ನ.9 ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ ಮೂರು ತಿಂಗಳು ಕಳೆದರೂ ಗೃಹಲಕ್ಷ್ಮಿ ಬಹುತೇಕ ಮನೆಗಳಿಗೆ ತಲುಪದ ಕಾರಣ ಗೃಹಿಣಿಯರ ಪರದಾಟ ತಪ್ಪಿಲ್ಲ.
ಹೌದು ಇದು ಚಳ್ಳಕೆರೆ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಜಿಟಿ ಜಿಟಿ ಮಳೆಯಲ್ಲೂ ಗೃಹಿಣಿಯರು ಹಾಗೂ ಮನೆ ಯಜಮಾನಿಯರು ನಗರ ಹಾಗೂ ವಿವಿಧ ಗ್ರಾಮಗಳಿಂದ ನನ್ನಖಾತೆಗ ಹಣ ಬಂದಿಲ್ಲ ನಮ್ಮ ಮಕ್ಕದ ಮನೆಯವರಿಗ ಬಂದಿದೆ , ಇನ್ನು ಎರಡುತಿಂಗಳ ಹಣ ಬಂದಿದೆ ಮೂರನೇ ಕಂತು ಹಣ ಬಂದಿಲ್ಲ .ನೋಡಿ ಸ್ವಾಮಿ ಎಂದು ಗೃಹಿಣಿಯರು ಗೃಹಲಕ್ಷ್ಮಿ ಯೋಜನೆಯ 2 ಸಾವಿರೂ ಪಡೆಯಲು ಅರ್ಜಿ ಸಲ್ಲಿಸಲ್ಲಿಸಿದ್ದರೂ ಸಹ ಖಾತೆ ಹಣ ಬಾರದ ಆಹಾರ ಇಲಾಖೆ. ಬ್ಯಾಂಕ್. ಅಂಚೆ ಕಚೇರಿ ಗ್ರಾಮ ಒನ್ ಕೇಂದ್ರಗಳಿಗೆ ಅಲೆದಾಡಿ ಕೊನೆಗೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮುಂದೆ ಅರ್ಜಿ ಪರಿಶೀಲನೆ ಮಾಡಿಸಲು ಮುಗಿ ಬಿದ್ದಿಹದ್ದಾರೆ.

ಪಡಿತರ ಚೀಟಿಯಲ್ಲಿ ಯಜಮಾನಿ ಸ್ಥಾನದಲ್ಲಿ ತನ್ನ ಹೆಸರನ್ನು ಸೇರಿಸಲು ಹಾಗೂ ಇವೆರಡೂ ಆಗಿದ್ದರೂ ಬ್ಯಾಂಕ್ ಖಾತೆಗೆ ಹಣ ಬಾರದೇ ಇರುವ ಲೋಪವನ್ನು ಸರಿಪಡಿಸಲು, ಹಲವಾರು ಕಾರಣಗಳ ಪಟ್ಟಿ ಹಿಡಿದುಕೊಂಡು ಕೂಲಿ ನಾಲಿ ಬಿಟ್ಟು ಗೃಹ ಲಕ್ಷ್ಮಿ ಪಡೆಯಲು ದಿನ ನಿತ್ಯ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿ, ಅದು ಸ್ವೀಕೃತಗೊಂಡಿದ್ದರೂ ಬ್ಯಾಂಕ್ ಖಾತೆ, ಆಧಾರ್ ಜೋಡಣೆ ಕಾರಣದಿಂದ ಕೆಲವರಿಗೆ ಹಣ ಖಾತೆಗೆ ಬರುತ್ತಿಲ್ಲ. ಇನ್ನು ಕೆಲವರು ಖಾತೆ ಮಾಡಿಸಿ ಆಧಾರ್ ಲಿಂಕ್ ಆಗಿರುತ್ತದೆ ಬಹಳ ದಿನಗಳಿಂದ ಬ್ಯಾಂಕ್ ಖಾತೆ ಚಾಲ್ತಿಯಿಲ್ಲದೆಕಾರಣ ಆ ಖಾತೆಗೆ ಹಣ ಬಿದ್ದರೂ ಗೊತ್ತಾಗುವುದಿಲ್ಲ ಇಂಥ ಸಮಸ್ಯೆಗಳನ್ನು ಸಾಕಷ್ಟು ಮಂದಿ ಎದುರಿಸುತ್ತಿದ್ದು, ನಿತ್ಯ ಸಂಬಂಧಿಸಿದ ಸರಕಾರಿ ಕಚೇರಿ ಅಲೆದಾಡುವಂತಾಗಿದೆ ಎಂದು ಗೃಹಲಕ್ಷ್ಮಿಯರ ಅಳಲು.
ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಗೃಹಲಕ್ಷ್ಮಿ ಆ್ಯಪ್ ಮೂಲಕ ಪರಿಶೀಲನೆ ಮಾಡಿ ನಿಮ್ಮಹಣ ಇಂತಹ ಬ್ಯಾಂಕ್ ಖಾತೆಗೆ ಜಮೆಆಗಿದೆ ನೀವು ಬ್ಯಾಂಕ್ ನಲ್ಲಿ ಇಕೆವೈಸಿ ಮಾಡಿಸಿ ಮತ್ತೆ ಅಕೌಂಟ್ ಚಾಲ್ತಿ ಮಾಡಿಸಿ ಎಂದು ಹೇಳುತ್ತಾರೆ ಇನ್ನು ಖಾತೆ ಇಲ್ಲದವರು ಅಂಚೆಕಚೇರಿಯಲ್ಲಿ ಮಾಡಿಸಿ ಎಂದ ಹೇಳುತ್ತಾರೆ .ಹೊಸದಾಗಿ ಅರ್ಜಿ ಹಾಕಲು ಈಗ ಅವಕಾಶವಿಲ್ಲ ಎಂದು ಮಾಹಿತಿ ನೀಡುತ್ತಾರೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗೃಹಿಣಿಯರು ಗೃಹಲಕ್ಷ್ಮಿಗಾಗಿ ಅಲೆದಾಟ ತಪ್ಪಿಸುವರೇ ಕಾದು ನೋಡ ಬೇಕಿದೆ.
0 Comments