ಮಳೆಯೂ ಇಲ್ಲ. ಬೆಳೆಯೂ ಇಲ್ಲ. ಬೆಳೆ ದರ ಕುಸಿತ .ಪರಿಹಾರ ಬೆಳೆವಿಮೆ ಯಾವಾಗ ಅನ್ನದಾತರ ಗೋಳು ಕೇಳೋರಾರು ?.

by | 19/10/23 | ಕೃಷಿ


ಚಳ್ಳಕೆರೆ ಅ.19 ರೈತನ ಬಾಳಿಗೆ ಆಸರೆಯಾಗದ ಶೇಂಗಾ ಕೈಯಲ್ಲಿದ್ದ ಹಣವೂ ಹೋಯಿತು. ಭೂತಾಯಿ ಮಡಿಲು ತುಂಬಿದ ಬೀಜವು ವ್ಯರ್ಥವಾಯಿತು. ಬಿತ್ತನೆ ಮಾಡಿದ ಬೀಜ ಅನ್ನದಾತರ ಕೈಯಲ್ಲಿದ್ದ ಹಣವೂ ಹೋಯಿತು ಅನ್ಬದಾತರ ಗೋಳು ಕೇಳೋರು ಯಾರು?.

ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬಡವರ ಬಾದಾಮಿ ಎಂದೇ ಖ್ಯಾತಿ ಪಡೆದಿರುವ ಪ್ರಮುಖ ವಾಣಿಜ್ಯ ಬೆಳೆಯಾದ ಶೇಂಗಾ ಬೆಳೆಯನ್ನು ರೈತರು ಹರಗಲು ಮುಂಸದಾಗಿದ್ದಾರೆ. ರೈತನ ಬಾಳಿಗೆ ಆಸರೆಯಾಗದ ಶೇಂಗಾ ಬೆಳೆ
ಮುಂಗಾರಿನಲ್ಲಿ ಬಿತ್ತನೆ ಮಾಡಿದ ಶೇಂಗಾ ಹಾಗೂ ಇತರೆ ಬೆಳೆಗಳು ಮಳೆಗಾಲದಲ್ಲೂ ಮಳೆ ಬಾರದೆ ಬೇಸಿಗೆ ಬಿಲಿನ ತಾಪವನ್ನು ಮೀರಿಸುವಂತೆ ಬಿಸಿಲಿನ ತಾಪಕ್ಕೆ ತಾಪಕ್ಮೆ ಸಿಲುಕಿ ಶೇಂಗಾ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಇದೂ ಒಂದು. ಬಿತ್ತನೆ ಮಾಡಿದ ನಂತರ ಮುಂಗಾರಿನ ಮಳೆಯು ಆಗಲಿಲ್ಲ. ಇನ್ನೇನು ಬೀಜ ಇರುವೆಗಳ ಪಾಲಾಗುವುದು ಗ್ಯಾರಂಟಿ ಎಂಬ ಆತಂಕದಲ್ಲಿ ರೆತರಿದ್ದಾಗ ಹಿಂಗಾರಿನ ಪ್ರಾರಂಭದಲ್ಲಿ ಅಪರೂಪವೆಂಬಂತೆ ಅಲ್ಪ-ಸ್ವಲ್ಪ ಮಳೆಯಾಯಿತು. ಇದರಿಂದ ಸ್ವಲ್ಪ ಜೀವ ಹಿಡಿದಿದ್ದ ಶೇಂಗಾ ಬೆಳೆಗೆ ಇಲ್ಲಿಯವರೆಗೂ ನಾಲ್ಕು ಹನಿ ಮಳೆಯಾಗದೇ ಇತುವುದರಂದ ಭೂಮಿಯಲ್ಲಿ ತೇವಾಂಶದ ಕೊರತೆಯಿಂದಾಗಿ ನಿರೀಕ್ಷಿತ ಪ್ರಮಾಣದ ಕಾಯಿ ಹಿಡಿಯಲಿಲ್ಲ ಜಾನುವಾರುಗಳಿಗೆ ಮೇವಿನ ಕೊರತೆ ನೀಗಿದಲು ಶೇಂಗಾ ಫಸಲನ್ನು ರೈತರು ಹರಗಲು ಮುಂದಾಗಿರುವ ರೆತರಿಗೆ ಕಾಯಿಗಳಿಲ್ಲದ ಖಾಲಿ ಫಸಲು ಕಂಡು ಭರಸಿಡಿಲು ಬಡಿದಂತಾಗಿದೆ.

ಸಕಾಲಕ್ಕೆ ಮಳೆಯಿಲ್ಲ ಬೆಳೆಯೂ ಬರಲಿಲ್ಲ ತಾಲೂಕಿನಾದ್ಯಂತ ಮುಂಗಾರು ಮತ್ತು ಹಿಂಗಾರಿನ ನಿರೀಕ್ಷಿತ ಪ್ರಮಾಣದಲ್ಲಿ ಮಳೆರಾಯನ ದರುಶನವಾಗಲಿಲ್ಲಾ. ಆದರೂ ಚಲ ಬೀಡದ ರೆತರು ಛಲದಂಕಮಲ್ಲನ ಹಾಗೇ ಸಾಲಸೂಲ ಮಾಡಿ ಬಿತ್ತನೆ ಕಾರ್ಯ ಮಾಡಿದ್ದರು. ಅಪರೂಪಕ್ಕೆ ಅಮವಾಸ್ಯೆ ಹುಣ್ಣಿಮೆಯಂತೆ ಬಂದ ವರುಣ ಭೂತಾಯಿಯನ್ನು ತಂಪುಗೊಳಿಸುವಲ್ಲಿ ಸಂಪೂರ್ಣ ವಿಫವಾಗಿ ಅಲ್ಪ ಸ್ವಲ್ಪ ಬೆಳೆದ ಬೆಳೆಗಳು ಮಳೆಗಾಲವಾದರೂ ಸಹ ಬೇಸಿಗೆ ಬಿಸಿಲಮ ಝಳಕ್ಕೆ ಬೆಳೆಗಳು ಸಂಪೂರ್ಣ ಒಣಗಿವೆ. ಇದನ್ನು ಕಂಡ ರೈತ ಬಿಟ್ಟರೆ ಅದೂ ಸಹ ವ್ಯರ್ಥವಾಗಿ ಹೋಗುತ್ತದೆ ಕಿತ್ತರೆ ಏನಾದರೂ ಜಾನುವಾರುಗಳಿಗೆ ಒಪ್ಪತ್ತಿನ ಮೇವಾದರೂ ಸಿಗುತ್ತದೆ ಎಂದು ಶೇಂಗಾ ಬೆಳೆಯನ್ನು ಹರಗಲು ಪ್ರಾರಂಭಿಸಿಧದಾರೆ.
ಕಾಯಿ ಕಟ್ಟದ ಶೇಂಗಾ ಬೆಳೆ
ರೆತನ ಬಾಳಿಗೆ ಆಸರೆಯಾಗಲಿಲ್ಲಾ. ಅದು ಏನೇ ಆಗಲಿ ದನಕರುಗಳಿಗೂ ಸಾಕಾಗುವಷ್ಟು ಮೇವು ಸಹ ಆಗಲಿಲ್ಲಾ. ಬಿತ್ತಿದ ಬೀಜ ವರುಣನ ವಕ್ರ ದೃಷ್ಟಿಗೆ ಸಿಲುಕಿ ಬೆಳೆ ನಷ್ಟವಾಗಿ ಸನ್ನದಾದತರು ಸಾಲದ ದವಡೆಗೆ ಸಿಲುಕುವಂತೆ ಮಾಡಿದೆ ಎನ್ನುವುದು ರೆತರ ನೋವು.
ಕಾಯಿಗಳೇ ಇಲ್ಲ ಬಿತ್ತಿದ ಶೇಂಗಾ ಬೀಜಮೊಳಕೆಯೊಡೆದು ಗೇನು ಚೋಟುದ್ದವಾಯಿತು. ಆದರೆ ಸಕಾಲಕ್ಕೆ ಮಗಿ ಮಳೆಯಾಗಿದ್ದರೆ ಸಮದ್ಧವಾದ ಕಾಯಿಗಳನ್ನು ಹಿಡಿಯುವ ಶಕ್ತಿ ಶೇಂಗಾ ಬೆಳೆಗೆ ಬರುತ್ತಿತ್ತು. ಮಗಿ ಮಳೆ ಸಂಪೂರ್ಣ ಕೆಕೊಟ್ಟಿದ್ದರಿಂದ ಶೇಂಗಾ ಬೆಳೆ ಕಾಯಿಗಳನ್ನು ಹಿಡಿಯಲಿಲ್ಲಾ. ಆಗಿರುವ ಒಂದೆರಡು ಕಾಯಿಗಳು ಕೂಡ ಜೊಳ್ಳಾಗಿ ಪರಿಣಮಿಸಿವೆ. ಇದನ್ನು ಕಂಡ ರೆತ ಮತ್ತಷ್ಟು ಮರಗುವಂತಾಗಿದೆ.
ಜಾನುವಾರುಗಳಿಗೂ ಸುಖ ನೀಡದ ಆಹಾರ ಮಳೆಯಿಲ್ಲದೇ ಸತತ ನಲುಗಿ ಬೆಳೆದಿರುವ ಅಲ್ಪ ಪ್ರಮಾಣದ ಶೇಂಗಾ ಬಳ್ಳಿ ಸಮದ್ದವಾದ ರೀತಿಯಲ್ಲಿ ಇಲ್ಲಾ. ಇದನ್ನು ಬಿಟ್ಟರೆ ಬಿಸಲಿಗೆ ಒಣಗಿ ಗಾಳಿಗೆ ಹಾರಿ ಹೊಗುತ್ತದೆ. ಕಿತ್ತರೂ ಸಹ ಇದಕ್ಕೆ ತಗಲುವ ವೆಚ್ಚದಷ್ಟಾದರೂ ಲಾಭವಿಲ್ಲಾ.ಏನೇ ಆಗಲಿ ಜಾನುವಾರುಗಳಿಗೆ ಸುಖ ನೀಡಿತ್ತೆಂದರೆ ಆ ರೀತಿಯ ಪೋಷಕಾಂಶಗಳಷ್ಟು ಈ ಬೆಳೆಯೂ ಬೆಳವಣಿಗೆಯಾಗಿಲ್ಲ. ಒಂದು ಎಕರೆಯಲ್ಲಿ ಬೆಳೆದ ಶೇಂಗಾ ಹೊಟ್ಟು ಎರಡು ಜಾನುವಾರುಗಳಿಗೆ ನಾಲ್ಕು ದಿನಕ್ಕೆ ಸಾಕಾಗುವುದಿಲ್ಲಾ ಇಂತಹ ಸಂದಿಗ್ಧ ಪರಸ್ಥಿತಿ ಎದುರಾಗಿದೆ ಎನ್ನುವುದು ಅನ್ನದಾತನ ಮನದಾಳದ ಮಾತು.
*ಬೆಳೆಯೂ ಕುಂಠಿತ ಬೆಲೆಯೂ ಪಾತಾಳಕ್ಕೆ.*
ಬೆಲೆಯು ಪಾತಾಳ ಕಂಡಿರುವ ಪರಿಣಾಮ ಅನ್ನದಾತರನ್ನು ನಿದ್ದೆಗೆಡುವಂತೆ ಮಾಡಿದೆ. ಹೀಗಾಗಿಯೇ ಅವರು ದಿಕ್ಕೆಟ್ಟಿದ್ದಾರೆ. ಸರಕಾರದ ವಿರುದ್ದ ಶಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆ ಇಳುವರಿ ಕುಂಠೊತ ಒಂದು ಕಡೆಯಾದರೆ ಬೆಲೆಯೂ ಕುಸಿದಿರುವುದರಿಂದ ಅನ್ನದಾತರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಉತ್ತಮವಾಗಿ ಬೆಲೆ ಇರುವುದು ನೋಡಿ ಅನ್ನದಾತರು ಬೆವರು ಸುರಿಸಿರುವುದಕ್ಕೂ ಸಾರ್ಥಕವಾಯಿತು. ಒಳ್ಳೆ ಬೆಲೆ ಸಿಗುತ್ತಿದೆ. ಇದಲ್ಲದೇ ಮಾಡಿದ ಸಾಲ ತೀರಿಸುವ ಜತೆಗೆ ಒಂದಿಷ್ಟು ಆದಾಯ ಕೂಡ ಬರುತ್ತದೆ ಅಂದುಕೊಂಡಿದ್ದರು. ಆದರೆ ಇದೀಗ ಇಳಿಕೆಯಿಂದಾಗಿ ರೈತರು ಆತಂಕಗೊಂಡಿದ್ದಾರೆ.

ಇದರಿಂದಾಗಿ ರೈತರು ಆರ್ಥಿಕವಾಗಿ ನಷ್ಟ ಅನುಭವಿಸುವಂತಾಗಿದೆ.
ಶೇಂಗಾ ಬೆಳೆಯಲು ಅನ್ನದಾತರು ಜಮೀನುಗಳಲ್ಲಿ ಹಗಲು ರಾತ್ರಿಯನ್ನದೇ ಕೃಷಿ ಮಾಡಿದ್ದಾರೆ. ಆದರೆ ಇದೀಗ ಬೆಲೆ ಪಾತಾಳ ಗರಡಿ ಕಂಡಿರುವುದು ನೋಡಿ ಅವರಿಗೆ ಮಾಡಿದ ಕರಸತ್ತು ಎಲ್ಲವೂ ಕೂಡ ವ್ಯರ್ಥವಾಗುತ್ತಿದೆ. ಕೃಷಿಗಾಗಿ ಮಾಡಿದ ಖರ್ಚು ಕೂಡ ವಾಪಸ್ಸು ಬರುತ್ತದೆಯೋ ಅಥವಾ ಇಲ್ಲಾ ಎಂಬುದು ಅವರಲ್ಲಿ ಭಾರಿ ಪ್ರಮಾಣದಲ್ಲಿ ಆತಂಕ ಕಾಡುತ್ತಿದೆ.

ರೈತರು ಬೆಳೆಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಶೇಂಗಾ ಬೀಜ, ರಸಗೊಬ್ಬರ ಖರೀದಿ ಮಾಡಿದ್ದಾರೆ. ಇದಲ್ಲದೇ ಉತ್ತಮವಾದ ಫಸಲು ಬರಲಿ ಎಂಬ ಕಾರಣಕ್ಕಾಗಿ ಕೃಷಿ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಕಳೆ ಕೀಳಿಸಿದ್ದಾರೆ. ಇದಕ್ಕಾಗಿ ಸಾಲ ಕೂಡ ಮಾಡಿಕೊಂಡಿದ್ದಾರೆ. ಬೆಳೆ ಬಂದಾಗ ಮಾರಿ ಕಟ್ಟಿದರಾಯಿತು ಅಂದುಕೊಂಡು. ಆದರೆ ಬೆಲೆ ಇಳಿಕೆ ಆಗಿರುವುದು ನೋಡಿ ಮಾಡಿದ ಸಾಲವೇ ತೀರದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಬರ ಅಧ್ಯಯನ ತಂಡ ಬಂದು ಹೋದರೂ ಪರಿಹಾರ ಹಾಗೂ ಬೆಳೆವಿಮೆ ಯಾವಾಗ ಕೊಡ್ತಾರೆ ಸರಕಾರ ಎಂದು ಅನ್ನದಾತರು ಸರಕಾರಗ ಕಡೆ ಎದುರು ನೋಡುತ್ತಿದ್ದಾರೆ. ಈಗಲಾದರೂ ಸರಕಾರ ಅನ್ನದಾತರ ನೆರವಿಗೆ ಮುಂದಾಗುತ್ತದೆಯೇ ಕಾದು ನೋಡ ಬೇಕಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *