ಚಳ್ಳಕೆರೆ ಆ.28 ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಲು ರೈತರಲ್ಲಿ ಒಂದು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವ ಸಲುವಾಗಿ ೨೦೨೪-೨೫ ನೇ ಸಾಲಿನಲ್ಲಿಯೂ ಸಹಾ ಈ ಕಾರ್ಯಕ್ರಮವನ್ನು ಮುಂದುವರೆಸಲಾಗಿದ್ದು, ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದ್ದು, ಕೃಷಿ ಇಲಾಖೆಯ ಕೆ-ಕಿಸಾನ್ ಪೋರ್ಟಲ್‌ನಲ್ಲಿ ಕೃಷಿ ಪ್ರಶಸ್ತಿಗೆ ಅರ್ಜಿ ನಮೂನೆಯನ್ನು ಅಳವಡಿಸಲಾಗಿರುತ್ತದೆ. ಚಳ್ಳಕೆರೆ ತಾಲ್ಲೂಕು ಮಟ್ಟಕ್ಕೆ ಶೇಂಗಾ ಮಳೆಯಾಶ್ರಿತ ಬೆಳೆ ಆಯ್ಕೆಯಾಗಿದ್ದು ಆಸಕ್ತ ರೈತ ಭಾಂಧವರು ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು / ಸಿಟಿಜನ್ ಲಾಗಿನ್‌ಗಳ ಮೂಲಕ ಅಗತ್ಯದಾಖಲಾತಿಗಳೊಂದಿಗೆ (ಎಫ್.ಐ.ಡಿ ಸಂಖ್ಯೆ, ಪಹಣಿ, ಆಧಾರ್ ಕಾರ್ಡ್, ಫೋಟೋ, ಬ್ಯಾಂಕ್ ಪಾಸ್‌ಬುಕ್ ಮತ್ತು (ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ವರ್ಗದ ರೈತರು) ಜಾತಿ ಪ್ರಮಾಣ ಪತ್ರ)ಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಪ್ರಶಸ್ತಿಯಡಿ ಬೆಳೆ ಸ್ಪರ್ಧೆಗೆ ಅರ್ಜಿಸಲ್ಲಿಸಲು ಯಾವುದೇ ಶುಲ್ಕವಿರುವುದಿಲ್ಲ ಹಾಗೂ ಮುಂಗಾರು ಹಂಗಾಮಿಗೆ ಅರ್ಜಿ ಸಲ್ಲಿಸಲು ೩೧-ಆಗಸ್ಟ್-೨೦೨೪ ಕೊನೆಯ ದಿನಾಂಕವಾಗಿರುತ್ತದೆ.
ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿಗೆ ಪ್ರಥಮ ಬಹುಮಾನ ರೂ ೩೦೦೦೦/- ದ್ವಿತೀಯ ಬಹುಮಾನ ರೂ ೨೫೦೦೦/- ಹಾಗೂ ತೃತೀಯ ಬಹುಮಾನ ರೂ ೨೦೦೦೦/- ನಿಗಧಿಪಡಿಸಲಾಗಿದೆ. ಹಾಗೂ ತಾಲ್ಲೂಕು ಮಟ್ಟಕ್ಕೆ ಪ್ರಥಮ ಬಹುಮಾನ ರೂ ೧೫೦೦೦/- ದ್ವಿತೀಯ ಬಹುಮಾನ ರೂ ೧೦೦೦೦/- ಹಾಗೂ ತೃತೀಯ ಬಹುಮಾನ ರೂ ೫೦೦೦/- ಬಹುಮಾನವನ್ನು ನಿಗಧಿಪಡಿಸಲಾಗಿದೆ.
ಸದರಿ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ತಾಲ್ಲೂಕಿನ ಎಲ್ಲಾ ರೈತ ಭಾಂಧವರಲ್ಲಿ ಸಹಾಯಕ ಕೃಷಿ ನಿರ್ದೇಶಕರು ಕೋರಿರುತ್ತಾರೆ.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments