ಚಳ್ಳಕೆರೆ ಜನಧ್ವನಿ ವಾರ್ತೆ ಫೆ.1ಜಾತಿ, ಲಿಂಗ, ಸಮಾನತೆ ವಂಚಿತದ ಕಾಲಘಟ್ಟದಲ್ಲಿ ಕಾಯಕವೇ ಭಕ್ತಿ, ಕಾಯಕವೇ ಜೀವನ ಎಂದು ಶ್ರದ್ಧೆ ಇಟ್ಟು ಸಮಾಜದ ಕಂಟಕದ ವಿರುದ್ದ ವಿರೋಧ ವ್ಯಕ್ತಪಡಿಸಿದವರು ಮಡಿವಾಳ ಮಾಚಿದೇವರು ಎಂದು ಶಾಸಕ ಟಿ .ರಘುಮೂರ್ತಿ ಹೇಳಿದರು.
ಚಳ್ಳಕೆರೆ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಹಾಗೂ ಮಡಿವಾಳ ಸಮುದಾಯವತಿಯಿಂದ ಆಯೋಜಿಸಿದ್ದಮಡಿವಾಳ ಮಾಚಿದೇವ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
12 ಶತಮಾನದ ಬಿಜ್ಜಳನ ಆಸ್ಥಾನದಲ್ಲಿ ಆದ ಬದಲಾವಣೆಯಿಂದ ವಚನ ಮತ್ತು ವಚನಕಾರರಿಗೆ ಅಪಾಯವಿದ್ದ ಕಾಲದಲ್ಲಿ ವಚನ ಮತ್ತು ವಚನಕಾರರನ್ನು ರಕ್ಷಿಸಿದ ಕೀರ್ತಿ ಮಾಡಿವಾಳ ಮಾಚಿದೇವರಿಗೆ ಸಲ್ಲುತ್ತದೆ ಎಂದರು.
ಮಡಿ ಎಂದರೆ ಶುದ್ಧ, ಶುದ್ಧ ಮಾಡುವುದೆ ಮಾಡಿವಾಳನ ಕುಲ ಕಸುಬು. ಬಟ್ಟೆಯನ್ನಷ್ಟೆ ಅಲ್ಲದೇ ಮನಸ್ಸು, ದಾರಿ, ಜೀವನ ಶೈಲಿ, ವಿವೇಚನೆಗಳನ್ನು ಶುದ್ಧ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾಯಕವೇ ಜೀವನ, ಅಭಿವೃದ್ಧಿಯೇ ನಮ್ಮ ವೃತ್ತಿ ಎಂದು ಶ್ರದ್ಧೆ, ಪ್ರೀತಿಯಿಂದ ಯಾವುದೇ ಕೆಲಸ ಮಾಡಿದರೇ ಯಶಸ್ಸು ನಿಶ್ಚಿತ ಎಂದರು.
ಇದೇ ಸಂದರ್ಭದಲ್ಲಿ ಮಡಿವಾಳ ಸಮುದಾಯದ ಮುಖಂಡರು ಗಳಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ.ಉಪಾಧ್ಯಕ್ಷೆ ಮಂಜುಳ . ಸಮುದಾಯದ ಅಧ್ಯಕ್ಷ ಮಂಜುನಾಥ. ತಹಶೀಲ್ದಾರ್ ಗ್ರೇಡ್ 2 ಸಂಧ್ಯಾ ಇತರರಿದ್ದರು
0 Comments