ಮಂಡ್ಯದಲ್ಲಿ ಪೊಲೀಸರು ರೈತರ ಮೇಲೆ ನಡೆಸಿದ ದೌರ್ಜನ್ಯ ಖಂಡಿಸಿ ತಾ.ಕಚೇರಿಯಲ್ಲಿ ತಹಶೀಲ್ದಾರ್ ಗೆ ರೈತರು ಮನವಿ ಸಲ್ಲಿಸಿದರು.

by | 29/12/22 | Uncategorized

ಚಳ್ಳಕೆರೆ: ಮಂಡ್ಯದಲ್ಲಿ ಪೊಲೀಸರು ರೈತರ ಮೇಲೆ ನಡೆಸಿದ ದೌರ್ಜನ್ಯ ಖಂಡಿಸಿ ತಾ.ಕಚೇರಿಯಲ್ಲಿ ತಹಶೀಲ್ದಾರ್ ಗೆ ರೈತರು ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಸಂಘದ ಪದಾಧಿಕಾರಿಗಳು ರಾಜ್ಯದಲ್ಲಿ ಬೆಲೆ ಏರಿಕೆ ನೀತಿ, ಭೂಸ್ವಾದೀನ ಕಾಯಿದೆ, ಎಪಿಎಂಸಿ ಕಾಯಿದೆ, ಬೆಳೆನಷ್ಟ ಪರಿಹಾರ, ಬೆಳೆ ವಿಮೆ ಪಾವತಿಸುವಂತೆ, ರೈತರ ಪಂಪ್‌ಸೆಟ್ ಗಳಿಗೆ ಮೀಟರ್ ಅಳವಡಿಸುವುದನ್ನು ಖಂಡಿಸಿ ಧರಣಿ ಸತ್ಯಾಗ್ರಹ ನಡೆಸುವಾಗ ರೈತರನ್ನು ಪೊಲೀಸರು ಬೆದರಿಸಿ, ಶಾಮಿಯಾನ ಕಿತ್ತು ಹಾಕಿ, ರೈತ ಸಂಘಕ್ಕೆ ಅಗೌರವ ತೋರಿದ ಪೊಲೀಸರ ಮೇಲೆ ಕ್ರಮ ಜರುಗಿಸಬೇಕು ಎಂದು ರಾಜ್ಯ ರೈತರ ಸಂಘ ರಾಜ್ಯ ಉಪಾಧ್ಯಕ್ಷ ಕೆ.ಪೊ.ಭೂತಯ್ಯ ಒತ್ತಾಯ ಮಾಡಿದರು.
ಈ ವೇಳೆ ರೈತ ಮುಖಂಡರಾದ ರಾಜಣ್ಣ, ಟಿ.ತಿಪ್ಪೇಸ್ವಾಮಿ, ತಿಮ್ಮಣ್ಣ, ಶ್ರೀನಿವಾಸರೆಡ್ಡಿ, ಹನುಮಂತರೆಡ್ಡಿ ಸೇರಿದಂತೆ ಮುಂತಾದವರು ಇದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *