ಭಾರತೀಯ ಸಂಸ್ಕೃತಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದ್ದು, ಅನೇಕ ಗುಡಿ, ದೇವಸ್ಥಾನ, ಪ್ರಾಚೀನ ಸ್ಮಾರಕಗಳ ನಿರ್ಮಾಣದಿಂದಾಗಿ ಸಮುದಾಯದ ಕಲೆ, ಸಂಸ್ಕೃತಿ ಪ್ರಸಿದ್ಧಿ ಪಡೆದಿವೆ’ಎಂದು ಶಾಸಕ ಟಿ.ರಘುಮೂರ್ತಿ.

by | 17/09/23 | ಸುದ್ದಿ


ಚಳ್ಳಕೆರೆ ಸೆ.17 ಭಾರತೀಯ ಸಂಸ್ಕೃತಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದ್ದು, ಅನೇಕ ಗುಡಿ, ದೇವಸ್ಥಾನ, ಪ್ರಾಚೀನ ಸ್ಮಾರಕಗಳ ನಿರ್ಮಾಣದಿಂದಾಗಿ ಸಮುದಾಯದ ಕಲೆ, ಸಂಸ್ಕೃತಿ ಪ್ರಸಿದ್ಧಿ ಪಡೆದಿವೆ’ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ಪಟ್ಟರು. ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ಹಾಗೂವಿಶ್ವಕರ್ಮ ಸುದಾಯದವತಿಯಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವಕರ್ಮ ಸಮಾಜ ತಮ್ಮ ಕರ ಕೌಶಲ್ಯಗಳಿಂದ ವಿಶ್ವದಲ್ಲೆಡೆ ಮನೆ ಮಾತಾಗಿದ್ದಾರೆ. ಪಂಚ ಕಸುಬುಗಳನ್ನು  ಜೀವನೋಪಾಯಕ್ಕಾಗಿ ಮಾಡುತ್ತಾ ಬಂದಿದ್ದು ವಿಶ್ವಕರ್ಮರೆಂದರೆ ಕೇವಲ ವ್ಯಕ್ತಿಯಲ್ಲ ಶಕ್ತಿ ಎಂದು ಸಾಬೀತು ಮಾಡಿದ್ದಾರೆ.
ವಿಶ್ವಕರ್ಮ ಸಮಾಜ ಬೆಳ್ಳಿ ಬಂಗಾರ, ಕಬ್ಬಿಣ, ಶಿಲ್ಪಕಲೆ, ಕಮ್ಮಾರ, ವೃತ್ತಿಗಳನ್ನು ಮಾಡುತ್ತಾ ಬಂದಿದ್ದಾರೆ ಇವರು ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ ಯಾವುದೇ ಜನಾಂಗ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಬಹು ಮುಖ್ಯ ಪಾತ್ರ ವಹಿಸುತ್ತದೆ ಶಿಕ್ಷಣದಿಂದಲೇ ತಮ್ಮೆಲ್ಲ ಕಷ್ಟಗಳನ್ನು ನೀಗಿಸಿಕೊಳ್ಳಲು ಸಾಧ್ಯ ಕೇವಲ ಕುಲ ಕಸಬುಗಳನ್ನು ನಂಬಿ ಜೀವನ ಸಾಗಿಸದೆ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮಿಸಬೇಕು ವಿಶ್ವಕರ್ಮರು ಬೋದಿಸಿರುವ ಆದರ್ಶಗಳನ್ನು ಎಲ್ಲಾ ಜಾತಿ ಜನಾಂಗದವರು ಆದರ್ಶಪ್ರಾಯವಾಗಿಟ್ಟುಕೊಳ್ಳಬೇಕು.  ರಾಜ್ಯ ಸರ್ಕಾರ ಈಗಾಗಲೇ ವಿಶ್ವಕರ್ಮ ನಿಗಮ ಮಂಡಳಿ ಸ್ಥಾಪಿಸಿದ್ದು  ಕ್ಷೇತ್ರದಲ್ಲಿ ವಿಶ್ವಕರ್ಮ ಜನಾಂಗದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ವಿಶ್ವಕರ್ಮ ಜನಾಂಗದ ತಾಲೂಕು ಅಧ್ಯಕ್ಷ ವೆಂಕಟೇಶ ಚಾರ್ ಮಾತನಾಡಿ ನಮ್ಮ ಸಮಾಜ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ತೀರ ಹಿಂದುಳಿದಿದ್ದು ತಾಲೂಕಿನಲ್ಲಿ ಸಮಾಜದ ಬಡ ಜನರಿಗೆ ನಿವೇಶನ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳಿದ್ದು ಶಾಸಕರು ಈಡೇರಿಸುವ ಭರವಸೆ ಹೊಂದಿದ್ದೇವೆ ಎಂದು ತಿಳಿಸಿದರು.
ಪ್ರಸ್ತಾವಿಕವಾಗಿ ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷ ತಹಶೀಲ್ದಾರ್ ರೆಹಾನ್ ಪಾಷಾ ಮಾತನಾಡಿದರು ವಿಶ್ವಕರ್ಮರ ಕುರಿತು ಜಯವೀರಚಾರ್ ಉಪನ್ಯಾಸ ನೀಡಿದರು.
ಮಹಿಳಾ ಅಧ್ಯಕ್ಷೆ ಕಮಲಮ್ಮ .ವಕೀಲೆ ಮಂಜುಳಮ್ಮ.ಸರಸ್ಪತಮ್ಮ.ಸಿ.ಇ.ಪ್ರಸನ್ನ ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ.ವೀರಭದ್ರಪ್ಪ.ಕವಿತಾ.ಸುಮ. ಸುಜಾತ. ಪೌರಾಯುಕ್ತಚಂದ್ರಪ್ಪ, ಡಿ.ವೈ.ಎಸ್ .ಪಿ. ರಾಜಣ್ಣ,ಪಿ ಎಸ್ ಐ ಸತೀಶ್ ನಾಯ್ಕ. ಸಮುದಾಯದ ಮುಖಂಡರಾದ  ಶ್ರೀನಿವಾಸಚಾರ್ ಭರತ್ ಕುಮಾರ್ ಪತ್ರಕರ್ತ ಮೌನೇಶ್ ಆಚಾರ್ ಸೇರಿದಂತೆ ಅನೇಕ ಮುಖಂಡರು, ಉಪಸ್ಥಿತರಿದ್ದರು

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *