ನಾಯಕನ ಹಟ್ಟಿ ಆ.26 ಭಾರತದ ಧಾರ್ಮಿಕ ಇತಿಹಾಸ ಮತ್ತು ಪರಂಪರೆಗೆ ಶ್ರೀ ಕೃಷ್ಣನ ಭಗವದ್ಗೀತೆಯ ಸ್ಪರ್ಶ ಅತಿ ಮುಖ್ಯ ಕಾರಣ ಮನುಕುಲಕ್ಕೆ ದಾರಿದೀಪವಾಗಿರುವ ಭಗವದ್ಗೀತೆಯಲ್ಲಿ ದೇವರ ಬಗ್ಗೆ ಮತ್ತು ಧರ್ಮದ ಬಗ್ಗೆ ನಂಬಿಕೆ, ದುರಾಸೆ ಮತ್ತು ದುಷ್ಕೃತ್ಯಗಳ ನಿಯಂತ್ರಣ ನಂಬಿಕೆ, ಮತ್ತು ನಿಸ್ವಾರ್ಥ ಮನೋಭಾವ ಮನೆ ಮಾಡಿದೆ ಎಂದು ಚಳ್ಳಕೆರೆಯ ನಿಕಟ ಪೂರ್ವ ತಾಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು
ಅವರು ಇಂದು ಹನುಮಂತನಹಳ್ಳಿ ಗೊಲ್ಲರಟ್ಟಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶ್ರೀ ಕೃಷ್ಣನ ಧರ್ಮದ ಅವನತಿ ಎಲ್ಲಿ ಉಂಟಾಗುತ್ತದೆ ಅದೇ ಧರ್ಮವನ್ನು ಪ್ರತಿಷ್ಠಾಪಿಸಲು ಎಷ್ಟೇ ಜನ್ಮಗಳನ್ನು ಎತ್ತಿಯಾದರೂ ಮತ್ತೆ ಮತ್ತೆ ಹುಟ್ಟಿ ಬರುತ್ತೇನೆ ಮನುಷ್ಯನ ಅತಿಯಾದ ಆಸೆಗಳಿಗೆ ಕಡಿವಾಣ ಹಾಕುವುದು ಅತ್ಯವಶ್ಯಕ ಮನುಷ್ಯನ ನಿಸ್ವಾರ್ಥ ಸೇವೆ ಜನ್ಮಜನ್ಮಾಂತರಕ್ಕೂ ಉತ್ಕೃಷ್ಟ ಜೀವನವನ್ನು ಕೊಂಡಯುತ್ತದೆ ಎಂದು ಹೇಳಿದ್ದಾರೆ ಆ ಕೃಷ್ಣನ ಆದರ್ಶಗಳನ್ನು ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕಿನ ಈ ಬುಡಕಟ್ಟು ಕುಟುಂಬಗಳ ಪಾಲಿಸುತ್ತದೆ ಪಾಲಿಸುತ್ತಿವೆ ತಮ್ಮ ಬಡತನದ ಬದುಕು ಮೀರಿ ಸತ್ಯ ಸ್ವಾಭಿಮಾನ ಮತ್ತು ಸನ್ನಡತೆಯನ್ನು ಅನುಸರಿಸುತ್ತಿದ್ದಾರೆ ಈ ಭಾಗದ ಪ್ರತಿಯೊಂದು ಕುಟುಂಬಗಳು ಮಕ್ಕಳಿಗೆ ಉತ್ಕೃಷ್ಟವಾದ ಶಿಕ್ಷಣವನ್ನು ಒದಗಿಸಬೇಕು ಶ್ರೀ ಕೃಷ್ಣನ ಆದರ್ಶವಿರುವ ಒಂದೊಂದು ಮಗುವು ಪ್ರತಿ ಕುಟುಂಬದಲ್ಲಿ ಹುಟ್ಟಬೇಕು ಎಂದು ಹೇಳಿದರು
ಇನ್ನು ಸಮಾರಂಭದಲ್ಲಿ ಉಪಸ್ಥಿತರಿದ್ದ ಕೊಂಡ್ಲಹಳ್ಳಿ ರೇವಣ್ಣ ಮಾತನಾಡಿ ಶ್ರೀ ಕೃಷ್ಣ ಆಗಿರುವುದೆಲ್ಲಾ ಒಳ್ಳೆಯದು ಮುಂದೆ ಆಗುವುದು ಒಳ್ಳೆಯದು ಪ್ರತಿ ಪಲಾಯೇಕ್ಷೆ ಬಿಟ್ಟು ತಮ್ಮ ಕರ್ತವ್ಯವನ್ನು ತಾವು ಮಾಡಿ ಎಂದಿದ್ದಾರೆ ರಂತೆ ಈ ಭಾಗದ ಎಲ್ಲರೂ ಕೂಡ ಕನ್ನಡದಿಂದ ನಡೆದರೆ ಶ್ರೀ ಕೃಷ್ಣನ ಆದರ್ಶಗಳನ್ನು ಪಾಲಿಸಿದಂತಾಗುತ್ತದೆ ಎಂದು ಹೇಳಿದರು
ಇನ್ನು ನಿವೃತ್ತ ಶಿಕ್ಷಕರಾದಂತ ಶಾಂತವೀರಪ್ಪ ಮಾತನಾಡಿ ಈ ಜನಾಂಗದ ಎಲ್ಲಾ ನಾಗರಿಕರು ತಮ್ಮ ಮಕ್ಕಳಿಗೆ ಮೌಲ್ಯಮಾರಿತ ಶಿಕ್ಷಣವನ್ನು ಕೊಡಿಸಬೇಕು ಈ ಭಾಗದಲ್ಲಿ ಈ ಸಮಾರಂಭದ ಕುರಿತಾದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಯುವಕರು ನೋಡಿಕೊಳ್ಳಬೇಕೆಂದು ಹೇಳಿದರು
ಬೂತಲಿಂಗೇಶ್ವರ ದೇವಸ್ಥಾನಕ್ಕೆ ಪೂಜೆ ಮುಗಿಸಿ ಶ್ರೀಕೃಷ್ಣ ರಥಕ್ಕೆ ಚಾಲನೆ ನೀಡಲಾಯಿತು ಡಿಜೆ ಸದ್ದಿನೊಂದಿಗೆ ಗ್ರಾಮದ ಯುವಕರು ಕುಣಿದು ಕುಪ್ಪಳಿಸಿದ ರು
0 Comments