ನಾಯಕನಹಟ್ಟಿ:: ಆಗಸ್ಟ್ 30. ಮಲ್ಲೂರಹಟ್ಟಿ ಗ್ರಾಮದಲ್ಲಿ ಉತ್ತಮ ಮಳೆ ಬೆಳೆ ಮತ್ತು ಗ್ರಾಮದ ಸಮೃದ್ಧಿಗಾಗಿ ಶ್ರೀ ಬಾಳೆ ಬಂದಮ್ಮ ದೇವಿಗೆ ಗ್ರಾಮಸ್ಥರು ಮತ್ತು ದೈವಸ್ಥರು ಸೇರಿ ಕುಂಭಾಭಿಷೇಕ ನೆರವೇರಿಸಲಾಗಿದೆ ಎಂದು ಶ್ರೀ ಬಾಳೆ ಬಂದಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಬಿ. ಶಂಕರಪ್ಪ ಹೇಳಿದ್ದಾರೆ.
ಅವರು ಶುಕ್ರವಾರ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೂರಹಟ್ಟಿ ಗ್ರಾಮದ ಶ್ರೀ ಬಾಳೆ ಬಂದಮ್ಮ ದೇವಿ ದೇವಸ್ಥಾನದಲ್ಲಿ ಗ್ರಾಮಸ್ಥರು ಹಾಗೂ ದೈವಸರು ಏರ್ಪಡಿಸಿದ್ದ ಶ್ರೀ ಬಾಳೆ ಬಂದಮ್ಮ ದೇವಿಗೆ ರುದ್ರಾಭಿಷೇಕ ಬಿಲ್ವಾರ್ಚನೆ ಕುಂಕುಮ ಅಭಿಷೇಕ ಕುಂಭಾಭಿಷೇಕ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಲ್ಲೂರಹಟ್ಟಿ ಗ್ರಾಮದಲ್ಲಿ ಕಳೆದ ಐದು ಆರು ವರ್ಷಗಳಿಂದ ಉತ್ತಮ ಮಳೆ ಬೆಳೆ ಇಲ್ಲದೆ ಬರೆದ ಛಾಯೆ ಆವರಿಸಿದ್ದರಿಂದ ಗ್ರಾಮಸ್ಥರು ಹಾಗೂ ದೈವಸ್ಥರು ಸೇರಿ ಶ್ರಾವಣ ಮಾಸದ ಕಡೆ ಶುಕ್ರವಾರ ಗ್ರಾಮದ ಶ್ರೀ ಬಾಳೆ ಬಂದಮ್ಮ ದೇವಿಗೆ ವಿಶೇಷ ರುದ್ರಾಭಿಷೇಕ ಕುಂಕುಮ ಅಭಿಷೇಕ ಬಿಲ್ವಾರ್ಚನೆ ಕುಂಭಾಭಿಷೇಕ ನೆರವೇರಿಸಲಾಗಿದೆ ದೇವಿಯ ಅನುಗ್ರಹದಿಂದ ಗ್ರಾಮದಲ್ಲಿ ಉತ್ತಮ ಮಳೆ ಬೆಳೆ ಮತ್ತು ಶಾಂತಿ ನೆಮ್ಮದಿ ನೆಲೆಸಲಿ ಎಂದರು.
ಇದೆ ವೇಳೆ ಶ್ರೀ ಬಾಳೆ ಬಂದಮ್ಮ ದೇವಿ ಸೇವಾ ಸಮಿತಿಯ ಕಾರ್ಯದರ್ಶಿ ಎಸ್ ತಿಪ್ಪೇಸ್ವಾಮಿ ಮಾತನಾಡಿದ ಅವರು ಮಲ್ಲೂರಹಟ್ಟಿ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರೀ ಬಾಳೆ ಬಂದಮ್ಮ ದೇವಿಗೆ ಗ್ರಾಮದಲ್ಲಿ ಶಾಂತಿ ಮತ್ತು ನೆಮ್ಮದಿ ಉತ್ತಮ ಮಳೆ ಬೆಳೆ ಸಮೃದ್ಧಿಗಾಗಿ ಕುಂಭಾಭಿಷೇಕ ನೆರವೇರಿಸಲಾಗಿದೆ ಎಂದರು.
ಇನ್ನೂ ಗ್ರಾಮದ ನೂರಾರು ಮಹಿಳೆಯರು ಕುಂಭ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗ್ರಾಮಕ್ಕೆ ಒಳಿತು ಆಗಲಿ ಎಂದು ಗ್ರಾಮವನ್ನು ಪ್ರದಕ್ಷಿಣೆ ಹಾಕಿದರು.
ಈ ಸಂದರ್ಭದಲ್ಲಿ ಗುರುಗಳಾದ ಎಂ. ಬಸವರಾಜ್ ಹಿರೇಮಠ. ಮಲ್ಲೂರಹಟ್ಟಿ ಶ್ರೀ ಬಾಳೆ ಬಂದಮ್ಮ ಸೇವಾ ಸಮಿತಿಯ ಉಪಾಧ್ಯಕ್ಷ ಎಂ.ಎನ್. ಶಂಕರಪ್ಪ, ಸದಸ್ಯರಾದ ಎಂ ಅರುಣ್ ಕುಮಾರ್, ಎಂ. ಎಸ್. ವಸಂತ, ಎಂ ಟಿ ಶಿವರಾಜ್, ಎಂ.ಬಿ.ರುದ್ರಮುನಿ, ಎಂ.ವಿ ನಾಗೇಂದ್ರಪ್ಪ, ಎಂ. ಮುಸ್ಟೂರಪ್ಪ, ಬಸವರಾಜ್, ಅಜ್ಜಯ್ಯ ಪೂಜಾರಿ ತಿಪ್ಪೇಸ್ವಾಮಿ ಸೇರಿದಂತೆ ಮಲ್ಲೂರಹಟ್ಟಿ ಸಮಸ್ತ ಗ್ರಾಮಸ್ಥರು ಇದ್ದರು.
0 Comments