ಹಿರಿಯೂರು :
ಶಿರಾ ತಾಲ್ಲೂಕಿನ ಆಂಧ್ರ ಗಡಿ ಗ್ರಾಮ ಕರೆತಿಮ್ಮನಹಳ್ಳಿಯ ಬಡ ರೈತ ಕುಟುಂಬದಲ್ಲಿ ಜನಿಸಿದ ದೀಪಿಕಾರವರಿಗೆ ಇರುವ ದೃಷ್ಟಿ ದೋಷ ಅವರ ಸಾಧನೆಗೆ ಅಡ್ಡಿಯಾಗಲಾರದು ಎಂದು ಈ ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ ಎಂಬುದಾಗಿ ಎಂ.ಎಲ್.ಸಿ ಚಿದಾನಂದಗೌಡ ಹೇಳಿದರು.
ಭಾರತದ ಮಹಿಳಾ ಅಂಧರ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಗೆದ್ದು, ಶಿರಾ ತಾಲ್ಲೂಕಿಗೆ ಕೀರ್ತಿ ತಂದ ದೀಪಿಕಾ ಅವರ ಮನೆಗೆ ಭೇಟಿನೀಡಿ, ಅವರನ್ನು ಸನ್ಮಾನಿಸಿ, 50 ಸಾವಿರ ರೂಗಳ ನಗದು ಹಣನೀಡಿ ಪ್ರೋತ್ಸಾಹಿಸಿ, ನಂತರ ಅವರು ಮಾತನಾಡಿದರು.
ಭಾರತದ ಅಂಧರ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದು ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಗೆದ್ದು ಗೋಲ್ಡ್ ಮೆಡಲ್ ತಂದು ಅತ್ಯುತ್ತಮ ಸಾಧನೆ ಮಾಡಿದ್ದು, ಇಡೀ ದೇಶವೇ ಹೆಮ್ಮೆಪಡುವಂಥದ್ದು, ಒಂದು ತಿಂಗಳಾದರೂ ಇಲ್ಲಿಯವರೆಗೂ ಕನಿಷ್ಠ ಸೌಜನ್ಯಕ್ಕಾದರೂ ಕರ್ನಾಟಕ ಸರ್ಕಾರವಾಗಲಿ, ಸಂಬಂಧ ಪಟ್ಟ ಇಲಾಖೆಯಾಗಲಿ ಸ್ಥಳೀಯ ಜನಪ್ರತಿನಿಧಿಗಳಾಗಲಿ, ಇವರಿಗೆ ನೈತಿಕ ಬೆಂಬಲ ಸೂಚಿಸದೆ ಇರುವುದು ದುರ್ದೈವದ ಸಂಗತಿಯಾಗಿದೆ ಎಂದರಲ್ಲದೆ,
ಈಗಾಗಲೇ ದೀಪಿಕಾ ಜೊತೆಗೆ ಭಾರತ ಪ್ರತಿನಿತ್ಯ ಬೇರೆ ರಾಜ್ಯದ ಮೂವರು ಆಟಗಾರರಿಗೆ ಒಡಿಸ್ಸಾ ಸರ್ಕಾರ ಉಚಿತ ಮನೆ ಮತ್ತು ಸರ್ಕಾರ ಉದ್ಯೋಗ ಘೋಷಿಸಿದ್ದು ನಮ್ಮ ಕರ್ನಾಟಕದಲ್ಲಿ ಕೂಡ ವರ್ಷ ಗಂಗವ್ವ ದೀಪಿಕಾ ಎಂಬ ಮೂರು ಮಂದಿ ಆಟಗಾರರಿದ್ದು, ಈ ವಿಷಯವಾಗಿ ಮುಂಬರುವ ಸದನ ಸಭೆಯಲ್ಲಿ ಪ್ರಶ್ನೆ ಮಾಡಿ ನಿಮಗೆ ಸರ್ಕಾರದ ಸೌಲಭ್ಯ ಉದ್ಯೋಗ ಕೊಡಿಸುವ ಭರವಸೆಯನ್ನು ಕೊಟ್ಟರು.
ಅಲ್ಲದೆ ಸ್ಥಳದಲ್ಲೇ ಸರ್ಕಾರದ ಕ್ರೀಡಾ ಇಲಾಖೆಯ ಆಯುಕ್ತರಿಗೆ ಕರೆ ಮಾಡಿ ರಾಜ್ಯಕ್ಕೆ ಹೆಮ್ಮೆ ತಂದಂತಹ ಆಟಗಾರರಿಗೆ ಸೂಕ್ತ ಸವಲತ್ತುಗಳನ್ನು ಕಲ್ಪಿಸಿ ಪ್ರೋತ್ಸಾಹ ನೀಡುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚಿಕ್ಕಣ್ಣ ದೊಡ್ಡ ಬಾಣಗೆರೆ, ಶ್ರೀಧರ್, ವಿ ಎಸ್ ಎಸ್ ನಿರ್ದೇಶಕ ಗಂಗಾಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಭಾರತದಮಹಿಳಾ ಅಂಧರ ವಿಶ್ವಕಪ್ ಕ್ರಿಕೆಟ್ ಆಟಗಾರ್ತಿಗೆ 50 ಸಾವಿರ ಹಣ ನೀಡಿದ ಎಂ.ಎಲ್.ಸಿ ಚಿದಾನಂದ ಗೌಡ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments