ಮಡಿವಾಳ ಸಮಾಜದ ಬಂಧುಗಳು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಭವಿಷ್ಯ ರೂಪಿಸುವತ್ತ ಗಮನಹರಿಸಬೇಕಿದೆ: ಡಾ. ಬಸವ ಮಾಚಿದೇವ ಮಹಾಸ್ವಾಮಿ

by | 06/03/24 | ಸುದ್ದಿ

ಚಳ್ಳಕೆರೆ: ತಳ ಸಮುದಾಯಗಳ ಜನರು ಶಿಕ್ಷಣವಂತರಾದಾಗ ಮಾತ್ರ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯ ಮಡಿವಾಳ ಸಮುದಾಯದ ಬಾಂಧವರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಉತ್ತಮ ಭವಿಷ್ಯ ರೂಪಿಸುವತ್ತ ಗಮನ ಹರಿಸಬೇಕಿದೆ ಎಂದು ಶ್ರೀ ಡಾ. ಬಸವ ಮಾಚಿದೇವ ಮಹಾಸ್ವಾಮಿ ಅಭಿಪ್ರಾಯಪಟ್ಟರು

ನಗರದ ವಾಸವಿ ಮಹಲ್ ನಲ್ಲಿ ತಾಲೂಕು ಮಡಿವಾಳರ ಸಂಘ ಯುವಕ ಸಂಘ ಮಡಿವಾಳಸರ್ಕಾರಿ ನೌಕರರ ಸಂಘ ಮಹಿಳಾ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಡಿವಾಳ ಮಾಚಿದೇವ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಡಿವಾಳ ಸಮುದಾಯ ಇಂದು ನೆನ್ನೆಯದಲ್ಲ ತಲಾ ತಲಾಂತರದಿಂದ ಸರ್ವ ಸಮಾಜದ ಶುಚಿತ್ವದ ಕಾಯಕವನ್ನು ಮಾಡಿಕೊಂಡು ಬಂದಿದೆ ಕಾಯಕದ ನೆಪದಲ್ಲಿ ಸೇವೆ ಮಾಡುತ್ತಿದ್ದು ಸುಲಿಗೆ ಮಾಡುತ್ತಿಲ್ಲ ಪ್ರಾಮಾಣಿಕವಾಗಿ ಸ್ವಾಭಿಮಾನದ ಬದುಕಿನ ಕಷ್ಟಗಳನ್ನು ಎದುರಿಸುತ್ತಾ ಸಮಾಜ ಮುಂದುವರಿಯುತ್ತಿದೆ. ಮುಂದಿನ ಪೀಳಿಗೆಯ ಹಿತದಷ್ಟಿಯಿಂದ ತ್ಯಾಗದ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಲ್ಲ ಮೇಲ್ವರ್ಗದ ಸಮುದಾಯಗಳು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದರು ಸಹ ನಾವು ಅತ್ಯಂತ ಹಿಂದುಳಿದಿದ್ದೇವೆ ಆದರೆ ನಮ್ಮ ಪಾಲನ್ನು ಸಹ ಇತರರು ಕಿತ್ತುಕೊಳ್ಳುತ್ತಿರುವುದು ಶೋಚನೀಯ ಸ್ಥಿತಿಗೆ ಕಾರಣವಾಗಿದೆ.

ಮಡಿವಾಳ ಮಾಚಿದೇವರು ಜಾತ್ಯತೀತ ಮನೋಭಾವ ಹೊಂದಿದ್ದರಿಂದ ತನ್ನ ಕಾಯಕ ಮಾಡುತ್ತಲೇ ಸಮಾಜದ ಏಳಿಗೆಗೆ ಶ್ರಮಿಸಿ, ಮಹಾನ್ ಮಾನವತಾವಾದಿಯಾಗಿ ತಮ್ಮ ವಚನಗಳ ಮೂಲಕ ವಿಶ್ವಮಾನವರಾಗಿ ಹೊರ ಹೊಮ್ಮಿದ್ದಾರೆ.

 ಮಡಿವಾಳ ಸಮುದಾಯ ಜಾಗೃತಾಗಲಿ ಎಂಬ ಕಾರಣಕ್ಕೆ ಇಂತಹ ಸಮಾವೇಶಗಳನ್ನು ಮಾಡುತ್ತಿದ್ದು ಸಮಾಜದ ಬಂಧುಗಳು ಸಂಘಟಿತರಾಗಿ ನಮ್ಮ ಸೌಲಭ್ಯಗಳನ್ನು ಪಡೆಯಲು ಹೋರಾಡಬೇಕಿದೆ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದುರಂತವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಜೀವನ ಕೌಶಲ್ಯ ತರಬೇತುದಾರ ಜಿಸಿ ರಾಜಶೇಖರ್ ಉಪನ್ಯಾಸ ನೀಡಿ ಮಡಿವಾಳ ಸಮುದಾಯ ಒಂದು ಹೊತ್ತಿನ ಉಪವಾಸವಿದ್ದರೂ ಪರವಾಗಿಲ್ಲ ಮಕ್ಕಳಿಗೆ ಆಸ್ತಿ ಮಾಡುವ ಬದಲು ಶಿಕ್ಷಣವನ್ನು ನೀಡುವ ಮೂಲಕ ಅದನ್ನೇ ಆಸ್ತಿಯನ್ನಾಗಿ ರೂಪುಗೊಳಿಸಿದರೆ ಸಮಾಜವು ಉದ್ಧಾರವಾಗಲು ಸಾಧ್ಯ ಜ್ಞಾನವೆಂಬ ಕೌಶಲ್ಯ ಉಳ್ಳ ಸಮುದಾಯದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದ ಅನಿವಾರ್ಯತೆ ಇದೆ ಕಳೆದ 76 ವರ್ಷಗಳಿಂದ ರಾಜಕೀಯವಾಗಿ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗದಿರುವುದಕ್ಕೆ ನಮ್ಮ ಸಮುದಾಯದ ಒಳ ಜಗಳಗಳೇ ಕಾರಣವಾಗಿದೆ ನಾವು ಎಷ್ಟು ವರ್ಷ ಬದುಕಿದ್ದೇವೆ ಎಂಬುದು ಮುಖ್ಯವಲ್ಲ ಇತರರಿಗಾಗಿ ಯಾವ ಒಳ್ಳೆಯ ಕೆಲಸಗಳನ್ನು ಮಾಡಿದ್ದೇವೆ ಎಂಬುದು ಮುಖ್ಯವಾಗುತ್ತದೆ ಹಾಗಾಗಿ ಸಮುದಾಯದ ಜನರು ಜಾಗೃತಾಗದಿದ್ದರೆ ಇಂತಹ ಸಮಾವೇಶಗಳು ಅರ್ಥ ಕಳೆದುಕೊಳ್ಳುತ್ತವೆ ಎಂದು ತಿಳಿಸಿದರು.

ಮಡಿವಾಳ ಸಮುದಾಯದ ರಾಜ್ಯಾಧ್ಯಕ್ಷ ಸಿ ನಂಜಪ್ಪ ಮಾತನಾಡಿ ಮೇಲ್ವರ್ಗದ ಜಾತಿಗಳು ಕಾಂತರಾಜ್ ವರದಿಯನ್ನು ವಿರೋಧಿಸುತ್ತಿರುವುದಕ್ಕೆ ಪ್ರಮುಖ ಕಾರಣ ತಳ ಸಮುದಾಯಗಳು ಹೆಚ್ಚು ಜನಸಂಖ್ಯೆ ಹೊಂದಿವೆ ಎಂಬ ಕಾರಣಕ್ಕೆ ವರದಿಯನ್ನು ತಿರಸ್ಕರಿಸಲು ಸರ್ಕಾರದ ಮೇಲೆ ಒತ್ತಡ ಹೇಳುತ್ತಿದ್ದಾರೆ ಏಕೆಂದರೆ ಅವರ ಸ್ಥಿತಿಗತಿಗಳ ಬಗ್ಗೆ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವುದರಿಂದ ಈ ವರದಿಯನ್ನು ಸಲ್ಲಿಸಲು ಬಿಡುತ್ತಿಲ್ಲ ಇದರಿಂದಾಗಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತಿದ್ದು ಮಡಿವಾಳ ಸಮುದಾಯ ಎಚ್ಚೆತ್ತುಕೊಂಡು ತಮಗೆ ಬರಬೇಕಾದ ಸೌಲಭ್ಯಗಳನ್ನು ಪಡೆಯಲು ಹೋರಾಟ ನಡೆಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಸಂಜೀವಿನಿ ಲ್ಯಾಬೋರೇಟರಿ ಮತ್ತು ಅಪೇಕ್ಷ ಝರಾಕ್ಸ್ ಸಹಯೋಗದಲ್ಲಿ ಹೊರ ತಂದಿದ್ದ ಶ್ರೀ ಮಡಿವಾಳ ಮಾಚಿದೇವ ಜೀವನ ಚರಿತ್ರೆ ಎಂಬ ಪುಸ್ತಕವನ್ನು ಬಸವ ಮಾಚಿದೇವ ಸ್ವಾಮೀಜಿಗಳು ಲೋಕಾರಪಣೆಗೊಳಿಸಿದರು

ಕಾರ್ಯಕ್ರಮದ ಕುರಿತು ಸಮಾಜದ ಗೌರವಾಧ್ಯಕ್ಷ ಎನ್ ಮಂಜುನಾಥ್ ಬಿ ರಾಮಪ್ಪ ತಾಲೂಕ ಅಧ್ಯಕ್ಷ ಬುಡ್ನಹಟ್ಟಿ ನಾಗರಾಜ್ ಮಾತನಾಡಿದರು.

ಕಾರ್ಯಕ್ರಮಕ್ಕೆ ಮುನ್ನ ನಗರದ ಪ್ರವಾಸಿ ಮಂದಿರದಿಂದ ಕಲಾತಂಡಗಳೊಂದಿಗೆ ಮಡಿವಾಳ ಮಾಚಿದೇವರ ಹಾಗೂ ಸ್ವಾಮೀಜಿಯವರ ಮೆರವಣಿಗೆ ಶಾಸಕ ಟಿ ರಘುಮೂರ್ತಿ ಚಾಲನೆ ನೀಡಿದರು.

ಸಮಾಜದ ಬೇಡಿಕೆಗಳು: ಮಡಿವಾಳ ಸಮುದಾಯಕ್ಕೆ ಕರ್ನಾಟಕದಲ್ಲಿ ಮೀಸಲಾತಿ ಸೌಲಭ್ಯವಿಲ್ಲ ಮುಂದುವರಿದ ಸಮುದಾಯಗಳ ಜೊತೆಗೆ ಮೀಸಲಾತಿ ಸೇರಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಕೂಡಲೇ ನಮ್ಮ ಜನಾಂಗವನ್ನು ಎಸ್ ಸಿಗೆ  ಸೇರಿಸಿ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು

ರಾಜಕೀಯ ಬಲವಿಲ್ಲದ ಮಡಿವಾಳರಿಗೆ ರಾಜಕೀಯದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡುವುದು ಸ್ಥಳೀಯ ಮಟ್ಟದಲ್ಲಿ ಜಿಲ್ಲೆ ತಾಲೂಕು ಗ್ರಾಮ ಪಂಚಾಯಿತಿ ನಗರಸಭೆ ಸ್ಥಾನಗಳಿಗೆ ಪ್ರತಿನಿತ್ಯ ಕೊಡುವುದು

ಪ್ರತ್ಯೇಕ ನಿಗಮ ಸ್ಥಾಪಿಸಿದ್ದಕ್ಕೆ ಇನ್ನು ಹೆಚ್ಚಿನ ಅಭಿವೃದ್ಧಿಗೆ ಸೂಕ್ತ ಆರ್ಥಿಕ ನೆರವು ನೀಡುವುದು

ತಾಲೂಕು ಕೇಂದ್ರಗಳಲ್ಲಿ ವಿದ್ಯಾರ್ಥಿ ನಿಲಯ ಸಮುದಾಯ ಭವನ ನಿರ್ಮಿಸಲು ಸೂಕ್ತ ನಿವೇಶನ ಇಲ್ಲದಿರುವ ಕಾರಣ ಎರಡು ಎಕರೆ ಭೂಮಿಯನ್ನು ಕೊಟ್ಟು ಹಾಗೂ ಸಮುದಾಯ ಭವನಗಳನ್ನು ನಿರ್ಮಿಸಲು ಆರ್ಥಿಕ ಸಹಾಯ ನೀಡಬೇಕು

ಮಡಿವಾಳ ಜನಾಂಗದ ಮಹಿಳಾ ಸ್ವ ಸಹಾಯ ಸಂಘಗಳಿಗೆ ಹೆಚ್ಚಿನ ಅನುದಾನ ನೀಡುವುದು

ಗಂಗಾ ಕಲ್ಯಾಣ ಯೋಜನೆ ಅನುಷ್ಠಾನದಲ್ಲಿ ಮಡಿವಾಳರಿಗೆ ಪ್ರಾತಿನಿಧ್ಯ

ಅವಶ್ಯಕತೆ ಇರುವ ಕಡೆ ಧೋಬಿ ಘಾಟ್ ಗಳನ್ನು ನಿರ್ಮಿಸಿ, ಜೀವನಪಾಯಕ್ಕೆ ಅವಕಾಶ ಕಲ್ಪಿಸುವುದು

ಈ ಸಂದರ್ಭದಲ್ಲಿ ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಬುಡ್ನಹಟ್ಟಿ ಎಂ ನಾಗರಾಜ್ ಉಪಾಧ್ಯಕ್ಷ ಪುಟ್ಟಲಿಂಗಪ್ಪ ಕಾರ್ಯದರ್ಶಿ ಕುಶ ಬಿ ಸಿ ಕುಶಾಲಪ ಖಜಾಂಚಿ ಹಾಟ್ಸನ್ ಪ್ರಕಾಶ್ ಮಾಜಿ ಪ್ರಭು ವೀರಣ್ಣ ಓಂಕಾರಪ್ಪ ಶೈಲಜಾ ಮಂಜುನಾಥ್ ಗಂಗಮ್ಮ ವೇದಮೂರ್ತಿ ಎಂಎನ್ ಮೃತ್ಯುಂಜಯ ಉಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Latest News >>

ಹಾಸ್ಯನಟ ಸಂಗೀತ ನಿರ್ದೇಶಕ ಸಾಧುಕೋಕಿಲ ಸೂರನಹಳ್ಳಿ ಗ್ರಾಮಕ್ಕೆ ಭೇಟಿ.

ಚಳ್ಳಕೆರೆ ಜು.14ಚಳ್ಳಕೆರೆ ತಾಲೂಕಿನ‌ ಸೂರನಹಳ್ಳಿ‌ಗ್ರಾಮದ ಶ್ರೀ ಆಂಜನೇಸ್ವಾಮಿ ದೇವಸ್ಥಾನ ಕ್ಕೆ ಹಾಸ್ಯನಟ, ಸಂಗೀತಗಾರ, ಚಲನಚಿತ್ರ ನಿರ್ದೇಶಕ...

ಮೊಳಕಾಲ್ಮೂರಿಗೆ ಇಎಸ್ ಐ ಆಸ್ಪತ್ರೆ ಹಾಗೂ ಜವಳಿ ಪಾರ್ಕ್ ಮಂಜುರಾತಿ ನೀಡುವಂತೆ ಕೇಂದ್ರ ಸಚಿವರಿಗೆ ಜೆ.ಡಿ.ಎಸ್ ಮುಖಂಡ ಟಿ.ವೀರಭದ್ರಪ್ಪ ಮನವಿ

ಬೆಂಗಳೂರು ಜು. 14ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರವು ತುಂಬಾ ಹಿಂದುಳಿದ ಪ್ರದೇಶವಾಗಿದ್ದು ಹಾಗೂ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ ಇಲ್ಲಿ...

ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಮಾಳಜ್ಜಯ್ಯನವರಿಗೆ ಸನ್ಮಾನ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಪಿ. ತಿಪ್ಪೇಸ್ವಾಮಿ ,

ನಾಯಕನಹಟ್ಟಿ. ಜುಲೈ 14 . ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗ್ರಾಮೀಣ ಪ್ರದೇಶದ ರೈತರಿಗೆ ಸಹಕಾರವಾಗಲಿ ಎಂದು ಪಟ್ಟಣ...

ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮತದಾನ ಮಾಡಲು ಸರತಿ ಸಾಲಿನಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಚಳ್ಳಕೆರೆ ಜು.13 ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ ಮತದಾನದ ಮೂಲಕ ಸಾಗಿದ್ದು ಮಕ್ಕಳಿಗೆ ಚಿಕ್ಕಂದಿನಿಂದಲೇ ಚುನಾವಣಾ ಮಜಲುಗಳನ್ನು...

ಲೋಕ ಅದಾಲತ್ ಮೂಲಕ ಪ್ರಕರಣಗಳು ಇತ್ಯರ್ಥ ಗೊಂಡರೆ ದ್ವೇಷ ಭಾವನೆ ದೂರವಾಗಿ ಸಂಬಂಧಗಳು ಸುಧಾರಿಸಲಿವೆ: ಕೆಎಂ ನಾಗರಾಜ್ 

ಚಳ್ಳಕೆರೆ: ಲೋಕ ಅದಾಲಾತ್ ಕಾರ್ಯಕ್ರಮವು ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಇಡೀ ದೇಶದಾದ್ಯಂತ ನಡೆಯುತ್ತಿದ್ದು ಕಕ್ಷಿದಾರರು ಇದರ...

ಕರ್ನಾಟಕರಾಜ್ಯವೆಂದು ನಾಮಾಕರಣ ಮಾಡಿ 50ವರ್ಷಗಳುಸಂದ ಹಿನ್ನಲೆಯಲ್ಲಿ ಇಂದು ಸುವರ್ಣಾಕರ್ನಾಟಕಉತ್ಸವವನ್ಆಚರಿಸುತ್ತಿದ್ದೇವೆ:ತಹಶೀಲ್ದಾರ್ ರಾಜೇಶ್ ಕುಮಾರ್

ಹಿರಿಯೂರು: ಅಂದಿನ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ನಾಮಾಕರಣ ಮಾಡಿ 50 ವರ್ಷಗಳು ಸಂದ...

ಪತ್ರಿಕಾ ದಿನಾಚರಣೆಯಲ್ಲಿ ಸಚಿವ ಡಿ.ಸುಧಾಕರ್ ಹೇಳಿಕೆಸತ್ಯಕ್ಕೆ ಹತ್ತಿರವಾದ ಸುದ್ದಿಗಳಿಗೆ ಮಾತ್ರ ಜನಮನ್ನಣೆ

ಚಿತ್ರದುರ್ಗ ಜುಲೈ.13: ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಸತ್ಯಕ್ಕೆ ಹತ್ತಿರವಾದ ಸುದ್ದಿಗಳಿಗೆ ಮಾತ್ರ ಜನಮನ್ನಣೆ...

ಅಧಿಕಾರಿಗಳ ಸಭೆಯಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸೂಚನೆ ಡೆಂಗ್ಯೂ ಪರೀಕ್ಷೆ: ಖಾಸಗಿ ಲ್ಯಾಬ್‍ಗಳು ವಿಧಿಸುವ ದರ ಸಾರ್ವಜನಿಕರಿಗೆ ಹೊರೆಯಾಗದಿರಲಿ

ಚಿತ್ರದುರ್ಗ ಜು.13 ಡೆಂಗ್ಯೂ ಪರೀಕ್ಷೆಗೆ ಖಾಸಗಿ ನರ್ಸಿಂಗ್ ಹೋಂ, ಲ್ಯಾಬ್‍ಗಳು ವಿಧಿಸುವ ದರದ ಬಗ್ಗೆ ನಿಗಾವಹಿಸಿ, ಸರ್ಕಾರ ನಿಗಧಿಪಡಿಸಿದ ದರ...

ಡಾ. ಬಾಬು ಜಗಜೀವನ್ ರಾಮ್ ಭವನ ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಹಾಗೂ ಸಂಶೋಧಕರ ಕೇಂದ್ರವಾಗಿ ಹೊರಹೊಮ್ಮಲಿ. ಹಿರಿಯ ದಲಿತ ಮುಖಂಡ ತೊರೆಕೋಲಮ್ಮನಹಳ್ಳಿ ಆರ್. ಬಸಪ್ಪ,

ನಾಯಕನಹಟ್ಟಿ:: ಜುಲೈ 13 . ಡಾ. ಬಾಬು ಜಗಜೀವನ್ ರಾಮ್ ಸಂಶೋಧನ ಕೇಂದ್ರ ರಾಜ್ಯದ ದಲಿತ ಜನಾಂಗದ ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ಅಧ್ಯಯನ...

ಪ್ರತಿಭೋತ್ಸವದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ವಿದ್ಯಾರ್ಥಿಗಳು ವೈಯಕ್ತಿಕ ಹಿತಾಸಕ್ತಿ ಅರಿತು ಉದಯೋನ್ಮುಖರಾಗಿ ಬೆಳೆಯಬೇಕು

ಚಿತ್ರದುರ್ಗ ಜುಲೈ.12: ವಿದ್ಯಾರ್ಥಿಗಳು ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ತಮ್ಮ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page