ಚಳ್ಳಕೆರೆ.
18 ವರ್ಷತುಂಬಿದ ಪ್ರತಿಯೊಬ್ಬ ನಾಗರೀಕರು ಮತದಾರರ ಪಟ್ಟಿಯಿಂದ ವಂಚಿರಾಗದAತೆ ಶುದ್ದವಾದ ಮತದಾರರ ಪಟ್ಟಿಯನ್ನು ಸಿದ್ದ ಪಡಿಸುವಂತೆ ಉಪವಿಭಾಧಿಕಾರಿ ಚಂದ್ರಯ್ಯ ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿ ತಾಲೂಕು ಕಚೇರಿ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಚುನಾವಣೆ ಮತದಾರರ ಪಟ್ಟಿ ತಯಾರಿಸುವಂತೆ ಸೂಚನೆ ನೀಡಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ 17 ವರ್ಷ ತುಂಬಿರುವ ಯುವಕರು ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಹೆಸರು ಸೇ¥ ಕಾಜೇಜುಗಳಿಂದ ಅರ್ಜಿಗಳನ್ನು ನೀಡುವ ಮೂಲಕ ಯುವಕರನ್ನು ಮತದಾರರ ಪಟ್ಟಿಗೆ ಸೇರಿಸುವಂತೆ ತಿಳಿಸಿದರು.
ಸರಕಾರ ಸ್ವಾಮ್ಯದ ಸೌಕ್ಯ ಪುನರ್ವಸತಿ ಕೇಂದ್ರದ ಗುರಿಸಿರುವು ತೃತಿಯ ಲಿಂಗಿಗಳಿಗೆ ಸರಕಾರದ ಸೌಲಭ್ಯಗಳನ್ನು ನೀಡಲು ಗುರುತಿಸಿರುವ ಅವರಿಗೂ ಮತದಾನದ ಹಕ್ಕನ್ನು ನೀಡುವ ಉದ್ದೇಶದಿಂದ ಅಂತವರನ್ನು ಗುರುತಿಸಿ ಮತದಾರರಪಟ್ಟಿಗೆ ಸೇರಿಸಬೇಕು.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೊಳಚೆ ಪ್ರದೇಶ ಸೇರಿದಂತೆ ಹಿಂದುಳಿದ ಪ್ರದೇಶಗಳಿಗೆ ಭೇಟಿ ನೀಡಿ ಮತದಾರ ಪಟ್ಟಿಗೆ ಸೇರಿಸಲು ಜಾಗೃತಿ ಮೂಡಿಸ ಬೇಕು ಮೃತಪಟ್ಟವರ, ಊರು ಬಿಟ್ಟು ನಗರಗಳತ್ತ ಹೋದವರ ಮಾಹಿತಿ ಪಡೆದು ಮನೆಗಳಿಗೆ ತೆರಳಿಗೆ ದಾಖಲೆಗಳನ್ನು ಪಡೆದು ಸೇರ್ಪಡೆ ಹಾಗೂ ಮತದಾರಪಟ್ಟಿಯಿಂದ ಹೆಸರ ತೆಗೆಯಬೇಕು.
ಅತಿ ಹೆಚ್ಚು ಮತದಾರರಿರುವ ಹಾಗೂ ಮತದಾರರ ಪಟ್ಟಿಯಿಂದ ತೆಗೆದು ಹಾಕಿದ ಗ್ರಾಮಗಳು ಚುನಾವಣೆ ಆಯೋಗ ಹದ್ದಿನ ಕಣ್ಣು ಇಡಲಿದೆ ಅಂತಹ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದು ಮತದಾರರ ಪಟ್ಟಿ ತಯಾರಿಸುವಲ್ಲಿ ಅಧಿಕಾರಿಗಳು ಜಾಗೃತಿವಹಿಸುವಂತೆ ತಿಳಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ವಿವಿಧ ರಾಜಕೀಯ ಮುಖಂಡರ ಸಹಕಾರ ಅಗತ್ಯವಾಗಿದೆ. ರಾಜಕೀಯ ಪಕ್ಷದ ಮುಖಂಡರು ಪ್ರತಿಯೊಂದು ಮತಗಟ್ಟೆಗಳಿಗೆ ಬೂತ್ ಮಟ್ಟದ ಏಜೆಂಟರ್‌ನ್ನು ನೇಮಿಸಿ ಪಟ್ಟಿ ನೀಡುವಂತೆ ತಿಳಿಸಿದರು.
ಈಸಂದರ್ಭದಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ, ಗ್ರೇಡ್-೨ ತಹಶೀಲ್ದಾರ್ ಸಂಧ್ಯ, ಶಿಶು ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ, ಶಿಸ್ತೆದಾರ್ ಗಿರಿಶ್, ಸದಾಶಿವಯ್ಯ, ಲಿಂಗೇಗೌಡ, ಪ್ರಕಾಶ್, ಓಬಳೇಶ್ ಇದ್ದರು.
ಮತದಾರ ಪಟ್ಟಿಗೆ ಅತಿ ಹೆಚ್ಚು ಸೇರ್ಪಡೆ ಹಾಗೂ ಡಿಲೀಟ್ ಮಾಡಿದ ಮತಗಟ್ಟೆಗಳ ಮೇಲೆ ಚುನಾವಣೆ ಆಯೋಗ ಹದ್ದಿನ ಕಣ್ಣಿಡಲಿದೆ ಎ ಸಿ ಚಂದ್ರಯ್ಯ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments