ಬೇಸಿಗೆ ಮುನ್ನವೇ ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿಗಾಗಿ ಜನರು ಪರದಾಟ

by | 26/02/23 | ಜನಧ್ವನಿ


ಚಳ್ಳಕೆರೆ ಜನಧ್ವನಿ ವಾರ್ತೆ ಫೆ.26. ಬೇಸಿಗೆ ಮುನ್ನವೇ ಬಿಸಿಲಿನ ತಾಪ ಹೆಚ್ಚಾಗಿದ್ದು ವಿದ್ಯುತ್ ಸಮಸ್ಯೆಯಿಂದ ಜನರು ಕುಡಿಯುವ ನೀರಿಗಾಗಿಬಪರದಾಡುವಂತಾಗಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿರ ವರವಿನಾರಹಟ್ಟಿ. ಪೆತ್ತಮರಹಟ್ಟಿ. ದೊರೆಹಟ್ಟಿ ಸೇರಿದಂತೆ ವಿವಿದ ಹಟ್ಟಿಗಳಿಗೆ ಪದೆ ಪದೇ ಕೈಕೊಡುವ ವಿದ್ಯುತ್ ಪರಿವರ್ತಕಗಳಿಂದ ವಿದ್ಯತ್ ಸಮಸ್ಯೆಯಿಂದ ಜನ ಜಾನುವಾರುಗಳಿಗೆ ಹಾಗೂ ರೈತರ ಬೆಳೆಗಳಿಗೆ ನೀರಿಲ್ಲದೆ ಒಣಗಲು ಪ್ರಾರಂಭಿಸಿವೆ ಕುಡಿಯುವ ನೀರಿಗಾಗಿ ಮಹಿಳೆಯರು.ಮಕ್ಕಳು ಕೊಡ. ಚೆಂಬು.ಪಾತ್ರೆಗಳೊಂದಿಗೆ ಕಿ.ಮೀ ದೂರದ ರೈತರ ಜಮೀನುಗಳಿಗೆ ಅಲೆದಾಡುವಂತ ಪರಿಸ್ಥಿತಿ ಇದೆ. ನನ್ನಿವಾಳ ಗ್ರಾಪಂ ವ್ಯಾಪ್ತಿಯ ಹಟ್ಟಿಗಳಿಗೆ ಕಳೆದ ನಾಲ್ಕು ದಿನಗಳಿಂದ ಕುಡಿಯುವ ನೀರಿಲ್ಲದೆ ಜನ ಪರದಾಡುವಂತಾಗಿದ್ದು, ಬೆಸ್ಕಾಂ ಹಾಗೂ ಗ್ರಾಪಂ ಆಡಳೀತಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಮಳೆಗಾಲದಲ್ಲಿ ಉತ್ತಮವಾಗಿ ಮಳೆಬಂದಿದ್ದರೂ ನೀರಿಗಾಗಿ ಜನ ಪರದಾಡುವಂತಾಗಿದ್ದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಇಲ್ಲಿನ ಹಟ್ಟಿಗಳಲ್ಲಿ ನೀರಿಗೆ ಸಮಸ್ಯೆ ಆಗಿರುವುದು ಅಂತರ್ಜ‍ಲದ ಕೊರತೆಯಿಂದಲ್ಲ. ಬದಲಿಗೆ ವಿದ್ಯುತ್ ಸಮಸ್ಯೆಯಿಂದ ಎಂದರೆ ಅಚ್ಚರಿಯಾಗಬಹುದು. ಈ ಹಿಂದೆ ಮಳೆಯಿಲ್ಲದೆ ಜನ ನೀರಿಗಾಗಿ ಪರದಾಡುತ್ತಿದ್ದರು. ಆದರೆ ಈಗ ಮಳೆ ಉತ್ತಮವಾಗಿ ಆಗಿರುವುದರಿಂದ ನೀರಿಗೆ ಯಾವುದೇ ತೊಂದರೆಯಿಲ್ಲ. ಬದಲಿಗೆ ವಿದ್ಯುತ್ ಸಮಸ್ಯೆಯಿಂದ ಜನ ನೀರಿಲ್ಲದೆ ಪರದಾಡುವಂತಾಗಿದೆ. ವಿದ್ಯುತ್ ಪರಿವರ್ತಕಕ್ಕೆ ಹಬ್ಬಿದ ಬಳ್ಳಿ

ಗ್ರಾಮಕ್ಕೆ ನಾಲ್ಕೈದು ದಿನಗಳಿಂದ ನೀರು ಸರಬರಾಜಾಗುತ್ತಿಲ್ಲ ಎಂದರೆ ಜನರ ಪರಿಸ್ಥಿತಿ ಹೇಗಿರಬಹುದು . ಇಲ್ಲಿ ಕೇವಲ ಜನರೇ ವಾಸ ಮಾಡುತ್ತಿಲ್ಲ ನೂರಾರು ಕುರಿ.ಮೇಕೆ.ಎಮ್ಮೆ. ಹಸು.ದನಕರುಗಳನ್ನು ಕಟ್ಟಿಕೊಂಡು ಕೃಷಿ ಜತೆಗೆ ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಜನ ಇವತ್ತು ಸರಿಹೋಗಬಹುದು, ನಾಳೆ ಸರಿಹೋಗಬಹುದೆಂದು ಕಾಯುತ್ತಲೇ ಇದ್ದಾರೆ. ವಿದ್ಯುತ್ ಪರಿವರ್ತಕಗಳು ಪದೆ ಪದೇ ಕೈಕೊಡುವುದರಿಂದ ನೀರಿನ ಸಮಸ್ಯೆ ಉಂಟಾಗುತ್ತಿದ್ದು ಇದಕ್ಕೆ ಬೆಸ್ಕಾ ಅಧಿಕಾರಿಗಳು ಶಾಶ್ವತ ಪರಿಹಾರ ಕಲ್ಪಿಸ ಬೇಕಿದೆ.
ನೀರಿನ ಹಾಹಾಕಾರ ಮಾತ್ರ ತಪ್ಪಿಲ್ಲ ಎಂದು ಗ್ರಾಮದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ನೀರಿನ ಸಮಸ್ಯೆ ಬಗೆಹರಿಸುತ್ತಾರಾ ಎಂಬುದನ್ನು ಕಾದುನೋಡಬೇಕಾಗಿದೆ. ನನ್ನಿವಾಳ ಗ್ರಾಪಂ ವ್ಯಾಪ್ತಿಯ ಬಹುತೇಕ ಹಟ್ಟಿಗಳಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕಗಳು ಲಕ್ಕಕ್ಕುಂಟು ಉಪಯೋಗಕ್ಕಿಲ್ಲ ಎಂಬಂತಾಗಿದ್ದು ಸಾರ್ವ ಜನಿಕ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣದಲ್ಲಿ ನಿರ್ಮಿಸಿದ ಶುದ್ದ ಕುಡಿಯುವ ನೀರಿನ ಘಟಕಗಳು ಖಾಸಗಿ ಕಂಪನಿ ನಿರ್ವಹಣೆ ಹೊಣೆ ಹೊತ್ತಿದ್ದು ದುರಸ್ಥಿ ಹಾಗೂ ನಿರ್ವಹಣೆ ಇಲ್ಲದೆ ಕುಡಿಯುವ ನೀರಿನ ಶುದ್ದ ಘಟಕಗಳ ಯೋಜನೆ ಹಳ್ಳ ಹಿಡಿದಿದ್ದು ಇಲ್ಲಿನ ಜನರು ಕ್ಲೋರೈಡ್ ಯುಕ್ತ ನೀರನ್ನೇ ಕುಡಿಯುವಂತಾಗಿದೆ ಶುದ್ದು ಕುಡಿತುವ ನೀರಿನ ಘಟಕಗಲಕು ಧೂಳು ಮುಕ್ಕುತ್ತಾ ಗಿಡಗೆಂಟೆಗಳು ಬೆಳೆದಿವೆ. ಈಗಲಾದರೂ ಸಂವಂದ ಪಟ್ಟ ಅಧಿಕಾರಿಗಳು ನೀರಿನ ಘಟಕಗಳನ್ನು ದುರಸ್ಥಿ ಪಡಿಸುವರೇ ಕಾದು ನೋಡ ಬೇಕಿದೆ

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *