್ಟ ಘಟನೆ ಐಮಂಗಲ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಬೆಳಗಾವಿ ಜಿಲ್ಲೈಯ ಜುಂಜರವಾಡ ಗ್ರಾಮದ ಸುದರ್ಶನ್ (24) ಮೃತ ಯುವಕ.
ಬೆಂಗಳೂರಿನ ಜೆ.ಈ ಕಂಪನಿಯಲ್ಲಿ ಟೆಕ್ನಿಷಿಯನ್ ವೃತ್ತಿ ಮಾಡುತ್ತಿದ್ದು ಗುರುವಾರ ನ. ರಂದು ಮಧ್ಯಾಹ್ನ 01.15 ಗಂಟೆ ಸಮಯದಲ್ಲಿ ತನ್ನ ಮೋಟಾರ್ ಸೈಕಲ್ ಬೈಕ್ ನಲ್ಲಿ ಸುದರ್ಶನ್ ದೀಪಾವಳಿ ಹಬ್ಬಕ್ಕೆಂದು ತನ್ನ ಸ್ವಂತ ಊರಾದ ಜುಂಜರವಾಡ ಗ್ರಾಮಕ್ಕೆ ಹೋಗಿದ್ದು, ನಂತರ ಊರಿಂದ ಬೆಂಗಳೂರು ಕಡೆಗೆ ಹೋಗುತ್ತಿರುವಾಗ ಹಿರಿಯೂರು
ತಾಲ್ಲೂಕಿನ ಪಾಲವ್ವನಹಳ್ಳಿ ಗೇಟ್ ಸಮೀಪ ಶರ್ಮಾ ಜುಮ್ಮಾ ಪಂಚಾಬಿ ಡಾಬಾ ಹೋಟೆಲ್ ಸಮೀಪ
ಚಿತ್ರದುರ್ಗ-ಬೆಂಗಳೂರು ರಸ್ತೆಯಲ್ಲಿ ತನ್ನ ಮೋಟಾರ್ ಸೈಕಲ್ ನ್ನು ಅತೀ ವೇಗ ಮತ್ತು ಅಜಾಗೂರುಕತೆಯಿಂದ
ಚಾಲನೆ ಮಾಡಿಕೊಂಡು ಬಂದು ರಸ್ತೆಯ ಪಕ್ಕದ ಚರಂಡಿಗೆ ಮೋಟಾರ್ ಸೈಕಲ್ ಸಮೇತ ಬಿದ್ದು
ಗಾಯಾಗೊಂಡು ತಲೆಗೆ, ಮೈಕೈಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿ ಬೈಕ್ ಸವಾರ ಸ್ಥಳದಲ್ಲಿಯೇ
ಮೃತಪಟ್ಟಿರುತ್ತಾನೆ.. ಮೋಟಾರ್ ಸೈಕಲ್ ಸವಾರ ಸುದರ್ಶನ್ ಮೈಸೂರು ರವರನ್ನು ಹಿರಿಯೂರು ಸರ್ಕಾರಿ
ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಈ ಬಗ್ಗೆ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಟಾರ್ ಸೈಕಲ್ ಸ್ವಯಂ ಅಪಘಾತ ವ್ಯಕ್ತಿ ಸಾವು :
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments