ಕೊಪ್ಪಳ, ನವೆಂಬರ್ 04 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ದೇವದಾಸಿ ಪುನರ್ವಸತಿ ಯೋಜನೆ ಅಡಿ 2021-22ನೇ ಪರಿಶಿಷ್ಠ ಜಾತಿ ಉಪ ಯೋಜನೆಯಡಿ ಬಳಕೆಯಾಗದ ಅನುದಾನದಲ್ಲಿ ನಿವೇಶನ ಹೊಂದಿ ವಸತಿ ರಹಿತವಾಗಿರುವ ಮಾಜಿ ದೇವದಾಸಿ ಮಹಿಳೆಯರಿಗೆ ವಸತಿ ಸೌಲಭ್ಯ ಕಲ್ಪಿಸಲು ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದೆ.
ದೇವದಾಸಿ ಪುನರ್ವಸತಿ ಯೋಜನೆ, ಕೊಪ್ಪಳ ಜಿಲ್ಲೆಗೆ ಗ್ರಾಮೀಣ ಪ್ರದೇಶದಲ್ಲಿ 171 ಫಲಾನುಭವಿಗಳಿಗೆ ಘಟಕದ ವೆಚ್ಛ ಪ್ರತಿ ಫಲಾನುಭವಿಗಳಿಗೆ ರೂ.175000/- ಸಹಾಯಧನ ಮತ್ತು ನಗರ ಪ್ರದೇಶದ 25 ಫಲಾನುಭವಿಗಳಿಗೆ ಘಟಕ ವೆಚ್ಛ ರೂ.200000/- ಗಳಂತೆ ಸಹಾಯಧನವನ್ನು ನೀಡಿ ವಸತಿ ಸೌಲಭ್ಯ ಕಲ್ಪಿಸಲು ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾತ್ತು. ಗುರಿಗಳನ್ವಯ ಅರ್ಜಿಗಳು ಬಾರದ ಕಾರಣ ಅರ್ಜಿ ಸಲ್ಲಿಕೆ ಅವಧಿಯನ್ನು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ.
ಅರ್ಹ ಫಲಾನುಭವಿಗಳು ಕಚೇರಿಯಿಂದ ಉಚಿತವಾಗಿ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಆರ್.ಡಿ ನಂಬರ್ ಹೊಂದಿರುವ), ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ (ಹೊಸ ಚೀಟಿ), ಇತ್ತೀಚಿನ 4 ಭಾವಚಿತ್ರಗಳು, ನಿವೇಶನದ ಖಾತಾ ಉತ್ತಾರ, ಆಧಾರ ಕಾರ್ಡ್ ಪ್ರತಿ, ಚಾಲ್ತಿ ಬ್ಯಾಂಕ್ ಪಾಸ್ ಬುಕ್ ಪ್ರತಿ, ವಯಸ್ಸಿನ ಪ್ರಮಾಣ ಪತ್ರ (ಸರ್ಕಾರಿ ವೈದ್ಯರಿಂದ), ದೂರವಾಣಿ ಸಂಖ್ಯೆಯನ್ನು ನಮೂದಿಸಿ ದ್ವಿಪ್ರತಿಯಲ್ಲಿ ಸಲ್ಲಿಸಬೇಕು. ಅವಧಿ ನಂತರ ಬಂದ ಹಾಗೂ ಅಪೂರ್ಣ ಮಾಹಿತಿ ಇರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ದಾದೇಸಾಬ್ ಹಿರೇಮನಿ, ಕೊಪ್ಪಳ-9538628359, ಭೀಮಣ್ಣ ಟಿ.ಜಿ., ಗಂಗಾವತಿ-9880518498, ಎಮ್. ಮರಿಯಪ್ಪ, ಕುಷ್ಟಗಿ-9686148933, ರೇಣುಕಾ ಎಮ್, ಯಲಬುರ್ಗಾ-9686072296 ಇವರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
=====
ಮಾಜಿ ದೇವದಾಸಿ ಮಹಿಳೆಯರಿಗೆ ವಸತಿ ಸೌಲಭ್ಯ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments