ಮಾತೆಂದರೆ-ಇದು

ಬಯಲು ಸೀಮೆಯ ದೇವರ ಹಸುಗಳಿಗೆ ಸರ್ಕಾರ ಪ್ರತ್ಯೇಕ ಮೇವು ಬ್ಯಾಂಕ್ ಸ್ಥಾಪಿಸಲಿ: ಶ್ರೀ ಜಪಾನಂದ ಸ್ವಾಮೀಜಿ ಅಗ್ರಹ


ಚಳ್ಳಕೆರೆ: ರಾಜ್ಯದ ಬಯಲು ಸೀಮೆ ಪ್ರದೇಶಗಳಾದ ಪಾವಗಡ ಚಿತ್ರದುರ್ಗ ಚಳ್ಳಕೆರೆ ಜಗಳೂರು ಕೂಡ್ಲಿಗಿ ಪ್ರದೇಶಗಳು ಬರಗಾಲದಿಂದ ತತ್ತರಿಸಿದ್ದು ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ ಅದರಲ್ಲೂ ಬುಡಕಟ್ಟು ಸಂಸ್ಕೃತಿಯಲ್ಲಿ ದೇವರ ಹಸುಗಳನ್ನು ಲಾಲನೆ ಪಾಲನೆ ಮಾಡುತ್ತಿರುವ ಕಿಲಾರಿಗಳಿಗೆ ತಮ್ಮ ಹಸುಗಳನ್ನು ಸಲಹಲು ಮೇವಿಲ್ಲದೆ ಪರಿತಪಿಸುವಂತಾಗಿದ್ದು ಹಸುಗಳು ಜೀವನ್ಮರಣ ಸ್ಥಿತಿಗೆ ತಲುಪಿವೆ ಎಂದು ಪಾವಗಡದ ಶ್ರೀರಾಮಕೃಷ್ಣಾಶ್ರಮದ ಶ್ರೀ ಜಪಾನಂದ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.


ನಗರದ ರೋಟರಿ ಬಾಲ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸರ್ಕಾರ ಬರಪೀಡಿತ ತಾಲೂಕುಗಳಲ್ಲಿ ಗೋಶಾಲೆಗಳನ್ನು ತೆರೆದು ಸರಿಯಾದ ನಿರ್ವಹಣೆ ಮಾಡದೆ ಜೈಲಿನಲ್ಲಿ ಕೈದಿಗಳಿಗೆ ತೂಕದ ರೀತಿ ಊಟ ವಿತರಿಸುವಂತೆ ಹಸುಗಳಿಗೆ ಮೇವು ಒದಗಿಸುತ್ತಿದ್ದು ಇದರಿಂದ ಬೇಸಿಗೆಯ ಬಿಸಿಲಿನ ಬೇಗೆ ಹಾಗೂ ಹಸಿವಿನಿಂದ ಹಸುಗಳು ಸಾವನ್ನಪ್ಪುತ್ತಿವೆ ಇನ್ನು ಬುಡಕಟ್ಟು ಸಂಸ್ಕೃತಿಯಲ್ಲಿ ದೇವರ ಹಸುಗಳನ್ನು ಸಲಹುತ್ತಿರುವ ಗೋಪಾಲಕರು ಪಾವಗಡದ ತಮ್ಮ ಆಶ್ರಮದ ಬಳಿ ಬಂದು ನೋವು ತೋಡಿಕೊಳ್ಳುತ್ತಿದ್ದಾರೆ ಇಂತಹ ಸಂದಿಗ್ಧ ಪರಿಸ್ಥಿತಿ ಇದ್ದರು ಸಹ ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ನೆಪ ಹೇಳಿ ನುಣುಚಿಕೊಳ್ಳುತ್ತಿರುವುದು ಸರಿಯಲ್ಲ ಹೀಗಾಗಿ ಕಳೆದ ಜನವರಿಯಿಂದಲೂ ಚಳ್ಳಕೆರೆ ಹಾಗೂ ಕೂಡ್ಲಿಗಿ ತಾಲೂಕಿನ 40 ಹಟ್ಟಿಗಳ ದೇವರ ಹಸುಗಳಿಗೆ ಇಲ್ಲಿಯವರೆಗೆ 360 ಟನ್ ನಷ್ಟು ಮೇವನ್ನು ಸುಧಾಮೂರ್ತಿಯವರ ಮೂರ್ತಿ ಫೌಂಡೇಶನ್ ಸಹಾಯ ಹಸ್ತದ ಸಲುವಾಗಿ ಆಶ್ರಮದಿಂದ ವಿತರಿಸಲಾಗಿದೆ ಸರ್ಕಾರ ಇಂತಹ ಬೇಜವಾಬ್ದಾರಿತನದಿಂದ ಹಸುಗಳನ್ನು ಕೊಲ್ಲಲು ಹೊರಟಿದೆ ಎಂದು ಆರೋಪಿಸಿದರು.

ಪ್ರಧಾನಿಗೆ ಪತ್ರ: ಬರಗಾಲದಿಂದ ತತ್ತರಿಸಿರುವ ಬಯಲು ಸೀಮೆ ಪ್ರದೇಶಗಳ ಸ್ಥಿತಿ-ಗತಿಗಳ ಬಗ್ಗೆ ಪ್ರಧಾನಮಂತ್ರಿಯವರಿಗೆ ನಾನು  ಪತ್ರ ಬರೆದಿದ್ದು ಪ್ರಧಾನಮಂತ್ರಿಯ ಕಚೇರಿಯಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೂಡಲೇ ಕ್ರಮ ತೆಗೆದುಕೊಂಡಿರುವ ಬಗ್ಗೆ ಉತ್ತರ ನೀಡುವಂತೆ ತಿಳಿಸಲಾಗಿದೆ ಆದರೆ ಅಧಿಕಾರಿಗಳು ಚುನಾವಣೆಯ ನೆಪವನ್ನು ಹೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತ್ಯೇಕ ಮೆವು ಬ್ಯಾಂಕ್ ಗೆ ಒತ್ತಾಯ: ಈ ವೇಳೆ ಮಾತನಾಡಿದ ಜಪಾನಂದ ಸ್ವಾಮೀಜಿ ದೇವರ ಹಸುಗಳು ಗೋಶಾಲೆಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ ಆದ್ದರಿಂದ ಪ್ರತ್ಯೇಕ ಮೇವು ಬ್ಯಾಂಕ್ ಸ್ಥಾಪಿಸಿ ಕಿಲಾರಿಗಳ ಜೀವನ ಮತ್ತು ಹಸುಗಳ ಜೀವ ರಕ್ಷಣೆ ಮಾಡಬೇಕಾಗಿದೆ ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಿಲಾರಿ ಪಾಲಯ್ಯ ಮಾತನಾಡಿ ಸ್ವಾಮೀಜಿಯವರ ಸಹಾಯ ಹಸ್ತದಿಂದ ದೇವರ ಹಸುಗಳಿಗೆ ಮೇವು ದೊರೆಯುತ್ತಿದೆ ಈಗಾಗಲೇ ಬಿಸಿಲಿನ ತಾಪಕ್ಕೆ 40ಕ್ಕೂ ಹೆಚ್ಚು ದೇವರ ಹಸುಗಳು ಸಾವನ್ನಪ್ಪಿವೆ ಇದರಿಂದ ನಮ್ಮ ಬುಡಕಟ್ಟು ಸಂಸ್ಕೃತಿ ನಶಿಸುವಂತಾಗುತ್ತದೆ ಗೋಶಾಲೆ ಸ್ಥಾಪಿಸಿರುವುದು ನಾವು ವಾಸಿಸುತ್ತಿರುವ ಹಟ್ಟಿಗಳಿಂದ ಸುಮಾರು ಹತ್ತು ಕಿಲೋಮೀಟರ್ ನಷ್ಟು ದೂರವಿದ್ದು ನಮಗೆ ಸರ್ಕಾರ ನೀಡುತ್ತಿರುವ ಮೇವು ತರಲು ಸಾಧ್ಯವಾಗುತ್ತಿಲ್ಲ ಸ್ವಾಮೀಜಿಯವರ ಕೃಪೆಯಿಂದ ಇಂದು ದೇವರ ಹಸುಗಳಿಗೆ ಮೇವು ಒದಗಿಸಲಾಗುತ್ತಿದೆ ಈಗಲಾದರೂ ಸರ್ಕಾರ ತಮ್ಮ ಕಡೆ ಗಮನಹರಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಮಕೃಷ್ಣ ಸೇವಾಶ್ರಮದ ಸೇವಾಕರ್ತರಾದ ಸಿಪಿ ಮಹೇಶ್ ಸಿದ್ದೇಶ್ ಉಪನ್ಯಾಸಕ ಓಬಣ್ಣ ಸೇರಿದಂತೆ ಕಿಲಾರಿಗಳು ಉಪಸ್ಥಿತರಿದ್ದರು.

ರಾಷ್ಟ್ರೀಯ ರೈತ ದಿನಾಚರಣೆ ರೈತರನ್ನು ಕಡೆಗಣಿರುವ ಬಗ್ಗೆ ಜಿಲ್ಲಾ ಜನಸಂಪರ್ಕಸಭೆಯಲ್ಲಿ ಅಧಿಕಾರಿಗಳ ವಿರುದ್ದು ದೂರು ನೀಡಲಾಗುವುದು ರೈತ ಮುಖಂಡ ಕೆ.ಪಿ.ಭೂತಯ್ಯ.

ಚಳ್ಳಕೆರೆ ಡಿ23 ಡಿ.23 ರಂದು ರಾಷ್ಟ್ರೀಯ ರೈತರ ದಿನಾಚರಣೆ ಮಾಡದೆ ಕೃಷಿ ಇಲಾಖೆ ಹಾಗೂ ತಾಲೂಕು ಆಡಳಿತ ನಿರ್ಲಕ್ಷ ತೋರಿದ್ದಾರೆ ಎಂದ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಪ್ರಧಾನಿ ದಿ. ಚೌದರಿ ಚರಣಸಿಂಗ್‌ ಅವರ ಜಯಂತ್ಯುತ್ಸವ ದಿನವಾದ ಡಿ.23 ರಂದು ರಾಷ್ಟ್ರೀಯ ರೈತ ದಿನವಾಗಿ ಆಚರಿಸಲಾಗಿದೆ. ಆದರೆ ಕೃಷಿ ಇಲಾಖೆಯ ನಿರ್ಲಕ್ಷದಿಂದಾಗಿ ಡಿ.23ರಂದು ರೈತರ ದಿನಾಚರಣೆಯನ್ನು ಕಸಬಾ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ರೈತರನ್ನು ಆಹ್ವಾನಿಸದೆ ಕೆಲವೇ ರೈತರನ್ನು ಕರೆದು ಕಾಟಾಚಾರಕ್ಕೆ ಆಚರಣೆ ಮಾಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಅಸಮದಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜಿಲ್ಲಾಟ್ಟದ ಜನಸಂಪರ್ಕ ಸಭೆಯಲ್ಲಿ ರಾಷ್ಟ್ರೀಯ ರೈತ ದಿನಾರಣೆಯ ಬಗ್ಗೆ ದೂರು ನೀಡಲಾಗುವುದು ಎಂದು ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದಾರೆ.

ಪತ್ರಕರ್ತರ ಹಾಗೂ ದೃಶ್ಯ ಮಾಧ್ಯಮದವರ ಪರ ಧ್ವನಿ ಎತ್ತಿದ ವಿಧಾನಪರಿಷತ್ ಸದಸ್ಯ ಎಂ.ಚಿದಾನಂದಗೌಡ


ಬೆಳಗಾವಿ
ಪತ್ರಕರ್ತರು ಹಾಗೂ ದೃಶ್ಯ ಮಾಧ್ಯಮದವರಿಗೆ ರಕ್ಷಣಾ ಕಾಯ್ದೆ ಜಾರಿಗೊಳಿಸಿ ಜೀವ ವಿಮಾ ಸೌಲಭ್ಯ ಕಲ್ಪಿಸಿ, ಉಚಿತ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಸದಸ್ಯರಾದ ಚಿದಾನಂದ ಗೌಡ ಅವರು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಬುಧವಾರದಂದು ಸದನದ ಶೂನ್ಯ ವೇಳೆಯಲ್ಲಿ ವಿಧಾನಪರಿಷತ್ ಸದಸ್ಯ ಚಿದಾನಂದ ಗೌಡ ಅವರು ಪತ್ರಕರ್ತರು ಹಾಗೂ ದೃಶ್ಯ ಮಾಧ್ಯಮದವರ ಪರವಾಗಿ ಧ್ವನಿ ಎತ್ತಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗಕ್ಕೆ ವಿಶೇಷ ಸ್ಥಾನವಿದೆ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು ವ್ಯವಸ್ಥೆಯ ವೈಫಲ್ಯಗಳನ್ನು ಒಳಿತನ್ನು ಜನತೆಯ ಮುಂದೆ ಇಡುವಲ್ಲಿ ಪತ್ರಿಕಾ ರಂಗ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ವಾಸ್ತವವನ್ನು ಜನತೆಗೆ ಮುಂದಿಡುವ ಸಂದರ್ಭದಲ್ಲಿ ಪತ್ರಿಕಾ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮ ವರದಿಗಾರರಿಗೆ ಜೀವಕ್ಕೆ ಆಪತ್ತು ತರುವ ಸನ್ನಿವೇಶಗಳು ನಡೆಯುತ್ತಿರುತ್ತವೆ.
ಸರಕಾರ ಹಾಗೂ ಸಾರ್ವಜನಿಕರ ಮಧ್ಯ ಸಂಪರ್ಕ ಸೇತುವೆಯಾಗಿ ಪ್ರಾಣದ ಹಂಗನ್ನು ತೊರೆದು ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಪತ್ರಿಕಾ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ವೃತ್ತಿ ಬದುಕಿನಲ್ಲಿ ಯಾವುದೇ ರೀತಿಯ ರಕ್ಷಣೆ ಇಲ್ಲದಂತಾಗಿದೆ ಇದರಿಂದಾಗಿ ಸಮಾಜದಲ್ಲಿನ ವಾಸ್ತವ ಪರಿಸ್ಥಿತಿಯನ್ನು ವರದಿ ಮಾಡಲು ಪತ್ರಕರ್ತರು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಆದ್ದರಿಂದ ಕೂಡಲೇ ರಾಜ್ಯದ ಸಮಸ್ತ ಪತ್ರಕರ್ತ ಹಾಗೂ ದೃಶ್ಯ ಮಾಧ್ಯಮ ಪ್ರತಿನಿಧಿಗಳಿಗೆ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಿ ಪ್ರತಿಯೊಬ್ಬ ವರದಿಗಾರರಿಗೂ ಜೀವ ವಿಮಾ ಸೌಲಭ್ಯ ಕಲ್ಪಿಸಿ ರಾಜ್ಯಾದ್ಯಂತ ಸಂಚರಿಸಲು ಉಚಿತ ಬಸ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಪತ್ರಕರ್ತರು ಹಾಗೂ ದೃಶ್ಯಮಾಧ್ಯಮ ಪ್ರತಿನಿಧಿಗಳಿಗೆ ನ್ಯಾಯ ಒದಗಿಸಬೇಕೆಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.

ಜಿಲ್ಲಾ ಸೂಪರ್ ಡೆಂಟ್ ಆಫ್ ಪೋಲೀಸ್ ಅಧಿಕಾರಿ‌ಧರ್ಮೇಂದ್ರಕುಮಾರ್ ಮೀನಾರವರಿಗೆ ರೈತ ಮುಖಂಡ ಕಸವನಹಳ್ಳಿ‌ರಮೇಶ್ ಅಭಿನಂದನೆ.


ಚಿತ್ರದುರ್ಗ.
ಚಿತ್ರದುರ್ಗ ಜಿಲ್ಲೆ, ಚಿತ್ರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಪ್ರಾರಂಭ ಮಾಡಿ ಅರಣ್ಯ ಸಂಪತ್ತುಗಳ ಲೂಟಿ ಮಾಡುತ್ತಿದ್ದ ಕಳ್ಳರನ್ನು ಚಿತ್ರದುರ್ಗ ಜಿಲ್ಲೆ ಸೂಪರ್ ಡೆಂಟ್ ಆಫ್ ಪೋಲೀಸ್ ಧರ್ಮೇಂದ್ರ ಕುಮಾರ್ ಮೀನಾ ರವರು ಬಂಧಿಸಿದ್ದು, ಇವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂಬುದಾಗಿ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಪ್ರಶಂಸಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಅತಿಹೆಚ್ಚಿನ ಸಂಖ್ಯೆಯ ಶ್ರೀಗಂಧ ಬೆಳೆಗಾರರಿದ್ದು, ತಮ್ಮ ತಮ್ಮ ಜಮೀನುಗಳಲ್ಲಿ ಕೃಷಿಕರು ಯಥೇಚ್ಛವಾಗಿ ಶ್ರೀಗಂಧ ಸಸಿಗಳನ್ನು ಬೆಳೆಸುತ್ತಿದ್ದು, ಅದರ ರಕ್ಷಣೆಯೇ ರೈತರಿಗೆ ಒಂದು ದೊಡ್ಡ ಸವಾಲ್ ಆಗಿದೆ. ಪ್ರತಿವಾರ ಅಥವಾ ಪ್ರತಿ 15 ದಿನಕ್ಕೊಮ್ಮೆ ಚಿತ್ರದುರ್ಗ ಜಿಲ್ಲೆಯಲ್ಲಿ ಶ್ರೀಗಂಧ ಮರಗಳನ್ನು ಕಡಿಯುವ ಕಳ್ಳರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ.


ಅಲ್ಲದೆ ಸರ್ಕಾರಿ ಅರಣ್ಯಗಳಲ್ಲಿ ಸಹ ಕಳ್ಳತನವಾಗುತ್ತಿದೆ ಇದರಲ್ಲಿ ದೂರು ಕೊಡುವವರ ಸಂಖ್ಯೆ ತುಂಬಾ ಕಡಿಮೆ. ತಾವುಗಳು ಈಗ ಹಿರಿಯೂರು ನಗರದ ಬಬ್ಬೂರು ಗ್ರಾಮದಲ್ಲಿ ಇಬ್ಬರು ಕಳ್ಳರನ್ನು ಹಾಗೂ ಅಪಾರ ಪ್ರಮಾಣದ ಶ್ರೀಗಂಧದ ತುಂಡುಗಳು ರಕ್ತ ಚಂದನದ ತುಂಡುಗಳು ಆನೆದಂತ ಚಿಪ್ಪುಗಳು ವಶಪಡಿಸಿಕೊಂಡಿರುವುದು ಈ ನಿಟ್ಟಿನಲ್ಲಿ ಪೋಲೀಸ್ ಇಲಾಖೆ ಒಂದು ಮಹತ್ವದ ಹೆಜ್ಜೆ ಇಟ್ಟಂತಾಗಿದೆ ಎಂದರಲ್ಲದೆ,
ತಾವುಗಳು ಶ್ರೀಗಂಧ ಬೆಳೆಯುವ ರೈತರನ್ನು ಹಾಗೂ ಸರ್ಕಾರಿ ಅರಣ್ಯದಲ್ಲಿರುವ ಶ್ರೀಗಂಧ ಹಾಗೂ ಇನ್ನಿತರೆ ಅಮೂಲ್ಯವಾದ ವನಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಕಳ್ಳರನ್ನು ಬಂಧಿಸಿರುವುದು ರೈತರಲ್ಲಿ ಒಂದು ರೀತಿಯ ನಿರಾಳಬಾವ ಮೂಡಿಸಿದೆ. ಜಿಲ್ಲೆಯ ಆರು ತಾಲೂಕುಗಳಲ್ಲಿ ಲಕ್ಷಾಂತರ ಸಂಖ್ಯೆಯ ಶ್ರೀಗಂಧವನ್ನು ರೈತರು ತಮ್ಮ ಮಕ್ಕಳಿಗಿಂತ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಟ್ಟು ಬೆಳೆಸುತ್ತಿದ್ದಾರೆ ಇದರಿಂದ ರಾಜ್ಯ ರಾಷ್ಟ್ರಕ್ಕೆ ಒಳ್ಳೆಯ ಹೆಸರು ಮತ್ತು ಆದಾಯ ತಂದುಕೊಡುತ್ತದೆ ಎಂದರು.
ಕರ್ನಾಟಕ ಶ್ರೀಗಂಧದ ಬೀಡು ಎಂದು ಮತ್ತೊಮ್ಮೆ ಹೆಸರಾಗಬೇಕೆಂದು ಬಯಸುತ್ತಾ ನೀವು ಶ್ರೀಗಂಧ ಕಳ್ಳರನ್ನು ಮೂಲವತ್ಪಾಟನೆ ಮಾಡಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತಾ, ಚಿತ್ರದುರ್ಗ ಜಿಲ್ಲೆಯ ಶ್ರೀಗಂಧ ಬೆಳೆಗಾರರ ಸಂಘ ಹಾಗೂ ಅಖಿಲ ಕರ್ನಾಟಕ ಶ್ರೀಗಂಧ ಹಾಗೂ ವನಕೃಷಿ ಬೆಳಗಾರರ ಸಂಘದಿಂದ ಜಿಲ್ಲಾ ಶ್ರೀಗಂಧ ಬೆಳೆಗಾರರ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ರೈತರ ಪರವಾಗಿ ತಮಗೆ ಅಭಿನಂದನೆಗಳು ಎಂದರಲ್ಲದೆ,
ನಮ್ಮ ರಾಜ್ಯ ಶ್ರೀಗಂಧ ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀಯುತ ಅಮರನಾರಾಯಣ್ ಅವರು ಮತ್ತು ಪದಾಧಿಕಾರಿಗಳು ಅವಿರತವಾಗಿ ಶ್ರೀಗಂಧ ಬೆಳೆಯ ರಕ್ಷಣೆ ಬಗ್ಗೆ ಹೋರಾಡುತ್ತಿದ್ದಾರೆ. ಚಿತ್ರಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಯಾದ ಶ್ರೀಯುತ ಕಾಂತರಾಜ್ ಅವರಿಗೂ ಅವರ ಸಿಬ್ಬಂದಿ ವರ್ಗದವರಿಗೂ ತಾಲ್ಲೂಕಿನ ರೈತರ ಪರವಾಗಿ ಧನ್ಯವಾದಗಳು ಎಂದರಲ್ಲದೆ, ಇದನ್ನು ಇಲ್ಲಿಗೆ ಬಿಡದೆ ಶ್ರೀಗಂಧ ಕಡಿಯುವ ಕಳ್ಳರು ಅದನ್ನು ಖರೀದಿ ಮಾಡುವ ಕದೀಮರು ಹಾಗೂ ಕಾರ್ಖಾನೆಯವರನ್ನು ಎಡೆಮುರಿ ಕಟ್ಟಬೇಕು ಎಂಬುದಾಗಿ ಈ ಮೂಲಕ ಒತ್ತಾಯಿಸಿದ್ದಾರೆ.

ಚಳ್ಳಕೆರೆ ಕ್ಷೇತ್ರದ ಶಾಸಕರ ಭವನ ಜ್ಞಾನ ಬಂಡರವಾಗಿದ್ದು ಇದು ರಾಜ್ಯಕ್ಕೆ ಮಾದರಿಯಾಗಿದೆ ತರಳು ಬಾಳು ಜಗದ್ದುರು ಬೃಹನ್ಮಠದ ಶ್ರೀಶಿವಕುಮಾರಸ್ವಾಮೀಜಿ .


ಸೆ.27 ಚಳ್ಳಕೆರೆ ಶಾಸಕರ ಭವನ ರಾಜ್ಯಕ್ಕೆ ಮಾದರಿಯಾಗಿದ್ದು ಇದರ ಒಂದು ಸಂಪೂರ್ಣ ವೀಡಿಯೊ ಮಾಡಿಕೊಡಿ ನಾನು ರಾಜ್ಯಕ್ಕೆ ಪ್ರಚಾರ ಮಾಡಲಾಗುವುದು ಎಂದು ಸಿರಿಗೆರೆ ಮಠದ ತರಳು ಬಾಳು ಜಗದ್ದುರು ಬೃಹನ್ಮಠದ ಶ್ರೀಶಿವಕುಮಾರಸ್ವಾಮೀಜಿ ಶ್ಲಾಘಿಸಿದರು.


ಚಳ್ಳಕೆರೆ ನಗರದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಸಂದರ್ಭದಲ್ಲಿ ಶ್ರೀಗಳು ಶಾಸಕರ ಭವನಕ್ಕೆಭೇಟಿ ನೀಡಿ ವೀಕ್ಷಣೆ ಮಾಡುವ ಮೂಲಕ ಮೆಚ್ಚಿಗೆ ವ್ಯಕ್ತ ಪಡಿಸಿದರು.
ಶಾಸಕರ ಭವನದಲ್ಲಿ ಸ್ವಾತ್ರಂತ್ರ್ಯ ಫೂರ್ವದ ನಂತರ ರಾಷ್ಟ್ರಪತಿ, ರಾಜ್ಯಪಾಲರು, ಪ್ರಧಾನ ಮಂತ್ರಿಗಳ, ರಾಜ್ಯದ ಮುಖ್ಯಮಂತ್ರಿಗಳ, ಚಿತ್ರದುರ್ಗ ಕ್ಷೇತ್ರದ ಸಂಸದರ , ಕ್ಷೇತ್ರದ ಶಾಸಕರ , ಬುದ್ದ, ಬಸವ,ಅಂಬೇಡ್ಕರ್ ಸೇರಿದಂತೆ ರಾಷ್ಟ್ರೀಯ ಹಬ್ಬಗಳ ಆಚರಣೆಯ ಮಹಾನ್ ಸಂತರ ಭಾವ ಚಿತ್ರ ಹಾಗೂ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಪೋಟೊಗಳನ್ನು ಹಾಕಿರುವುದು ನೋಡಿದರೆ ಇಲ್ಲಿ ಜಾತಿ, ಧರ್ಮ, ಪಕ್ಷ ಬೇದ ಮರೆತು ಸರ್ವ ಜನಾಂಗದ ತೋಟವಿದ್ದಂತಿದ

ಶಾಸಕರ ಭವನಕ್ಕೆಬರುವ ಸಾರ್ವಜನಿಕರಿಗೆ ಅನ್ನ ಸಾಂಭಾರ್, ಬಿಸಿ ಬಿಸಿ ಕಾಫೀ, ಓದಲು ಎಲ್ಲಾ ದಿನಪತ್ರಿಕೆಗಳು, ವಿವಿಧ ಪುಸ್ತಗಳನ್ನು ಸಂಗ್ರಹಿ ಗ್ರಂಥಾಲಯ ಮಾಡಿರುವುದು ವಿಶಾಲವಾದ ಸಭಾಂಗಣ ನಿರ್ಮಿಸಿರುವುದು ಇದು ರಾಜಕ್ಕೆ ಮಾದರಿಯಾಗಿದೆ ಎಂದು ಶಾಸಕರ ಭವನದಲ್ಲಿ ಹಾಕಿರುವ ಪೋಟೊಗಳನ್ನು ವೀಕ್ಷಿಸಿ ಶಾಸಕ ಟಿ.ರಘುಮೂರ್ತಿಗೆ ಮೆಚ್ಚಿಗೆ ವ್ಯಕ್ತಪಡಿಸಿದರು.
ಈಸಂದರ್ಭದಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ಸಹ ಜ್ಞಾನ ಬಂಡರ ತುಂಭಿದ ಶಾಸಕರ ಭವನ ರಾಜ್ಯದಲ್ಲಿ ಇದೇ ಪ್ರಥಮ ಎಂದ ಬಣ್ಣಿಸಿದರು.

ತಾಪಂ ಇಒ ಹೊನ್ನಯ್ಯ ಶ್ರೀಗಳಿಗೆ ಸನ್ಮಾನಿಸಿಲು ಬಂದಾಗ ನೀನು ಹೊನ್ನಯ್ಯ ಅಲ್ವಾ ಎಂದು ಶ್ರೀಗಳು ಪ್ರಶ್ನಿಸಿದಾಗ ಹೌದು ಗುರುಗಳೆ ನೀವು 362 ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ನೆರವಿಗೆ ಬಂದವರು. ಎಂದು ನಮಿಸಿದಾಗ.

ಶ್ರೀಗಳು ಮಾತನಾಡಿ ಅಧಿಕಾರಗಳು ಸರಕಾರಕ್ಕೆ ನೀಡಿದ ತಪ್ಪು ಮಾಹಿತಿಯಿಂದ 2011 ರ ಬ್ಯಾಚ್ ನಲ್ಲಿ ಕೆಎಎಸ್ ಮಾಡಿಕೊಂಡು 362 ಜನರು ಬೀದಿಗೆ ಬೀಳುವಂತಾಗಿತ್ತು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾಹಿತಿ ನೀಡಿ ಅಧಿಕಾರಿಗಳ ತಪ್ಪು ಮಾಹಿತಿಯಿಂದ 362 ಜನರು ಬೀದಿಗೆ ಬೀಳುವಂತಾಗಿದೆ ಕೂಡಲೆ ಪರಿಶೀಳನೆ ನಡೆಸಿ ನೌಕರಿ ನೀಡಬೇಕು ನಿಮ್ಮಿಂದ ಸಾಧ್ಯವಾಗದಿದ್ದರೆ ಕೇಂದ್ರ ಸರಕಾರದಿಂದ ಮಾಡಿಸುತ್ತೇನೆ ಎಂದುಹೇಳಿದ್ದೆ ಯಡೀಯೂರಪ್ಪ ಅಧಿಕಾರದಿಂದ ಕೆಳಗಿಳಿದಾಗ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಪರಿಶೀಲನೆ ನಡೆಸಿ 362 ಜನರಿಗೆ ನೌಕರಿ ಆದೇಶ ನೀಡಿದ್ದಾ ರೆ ಎಂದು ಮೆಲುಕು ಹಾಕಿದರು.


ಶಾಸಕ ಟಿ.ರಘುಮೂರ್ತಿ, ನಗರಸಭೆ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಕೆಲಸ ಕಾರ್ಯ ಬಗ್ಗೆ ಮಾರಮ್ಮನ ದೇವಸ್ಥಾನದ ಗೋಡೆಗೆ ನಾಣ್ಯಗಳನ್ನು ಅಂಟಿಸುವ ಮೂಲಕ ಕೇಳಿಕೊಳ್ಳುತ್ತಿರುವ ಭಕ್ತರು..


ಚಳ್ಳಕೆರೆ ಸೆ.22 ಶ್ರೀ ಸಾಮಾನ್ಯರು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಹಲವು ಹತ್ತು ದೇವರುಗಳನ್ನು ಪೂಜಿಸುತ್ತಾರೆ ತಮಗೆ ಇಷ್ಟವಾದ ದೇವರಿಗೆ ವೈವಿದ್ಯಮಯ ಹರಕೆ ಪ್ರಮಾಣ ಮಾಡುವ ಮೂಲಕ ತಮ್ಮ ಇಷ್ಟಾರ್ಥ ಈಡೇರಿದ ನಂತರ ತಮ್ಮ ಹರಕೆಯಂತೆ ಶ್ರದ್ದೆ ಭಕ್ತಿಗಳಿಂದ ತಾವ ಅಂದುಕೊಂಡಂತೆ ಹರಕೆ ತೀರಿಸುವುದು ಹಿಂದುಗಳ ಧಾರ್ಮಿಕ ಪದ್ದತಿಯಾಗಿದೆ.
ಅನೇಕರು ದೇವಾಲಯದಲ್ಲಿ ಉರುಳು ಸೇವೆ ಮಾಡುವುದು ಹಣ್ಣು ಕಾಯಿ, ಬಟ್ಟೆ ಬರೆ, ದವಸದಾನ್ಯ, ಸಮರ್ಪಿಸುವುದು ಒಂದು ಸಾಮಾನ್ಯ ಪದ್ದತಿ ಇನ್ನು ಆರ್ಥಿಕವಾಗಿ ಸದೃಡರಾದವರು ಬೆಳ್ಳಿ ಬಂಗಾರ, ದಾಸೋಹ ಏರ್ಪಾಡು, ಇತ್ಯಾದಿಗಳನ್ನು ಅನುಸರಿಸುತ್ತಾರೆ.
ಇದೇ ರೀತಿ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದ ಮುಜರಾಯಿ ಇಲಾಖೆ ಆಡಳಿತಕ್ಕೊಳಪಟ್ಟಿರುವ ಶ್ರೀ ಗೌರಸಮದ್ರಮಾರಮ್ಮ ದೇವಿಯ ದರ್ಶನ ಪಡೆಯಲು ರಾಜ್ಯದ ವಿವಿಧಕಡೆಗಳಿಂದ ಭಕ್ತರು ಅಗಮಿಸುತ್ತಾರೆ. ಪೂಜೆ ಪನಸ್ಕಾರಗಳನ್ನು ಮಾಡಿ ತಮ್ಮ ದೈವ ಭಕ್ತಿಯನ್ನು ಮೆರೆಯುತ್ತಾರೆ ಈ ದೇವಾಲಯಕ್ಕೆ ಗ್ರಾಮೀಣ ಪ್ರದೇಶಗಳ ಅನಕ್ಷರಸ್ಥ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಜಾತ್ರೆ ಸೇರಿದಂತೆ ವಿಶೇಷ ದಿನಗಳಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಈರಳ್ಳಿ,ಕೋಳಿಗಳನ್ನು ತೂರುವುದು, ಪ್ರಾಣಿ ಬಲಿ, ಬೇವಿನ ಸೀರೆ ಅರ್ಪಣೆಯಂತ ಹರಕೆ ತೀರಿಸುವುದು ಇಲ್ಲಿ ಸಂಪ್ರದಾಯ .
ಭಕ್ತರು ದೇವಾಲಯದ ಗೋಡೆಗಳ ಬಣ್ಣ ಸುಣ್ಣ ಸೀಮೆಂಟ್ ಕೆರೆದು ಅದಕ್ಕೆ ನಾಣ್ಯಗಳನ್ನು ಹಚ್ಚುತ್ತಾರೆ ಅವುಗಳು ಗೋಡೆಗೆ ಅಂಟಿಗೊAಡರೆ ತಮ್ಮ ಇಷ್ಟಾರ್ಥ ಈಡೇರುತ್ತದೆ ಎಂದು ಹರ್ಷಪಡುತ್ತಾರೆ. ಇಲ್ಲವಾದರೆ ಕೆಲಸ ಕಾರ್ಯಗಳು ನಮ್ಮಂತೆ ಆಗುವುದಿಲ್ಲ ಎಂಬ ನಂಭಿಕೆ ಭಕ್ತರಲ್ಲಿ ಮೂಡುತ್ತದೆ.

ದಂಢ ಸಹಿತ ಸಂಘ ಸಂಸ್ಥೆಗಳ ಲೆಕ್ಕಪತ್ರ ದಾಖಲೆ ಸಲ್ಲಿಗೆ ಅವಕಾಶ

ಚಿತ್ರದುರ್ಗ ಸೆ.02:
1960ರ ಕರ್ನಾಟಕ ಸಂಘಗಳ ನೊಂದಣಿ ಅಧಿನಿಯಮದ ಕಲಂ 13ರ ಪ್ರಕಾರ ನೊಂದಣಿಯಾದ ಎಲ್ಲಾ ಸಂಘ ಸಂಸ್ಥೆಗಳು ವಾರ್ಷಿಕವಾಗಿ ಆಸ್ತಿ-ಜವಾಬ್ದಾರಿ ತಃಖ್ತೆ ಕಾರ್ಯಕಾರಿ ಸಮಿತಿ ಸದಸ್ಯರ ವಿವರಗಳು ಹಾಗೂ ಲೆಕ್ಕಪತ್ರಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ ಹಲವು ಸಂಘ ಸಂಸ್ಥೆಗಳು 5 ವರ್ಷಗಳಿಂದ ಲೆಕ್ಕಪತ್ರಗಳನ್ನು ಸಲ್ಲಿಸಿರುವುದಿಲ್ಲ. ಸಂಘ ಸಂಸ್ಥೆಗಳ ಹಿತಾಸಕ್ತಿ ಹಿನ್ನಲೆಯಲ್ಲಿ ಸಹಕಾರಿ ಸಂಘಗಳ ಪ್ರಾಧಿಕಾರ ಪ್ರತಿ ವರ್ಷಕ್ಕೆ ರೂ.3000 ದಂಢ ವಿಧಿಸಿ 2024 ಜೂನ್ 30ರ ವರೆಗೆ ಲೆಕ್ಕಪತ್ರಗಳನ್ನು ಸಲ್ಲಿಸಲು ಅವಕಾಶ ನೀಡಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಚಿತ್ರದುರ್ಗ ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜನ ಬರಿಗಾಲಿನಲ್ಲಿ ಬಂದರೂ, ಚೆಡ್ಡಿ ಹಾಕಿಕೊಂಡು ಬಂದರೂ ಅವರೇ ಸರ್ಕಾರದ ಮಾಲೀಕರು ಮುಖ್ಯ ಮಂತ್ರಿ‌ಸಿದ್ದರಾಮಯ್ಯ


ಮೈಸೂರು. ಜನ ಬರಿಗಾಲಿನಲ್ಲಿ ಬಂದರೂ, ಚೆಡ್ಡಿ ಹಾಕಿಕೊಂಡು ಬಂದರೂ ಅವರೇ ಸರ್ಕಾರದ ಮಾಲೀಕರು. ಕಾರಿನಲ್ಲಿ ಓಡಾಡುವ ಅಧಿಕಾರಿಗಳು ಬರಿಗಾಲಿನಲ್ಲಿ ಬರುವವರನ್ನು ಗೌರವದಿಂದ ಕಾಣಬೇಕು. ಅವರ ಸಮಸ್ಯೆ ಆಲಿಸಿ ಪರಿಹಾರ ಒದಗಿಸಿ ಕೊಡಬೇಕು.
ಮೊದಲು ನನ್ನ ಜಿಲ್ಲೆಯಲ್ಲಿ ಜಿಲ್ಲಾಡಳಿತ ಇನ್ನಷ್ಟು ಚುರುಕಾಗಬೇಕು. ನಿಯಮಬದ್ಧವಾಗಿ, ಕಾಲ ಮಿತಿಯಲ್ಲಿ ಕೆಲಸ ಮಾಡದಿದ್ದರೆ ಅದನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಜನ ಯಾವ ನಿರೀಕ್ಷೆ ಇಟ್ಟುಕೊಂಡು ಸರ್ಕಾರವನ್ನು ಬದಲಾಯಿಸಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಂಡು ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು.
– ಮುಖ್ಯಮಂತ್ರಿ

ದೀಪದ ಬೆಳಕಿನಲ್ಲಿ ವೃದ್ಧೆ. ಮುಖ್ಯಮಂತ್ರಿ ಸಿದ್ದಾರಾಮಯ್ಯಗೆ ಟ್ವೀಟ್ ನಲವತ್ತು ವರ್ಷಗಳ ಅಜ್ಜಿಯ ಕನಸು ನನಸು.

ಚಳ್ಳಕೆರೆ ಆ.25 ಪ್ರತಿನಿತ್ಯ ದೀಪದ ಬೆಳಕಿನಲ್ಲಿ ಬದುಕನ್ನು ನಿಭಾಯಿಸುತ್ತಿದ್ದ ವೃದ್ಧೆಯ ಮನೆ ಬರೋಬ್ಬರಿ ನಲವತ್ತು ವರ್ಷದ ಬಳಿಕ ಇದೀಗ ವಿದ್ಯುತ್ ಬೆಳಕನ್ನು ಕಂಡಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದ ದೋಣಿಯಮ್ಮ ಎಂಬ ಅನಾಥೆ ವೃದ್ದೆ ನಾಗರಿಕತೆ ಬೆಳೆದು ಶತಮಾನಗಳು ಕಳೆದರೂ , ವಿದ್ಯುತ್ ಸಂಪರ್ಕ ಪಡೆಯಲು ಹಣವಿಲ್ಲದೆ ಸುಮಾರು 40 ವರ್ಷಗಳಿಂದ ದೀಪದ ಬೆಳಕಿನಲ್ಲಿ ಬದುಕು‌ ಸಾಗಿಸುತ್ತಿರುವುದು ಈ ದೇಶದ ದುರಂತವೇ ಸರಿ ಎಂದು ಬಸಾಪುರ ಗ್ರಾಮದ ಮಹೇಂದ್ರ ಎಂಬ ಯುವಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ಟ್ವಿಟ್ಟರ್ (ಎಕ್ಸ್). ಖಾತೆ


ಬೆಸ್ಕಾಂ .ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗೆಳಿ ಅಜ್ಜಿಯ ಮನೆಯ ಫೋಟೋ ಹಂಚಿಕೊಂಡ ತಕ್ಷಣ ಮುಖ್ಯಮಂತ್ರಿ ಕಾರ್ಯಾಲಯದಿಂದ ಕೂಡಲೆ ಅಜ್ಜಿ ಮನೆಗೆ ವಿದ್ಯುತ್ ಸಂಪರ್ಕ ನೀಡುವಂತೆ ಬಂದ ನಿರ್ಧೇಶನದ ಮೇರೆಗೆ ತಹಶೀಲ್ದಾರ್ ರೇಹಾನ್ ಪಾಷ ತಳಕು ಬೆಸ್ಕಾಂ ಎಇಇ ಅಧಿಕಾರಿಗಳಿಗೆ ಸೂಚನೆ ನೀಡಿದ ಮೇರೆಗೆ ಬೆಸ್ಕಾಂ‌ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದೌಡಾಯಿಸಿ ವಿದ್ಯು ವೈರ್ ಎಳೆದು ಬಲ್ಬ್ ಹಾಕಿ ಉಚಿತವಾಗಿ ವಿದ್ಯುತ್ ಸಂಪರ್ಕ ನೀಡುವ ಮೂಲಕ ದೀಪದ ಕತ್ತಲು ಮನೆಗೆ ವಿದ್ಯುತ್ ಸಂಪರ್ಕ ನೀಡು ಬೆಳಕು ಕಲ್ಪಿಸಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದ್ರೂ, ಈ ವೃದ್ಧೆಯ ಮನೆಗೆ ವಿದ್ಯುತ್ ಸಂಪರ್ಕವಿರಲಿಲ್ಲ. ಆದ್ರೆ ಇದೀಗ ರಾಜ್ಯದ ದೊರೆಗೆ ಟ್ವಿಟ್ ಮೂಲಕ ಅಜ್ಜಿಯ ಸಮಸ್ಯೆ ಗಮನ ಸೆಳೆದಿದ್ದರಿಂದ ವೃದ್ಧೆಯ ನಲವತ್ತು ವರ್ಷಗಳ ಕನಸು ಈಡೇರಿದೆ.
ಬಡಕುಟುಂಬಗಳಿಗೆಂದೇ ಭಾಗ್ಯ ಜ್ಯೋತಿ.ಕುಟಿರ ಜ್ಯೋತಿ. ಇತ್ತೀಗೆ ಗೃಹಜ್ಯೋತಿ ಎಂಬ ಹೆಸರಿನಲ್ಲಿ ಸರಕಾರಗಳು ಉಚುತ ವಿದ್ಯುತ್ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದರೂ ಸಹ ಸ್ಥಳಿಯ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ಅರ್ಹ ಬಡಕುಟುಂಬಗಳು ಸೌಲಭ್ಯಗಳಿಂದ ವಂಚಿತರಾಗ ಬೇಕಿದೆ ಈಗಲಾದರೂ ಇನ್ನು ಇಂತಹ ಕುಟುಂಬಗಳನ್ನು ಗುರುತಿಸಿ ಸೌಲಭ್ಯಗಳನ್ನು ತಲುಪಿಸುವರೇ ಕಾದು ನೋಡ ಬೇಕಿದೆ. ಬಸಾಪುರ ಗ್ರಾಮದ ವೃದ್ಧೆಯ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಹಾಯ ಮಾಡಿದ. ಕತ್ತಲು ಕವಿದಿದ್ದ ಅಜ್ಜಿಯ ಮನೆಗೆ ವಿದ್ಯುತ್ ಸಂಪರ್ಕ ದೊರೆಯುವಂತೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಜಿಲ್ಲಾಡಳಿತ ಚಳ್ಳಕೆರೆ ತಹಶೀಲ್ದಾರ್. ಕಲ್ಯಾಣ ಇಲಾಖೆ. ಗ್ರಾಮೀಣಾಭಿವೃದಗದ್ಧಿ .ಬೆಸ್ಕಾಂ ಸಹಕರಿದ ಇಲಾಖೆಗಳಿಗೆ ವೃದ್ಧೆ ದೋಣಿಯಮ್ಮ ಯುವಕ ಮಹೇಂದ್ರ ಧನ್ಯವಾದಗಳನ್ನು ತಿಳಿಸಿದ್ದಾರೆ. ಮನೆಗೆ ಬೆಳಕು ಸಿಕ್ಕಿದ ಖುಷಿಯಲ್ಲಿದ್ದಾರೆ ದೋಣಿಯಮ್ಮ

ಮದ್ಯ ಅಕ್ರಮ ಮಾರಾಟ; 3 ವರ್ಷ ಜೈಲು ಶಿಕ್ಷೆ

ಚಿಕ್ಕೋಡಿ: ಮದ್ಯ ಅಕ್ರಮ ಮಾರಾಟ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿತ ವ್ಯಕ್ತಿಯೊಬ್ಬನಿಗೆ ಮೂರು ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹20 ಸಾವಿರ ದಂಡ ವಿಧಿಸಿ ಇಲ್ಲಿನ ಪ್ರಿನ್ಸಿಪಲ್ ನ್ಯಾಯಾಲಯ ತೀರ್ಪು ನೀಡಿದೆ.

ತಾಲ್ಲೂಕಿನ ವಡ್ರಾಳ ಗ್ರಾಮದ ಅಪ್ಪಯ್ಯ ಲಕ್ಷ್ಮಣ ಹಿರಾಬಾಳೆ ಶಿಕ್ಷೆಗೆ ಒಳಗಾದವರು. ನ್ಯಾಯಾಧೀಶ ಚಿದಾನಂದ ಬಡಿಗೇರ ಅವರು ಪ್ರಕರಣದ ವಿಚಾರಣೆ ನಡೆಸಿ, ಅಬಕಾರಿ ಕಾಯ್ದೆ ಅಡಿಯಲ್ಲಿ ಆರೋಪಿತನಿಗೆ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಅಭಿಯೋಜಕರಾಗಿ ಬಸವರಾಜ ಬಸವಂತ ಓಶಿ ಕಾರ್ಯ ನಿರ್ವಹಿಸಿದ್ದರು. ತನಿಖಾಧಿಕಾರಿ ಸಂಗಮೇಶ ದಿಡಗಿನಾಳ ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ವೇಳೆಯಲ್ಲಿ ಕಾಲ ಕಾಲಕ್ಕೆ ನ್ಯಾಯಾಲಯದ ಎದುರು ಸಾಕ್ಷಿಗಳನ್ನು ಹಾಜರುಪಡಿಸಲು ಈಗಿನ ಪಿಎಸ್ಐ ಬಸನಗೌಡ ಪಾಟೀಲ ಕ್ರಮ ಕೈಗೊಂಡಿದ್ದಾರೆ.

You cannot copy content of this page