ಹಿರಿಯೂರು:
ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಟೈಲರಿಂಗ್ ವೃತ್ತಿ ಉತ್ತಮವಾಗಿದ್ದು ಈ ತರಬೇತಿ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು ಎಂಬುದಾಗಿ ಕ್ಷೇತ್ರದ ಶಾಸಕರು ಹಾಗೂ
ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಹೇಳಿದರು.
ತಾಲ್ಲೂಕಿನ ಮಸ್ಕಲ್ ಗ್ರಾಮದಲ್ಲಿ ಜಿಲ್ಲಾ ಖನಿಜ ನಿಗಮ ಪ್ರತಿಷ್ಠಾನ ಚಿತ್ರದುರ್ಗ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿರಿಯೂರು ಸಹಯೋಗದೊಂದಿಗೆ ಅನುಷ್ಠಾನ ಸಂಸ್ಥೆ ಗ್ರಾಮ ಸಂಸ್ಥೆ ಇವರ ಅನುಷ್ಠಾನದೊಂದಿಗೆ ಹಮ್ಮಿಕೊಳ್ಳಲಾಗಿದ್ದ ನಿರುದ್ಯೋಗಿ ಯುವತಿಯರಿಗೆ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಮುಂದಿನ ದಿನಗಳಲ್ಲಿ ಟೈಲರಿಂಗ್ ತರಬೇತಿಯನ್ನು ಇನ್ನು ಹೆಚ್ಚು ಜನರಿಗೆ ಕೊಡಿಸಲಾಗುವುದು ಮತ್ತು ತಾಲೂಕಿನಲ್ಲಿ ಗಾರ್ಮೆಂಟ್ ಕಾರ್ಖಾನೆಗಳನ್ನು ಪ್ರಾರಂಭಿಸಲಾಗುವುದು ಎಂಬುದಾಗಿ ಅವರು ಭರವಸೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಕೊಲ್ಲಮ್ಮ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ತಾಯಿ ಮುದ್ದಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ, ಕೆಪಿಸಿಸಿ ಸದಸ್ಯ ಕಂದಿಕೆರೆಸುರೇಶ ಬಾಬು, ಎಂ.ಎ. ಶ್ರೀನಿವಾಸಮಸ್ಕಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎಂ. ಶ್ರೀಧರ, ಮುಖ್ಯ ಕಾರ್ಯನಿರ್ವಾಹಕರು, ಗ್ರಾಮಸಂಸ್ಥೆ ಚಳ್ಳಕೆರೆ, ಗ್ರಾಪಂ ಸದಸ್ಯರಾದ ವಿ.ಅರುಣ್ ಕುಮಾರ್, ಎಂ.ಹನುಮಂತಯ್ಯ, ಕಲಾವತಿ ತಿಪ್ಪೇಸ್ವಾಮಿ, ಮಂಜುಳಾ ವೀರೇಶ್, ಮುಖಂಡರುಗಳಾದ ಪರಮೇಶ್ವರಪ್ಪ, ಪೆಪ್ಸಿ ನಾಗರಾಜ್, ಕುಮಾರ್, ಸೆಂಥಿಲ್ ಕುಮಾರ್, ಹೇಮಂತ್ ಗೌಡ, ಪಿ.ಎಚ್. ಧನಂಜಯ ಸೇರಿದಂತೆ ಅನೇಕ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಆರಂಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ವೈ.ನಾಗರಾಜ್ ಮಸ್ಕಲ್ ಸ್ವಾಗತಿಸಿದರು. ಗ್ರಾಮಸಂಸ್ಥೆಯ ಬಸವರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಎನ್. ದೇವರಾಜ್ ವಂದಿಸಿದರು.
0 Comments