ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ದಿವಾಕರ್ ಬೇಸಿಗೆ ಶಿಬಿರ: ಮಕ್ಕಳ ಜ್ಞಾನಾರ್ಜನೆಗೆ ಬುನಾದಿ

by | 29/05/23 | ಜೀವನಶೈಲಿ, ಶಿಕ್ಷಣ


ಚಿತ್ರದುರ್ಗ ಮೇ.29:
ಬೇಸಿಗೆ ಶಿಬಿರ ಮಕ್ಕಳ ಜ್ಞಾನದ ಬುನಾದಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಬಾಲಭವನ ಸಮಿತಿ ಅಧ್ಯಕ್ಷ ಎಂ.ಎಸ್.ದಿವಾಕರ ಹೇಳಿದರು.
ಇಲ್ಲಿನ ಜಿಲ್ಲಾ ಬಾಲಭವನ ಆವರಣದಲ್ಲಿ ಸೋಮವಾರ ರಾಜ್ಯ ಬಾಲ ಭವನ ಸೊಸೈಟಿ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮಕ್ಕಳು ರಜೆ ದಿನಗಳನ್ನು ಶಿಬಿರದಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಕಲಿಯಲು ಆಸಕ್ತಿ ವಹಿಸಬೇಕು. ರಜೆಯ ದಿನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶಿಬಿರಗಳು ವಿದ್ಯಾಭ್ಯಾಸಕ್ಕೆ ಪೂರಕವಾಗುತ್ತವೆ ಎಂದು ಹೇಳಿದರು. ಒಳ್ಳೆಯ ನಡೆ ಮತ್ತು ನುಡಿಯನ್ನು ಶಿಬಿರಗಳು ಕಳಿಸುತ್ತವೆ. ಬೇಸಿಗೆ ರಜೆ ಮುಕ್ತಾಯಗೊಂಡು ಶಾಲೆಗಳು ಪ್ರಾರಂಭಗೊಂಡಿವೆ. ಪ್ರೌಢಶಾಲೆ ವಿಭಾಗದ ಮಕ್ಕಳು ಅತಿ ಹೆಚ್ಚು ಓದಿನ ಕಡೆ ಆಸಕ್ತಿವಹಿಸಬೇಕು. ಆಸಕ್ತಿಯಿಂದ ಓದಿ ಉತ್ತಮ ಫಲಿತಾಂಶ ನೀಡಬೇಕು. ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಮಾತನಾಡಿ, ಇಂದು ಕಲೆಗೆ ಉತ್ತಮ ಬೆಲೆ ಸಿಗುತ್ತದೆ. ಅನೇಕ ರಿಯಾಲಿಟಿ ಶೋಗಳಲ್ಲಿಯೂ ಸಹ ಮಕ್ಕಳ ಪ್ರತಿಭೆಯನ್ನು ಪ್ರದರ್ಶನ ಮಾಡಲು ಅವಕಾಶಗಳಿವೆ. ಮಕ್ಕಳ ಬೇಸಿಗೆ ಶಿಬಿರವು ಮಕ್ಕಳಲ್ಲಿರುವ ಕಲೆಯನ್ನು ಗುರುತಿಸಿ ಪರಿಪೂರ್ಣ ರೂಪವನ್ನು ನೀಡುತ್ತದೆ. ಆದ್ದರಿಂದ ಶಿಬಿರಗಳಲ್ಲಿ ಕಲಿತ ಕಲೆಯನ್ನು ಕರಗತ ಮಾಡಿಕೊಂಡು ಮುಂದಿನ ಜೀವನಶೈಲಿಗೆ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಬಾಲ ಭವನ ಸಮಿತಿ ವತಿಯಿಂದ ಪ್ರತಿ ವರ್ಷವೂ ಸಹ ಬೇಸಿಗೆ ಶಿಬಿರ ಹಮ್ಮಿಕೊಂಡು ಪಠ್ಯೇತರ ಚಟುವಟಿಕೆಗಳೊಂದಿಗೆ ಪಠ್ಯಕ್ಕೆ ಪೂರಕವಾದ ಚಟುವಟಿಕೆಗಳನ್ನು ಸಹ ಹಮ್ಮಿಕೊಳ್ಳಲಾಗುತ್ತದೆ. ಈ ಶಿಬಿರದ ವಿಶೇಷವೆಂದರೆ ಪೆÇಲೀಸ್ ಠಾಣೆಗೆ ಭೇಟಿ ಹಾಗೂ ಅಗ್ನಿಶಾಮಕ ದಳದ ಪ್ರಾತ್ಯಕ್ಷಿತೆ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿರುತ್ತವೆ. ಮಕ್ಕಳ ಮುಂದಿನ ವಿದ್ಯಾಭ್ಯಾಸವು ಸುಗಮವಾಗಲು ಸಹಕಾರಿಯಾಗುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಬಾಲಭವನ ಸಮಿತಿ ಅಧ್ಯಕ್ಷ ಎಂ.ಎಸ್.ದಿವಾಕರ ಅವರು ಮಕ್ಕಳೊಂದಿಗೆ ಶಿಬಿರದ ಅನಿಸಿಕೆ ಅಭಿಪ್ರಾಯ ಚರ್ಚಿಸಿ ಸಂವಾದ ಮಾಡಿದರು. ಬೇಸಿಗೆ ಶಿಬಿರದಲ್ಲಿ ತಯಾರಾಗಿದ್ದ ಕರಕುಶಲತೆ ಚಿತ್ರಕಲೆಯ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ನಿರೂಪಣಾಧಿಕಾರಿಗಳಾದ ಕೆಂಪಹನುಮಯ್ಯ ಅವರು ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಸಹ ಪ್ರದರ್ಶನ ಗೊಳಿಸಲಾಯಿತು. ಭಕ್ತಿಗೀತೆಗೆ ಏಕಕಾಲದಲ್ಲಿ ನರ್ತನ ಚಿತ್ರಕಲೆ ಹಾಗೂ ಕರಕುಶಲತೆ ಪ್ರದರ್ಶನ ಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ, ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಸುನಿತಾ, ಸಂಪನ್ಮೂಲ ವ್ಯಕ್ತಿಗಳಾದ ಕೆ ಪವಿತ್ರ. ಅನಿತಾ ಮಹಾಂತೇಶ್. ಜಯಶೀಲ ವಿಶ್ವನಾಥ್, ರಮೇಶ್, ತಿಪ್ಪೇಸ್ವಾಮಿ, ರವಿ ಅಂಬೇಕರ್, ಜಿಲ್ಲಾ ಬಾಲ ಭವನದ ವ್ಯವಸ್ಥಾಪಕರಾದ ರಜಾಕ್ ಸಾಬ್, ಕಾರ್ಯಕ್ರಮ ಸಂಯೋಜಕರಾದ ಡಿ ಶ್ರೀಕುಮಾರ್ ಉಪಸ್ಥಿತರಿದ್ದರು.

Latest News >>

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಸಹಾಯವಾಣಿ ಆರಂಭ

ಚಿತ್ರದುರ್ಗ ಮೇ.30: ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ-2024ರ ಸಂಬಂಧ ಶಿಕ್ಷಕರು ಮತ ಚಲಾಯಿಸಲು ಮತದಾರರಿಗೆ ಸಹಾಯ ಮಾಡಲು ಮತದಾರರ...

ಜೆಜೆಎಂ ಕಾಮಗಾರಿ ಪರಿಶೀಲಿಸಿದ ಜಿ.ಪಂ ಸಿಇಒ ಸೋಮಶೇಖರ್

ಮೊಳಕಾಲ್ಮೂರು ಮೇ.30: ಮೊಳಕಾಲ್ಮರು ತಾಲ್ಲೂಕಿನ ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕೊಂಡಾಪುರ ಗ್ರಾಮ ಹಾಗೂ ಅಶೋಕ ಸಿದ್ದಾಪುರ ಗ್ರಾಮ...

ಕಾರ್ಮಿಕರಿಗೆ ರಾಜಕೀಯ ತಿಳುವಳಿಕೆ ಬರುವವರೆಗೂ ಜೀವನದಲ್ಲಿ ಬದಲಾವಣೆ ಸಾಧ್ಯವಿಲ್ಲ: ಸಿಐಟಿಯು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಪತ್ತರ್

ಚಳ್ಳಕೆರೆ: ಕಾರ್ಮಿಕರಿಗೆ ರಾಜಕೀಯ ತಿಳುವಳಿಕೆ ಬರುವವರೆಗೂ ಅವರ ಜೀವನದಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ಸಿಐಟಿಯು ಸಂಘಟನೆಯ ರಾಜ್ಯ ಪ್ರಧಾನ...

ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಬಹಳ ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದ ಪ್ರದೇಶವನ್ನು ಕಂದಾಯ ಗ್ರಾಮಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ಕಾರ್ತಿಕ್.

ಚಳ್ಳಕೆರೆ ಜನಧ್ವನಿಮೆ30 ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಬಹಳ ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದ ಪ್ರದೇಶವನ್ನು...

ಮಗು ಇದೇ ಏಗಪ್ಪ ಕೂಲಿಕೆಲಕ್ಕೆ ಹೋಗೋದು ಎಂಬ ಚಿಂತೆ ಬಿಡಿ ಕೂಸಿನ‌ಮನೆ ಬಿಡಿ ಕೆಲಸಕ್ಕೆ ಹೋಗಿ ಎಂದು ತಾಪಂ ಇಒ‌ ಲಕ್ಷ್ಮಣ್.

ಚಳ್ಳಕೆರೆ ಮೇ.30 ಮಗು ಇದೇ ಏಗಪ್ಪ ಕೂಲಿಕೆಲಕ್ಕೆ ಹೋಗೋದು ಎಂಬ ಚಿಂತೆ ಬಿಡಿ ಕೂಸಿನ‌ಮನೆ ಬಿಡಿ ಕೆಲಸಕ್ಕೆ ಹೋಗಿ ಎಂದು ತಾಪಂ ಇಒ‌ ಲಕ್ಷ್ಮಣ್...

ತಿಮ್ಮಪ್ಪಯ್ಯನಹಳ್ಳಿ ಗ್ರಾಪಂ ಉಪಾಧ್ಯಕ್ಷರಾಗಿ ಎಂ.ತಿಪ್ಪೇಸ್ವಾಮಿ ಅವಿರೋಧವಾಗಿ ಆಯ್ಕೆ.

ನಾಯಕನಹಟ್ಟಿ::ಮೇ28. ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ರಾಜಿನಾಮೆಯಿಂದ ತೆರವಾಗಿದ್ದ ಉಪಧ್ಯಾಕ್ಷ ಸ್ಥಾನಕ್ಕೆ ಮಂಗಳವಾರ ನಡೆದ...

ಬಿಜೆಪಿ ನೇತೃತ್ವದ ಸರ್ಕಾರ ದೇಶದ ಜನರ ಸಂಪತ್ತನ್ನು ಕೆಲವೇ ಶತ ಕೋಟ್ಯಾಧಿಪತಿಗಳಿಗೆ ಧಾರೆ ಎರೆದಿದೆ ಸಿ.ವೈ. ಶಿವರುದ್ರಪ್ಪ

ಚಳ್ಳಕೆರೆ ಮೋದಿ ಸರ್ಕಾರ ದೇಶದ ಕಾನೂನುಗಳನ್ನು ಕಾರ್ಪೊರಿಕ್ ಸಾಗರ ಪ ತಿದ್ದುಪಡಿ ಮಾಡಿ, ಅವುಗಳ ಲಕ್ಷಾಂತರ ಕೋಟಿ ರೂಗಳ ಸಾಲ ಮನ್ನಾ ಮಾಡಿದೆ...

ಯುಪಿ ಯಿಂದ ಬಂದು ಅನಧಿಕೃತವಾಗಿ ಸೆಲೂನ್ ಅಂಗಡಿ ಪ್ರಾರಂಭಿಸುತ್ತಿರುವ ವ್ಯಕ್ತಿಗಳಿಗೆ ಅಂಗಡಿ ಪ್ರಾರಂಭಿಸಲು ಪರವಾನಗಿ ನೀಡದಿರಲು ಮನವಿ

ಹಿರಿಯೂರು : ಉತ್ತರಪ್ರದೇಶ ರಾಜ್ಯದಿಂದ ಹಿರಿಯೂರು ನಗರಕ್ಕೆ ಬಂದು ಅನಧಿಕೃತವಾಗಿ ಸೆಲೂನ್ ಅಂಗಡಿ ಪ್ರಾರಂಭಿಸುತ್ತಿರುವ ವ್ಯಕ್ತಿಗಳಿಗೆ ಅಂಗಡಿ...

ವಿದ್ಯುತ್ ತಂತಿ ಹರಿದು ಬಿದ್ದು ಎಮ್ಮೆ ಸ್ಥಳದಲ್ಲೇ ಸಾವು.

ಚಳ್ಳಕೆರೆ ಮೇ28 ಹಳ್ಳದಲ್ಲಿ ಮೇಯುತ್ತಿದ್ದ ಎಮ್ನೆ ಮೇಲೆ ವಿದ್ಯುತ್ ತಂತಿ ಹರಿದ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹೌದು...

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ ವಸತಿ ನಿಲಯಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಕಾವಲುಗಾರರ ನೇಮಿಸಿ

ಚಿತ್ರದುರ್ಗ ಮೇ.27: ಜಿಲ್ಲೆಯ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರಬೇಕು. ಒಂದು ವೇಳೆ ಸಿಸಿ ಕ್ಯಾಮೆರಾಗಳು...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page