ಹಿರಿಯೂರು :
ತಾಲ್ಲೂಕಿನ ಆದಿವಾಲ ಗ್ರಾಮದ ವಾಸಿಯಾಗಿರುವ ಕುಮಾರಿ ವರ್ಷ ಉಮಾಪತಿರವರು ಅಂಧ ಮಹಿಳೆಯ ಕ್ರಿಕೆಟ್ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದು, ನಮ್ಮ ತಾಲ್ಲೂಕಿನ ಪ್ರತಿಭೆ ಅತ್ಯುತ್ತಮವಾಗಿ ತಮ್ಮ ತಂಡವನ್ನು ಮುಂದುವರೆಸಿಕೊಂಡು ಹೋಗುವ ಮೂಲಕ ಪಂದ್ಯದಲ್ಲಿ ಜಯಗಳಿಸಲಿ ಎಂಬುದಾಗಿ ಉಲಮಾ ಎ ಹಿಂದ್ ಅಧ್ಯಕ್ಷರಾದ ಅಬ್ದುಲ್ಲಾ ಮೌಲಾನಾ ಹೇಳಿದರು.
ಜಮಿಯತ್ ಉಲುಮಾ ಎ ಹಿಂದ್ ಹಿರಿಯೂರು ಶಾಖೆ ಹಾಗೂ ಮುಸ್ಲಿಂ ಜನಾಂಗದ ವತಿಯಿಂದ ನಮ್ಮ ಭಾರತ ದೇಶಕ್ಕೆ ಕೀರ್ತಿ ತಂದ ಅಂಧ ಮಹಿಳೆಯ ಕ್ರಿಕೆಟ್ ತಂಡದ ನಾಯಕಿಯಾದ ಕುಮಾರಿ ವರ್ಷ ಉಮಾಪತಿರವರಿಗೆ ಶಾಲು ಹೊದಿಸಿ, ಸನ್ಮಾನಿಸಿ, ಅವರು ಮಾತನಾಡಿದರು.
ಈ ಸಮಾರಂಭದಲ್ಲಿ ಮೌಲಾನ ವಸೀಂ ಸಾಹಬ್, ನಯಾಜ್, ಲಾಲು, ಜಪ್ರುದ್ದೀನ್ ಪಂಟು, ಆದಿವಾಲ ಮುನಿರ್, ಅಸ್ಲಾಂ ಪಠಾನ್, ಶಿವು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಜಾಕಿರ್ ಹುಸೇನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಕರವೇ ಡಿಕೆಎಸ್ ದಾದಾಪೀರ್ ವಂದಿಸಿದರು.
ಮುಸ್ಲಿಂ ಜನಾಂಗದ ವತಿಯಿಂದ ಅಂಧ ಮಹಿಳೆಯ ಕ್ರಿಕೆಟ್ ತಂಡದನಾಯಕಿ ಕುಮಾರಿವರ್ಷಉಮಾಪತಿರಿಗೆ ಸನ್ಮಾನ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments