ಬೇರೆ ರೈತರ ಜಮೀನಿಗೆ ಎಫ್ ಐಡಿ ಮಾಡಿಸಿ 1,25,971 ರೂ ಬೆಳೆವಿಮೆ ಪಡೆದಿರುವುದು ಬೆಳಕಿಗೆ.

by | 12/06/24 | ತನಿಖಾ ವರದಿ

ಚಳ್ಳಕೆರೆ ಜೂ12 ರೈತರಿಗೆ ಅತಿಯಾಗಿ ಮಳೆ ಬಂದರೂ ಕಷ್ಟ, ಮಳೆ ಬರದೇ ಇದ್ದರೂ ಕಷ್ಟ. ನಷ್ಟ ಆಗೋದು ಮಾತ್ರ ರೈತರ ಬೆಳೆಗಳಿಗೆ. ಈ ಹಿನ್ನೆಲೆಯಲ್ಲಿ ರೈತರಿಗೆ ಸಹಾಯ ಧನ ನೀಡುವ ಉದ್ದೇಶದಿಂದಲೇ ಪ್ರಧಾನ ಮಂತ್ರಿ ಫಸಲ್ ಬಿಮಾ ವಿಮೆ ಯೋಜನೆ ಜಾರಿಗೆ ತರಲಾಗಿದೆ ಇದನ್ನೇ ಬಂಡವಾಳ ಮಾಡಿಕೊಂಡು ಬೇರೆ ರೈತರ ಜಮೀನಿಗೆ ಎಫ್ ಐಡಿ ಮಾಡಿಸಿ ವಿಮೆ ಪಡೆದಿರುವುದು ಬೆಳಕಿಗೆ ಬಂದಿದೆ.

ಹೌದು ಚಳ್ಳಕೆರೆ ತಾಲ್ಲೂಕು, ತಳಕು ಹೋಬಳಿ, ಹನುಮಂತನಹಳ್ಳಿ ಗ್ರಾಮದರಿ.ಸ.ನಂ: 188/2 ರ ಪಹಣಿಯ ಹಣವನ್ನು ಇದೇ ಗ್ರಾಮದಪಿ.ಹೆಚ್, ತಿಮ್ಮಾರೆಡ್ಡಿ ಬಿನ್ ಅಂಜಿನಪ್ಪ ಇವರು ಸುಳ್ಳು ದಾಖಲೆನೀಡಿ ಬೆಳೆವಿಮೆ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಬೆಳಕಿಗೆ ಬಂದಿದ್ದು ಕೃಷಿ ಇಲಾಖೆಗೆ ದೂರು ಸಹ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ತಳಕು ಹೋಬಳಿ, ಹನುಮಂತನಹಳ್ಳಿ ಗ್ರಾಮದ ಭಾಗ್ಯಮ್ಮ ಇವರ ಪತಿ ಲೇಟ್, ಪಿ.ಹೆಚ್, ವೆಂಕಟರೆಡ್ಡಿ ಬಿನ್ ಹನುಮಂತಪ್ಪ ಇವರ ಹೆಸರಿಗೆ ರಿ.ಸ.ನಂ: 188/2 ರ ಜಮೀನು ಜಂಟಿ ಪಹಣಿ ಇರುವುದು ಸರಿಯಷ್ಟೇ. ಸದರಿ ಪಹಣಿಯ ಭಾಗ್ಯಮ್ಮ ಕೋಂ ವೆಂಕಟರೆಡ್ಡಿ ಇವರು 2023-24 ನೇ ಸಾಲಿನ ಬೆಳೆ ವಿಮೆ ಕಟ್ಟಲು ಕಾಮನ್ ಸರ್ವಿಸ್ ಸೆಂಟರ್ಗೆ ಹೋದಾಗ ಸದರಿ ಸರ್ವಿಸ್ ಸೆಂಟರ್ನವರು ನಿಮ್ಮ ಪಹಣಿಯ ಬೆಳೆ ಪರಿಹಾರದ ಇನ್ಸುರೆನ್ಸ್ ಹಣವನ್ನು ಕಟ್ಟಿರುತ್ತಾರೆಂದು ತಿಳಿಸಿದ್ದಾರೆ.
ಆಗ ನಾವುಗಳು ನಮ್ಮ ಜಂಟಿಯಲ್ಲಿರುವವರೇ ಹಣವನ್ನು ಕಟ್ಟಿರುತ್ತಾರೆಂದು ತಿಳಿದು ಸುಮ್ಮನಿರುತ್ತೇವೆ. 2023-24 ನೇ ಸಾಲಿನಲ್ಲಿ ಬರಗಾಲವೆಂದು ಸಂಬಂಧಪಟ್ಟ ಅಧಿಕಾರಿಗಳು ಬೆಳೆ ನಷ್ಟವಾಗಿರುವುದನ್ನು ಸರ್ಕಾರದ ಗಮನಕ್ಕೆ ತಂದಿರುತ್ತಾರೆ. ಮತ್ತು ಬರಗಾಲವೆಂದು ಸರ್ಕಾರದ ಮಟ್ಟದಲ್ಲಿ ಘೋಷಣೆಯಾಗಿರುತ್ತದೆ. ಅದರಂತೆ ಇನ್ಸುರೆನ್ಸ್ ಕಂಪನಿಯವರು ಒಂದು ಎಕರೆಗೆ ಇಂತಿಷ್ಟು ಹಣವನ್ನು ನಿಗಧಿಪಡಿಸಿ ಸದರಿ ಬೆಳೆಗೆ ನಷ್ಟವಾದ ರೈತರುಗಳಿಗೆ ಹಣ ಬಿಡುಗಡೆ ಮಾಡಿರುತ್ತಾರೆ.
ಆದರೆ ನಮ್ಮ ಹೆಸರಿಗೆ ಇರುವ ರಿ.ಸ.ನಂ: 188/25 ಜಮಾ ಹಣ ನಮ್ಮ ಖಾತೆಗೆ ಆಗಿರುವುದಿಲ್ಲವೆಂದು ತಿಳಿದು ಭಾಗ್ಯಮ್ಮ ಕೋಂ ಲೇಟ್, ಪಿ.ಹೆಚ್, ವೆಂಕಟರೆಡ್ಡಿ ಆದ ನಾವು ಮೌಖಿಕವಾಗಿ ಕೃಷಿ ಇಲಾಖೆಯಲ್ಲಿ ವಿಚಾರಿಸಿದಾಗ ನಿಮ್ಮ ಪಹಣಿಯ ಹಣ ರೂ. 1,25,971 ರೂಗಳನ್ನು ಪಿ.ಹೆಚ್. ತಿಮ್ಮಾರೆಡ್ಡಿ ಬಿನ್ ಅಂಜಿನಪ್ಪ, ಹನುಮಂತನಹಳ್ಳಿ ಇವರ ಖಾತೆಗೆ ಜಮಾ ಆಗಿರುತ್ತದೆಂದು ತಿಳಿಸಿದ್ದು, ನಾವು ಗಾಬರಿಗೊಂಡಿರುತ್ತೇವೆ. ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಆನ್ ಲೈನ್ ನಲ್ಲಿ ಪ್ರಿಂಟ್ ತೆಗೆಸಿದಾಗ ಸದರಿ 188/2 ರ ಪಹಣಿಯ ಎಫ್.ಐ.ಡಿ. ನಂಬರನ್ನು ಪಿ.ಹೆಚ್. ತಿಮ್ಮಾರೆಡ್ಡಿಯವರು ಸುಳ್ಳು ದಾಖಲೆಗಳನ್ನು ನೀಡಿ ಎಫ್.ಐ.ಡಿ. ಯನ್ನು ಈ ಪಹಣಿಯ ಮೇಲೆ ಇವರ ಹೆಸರಿಗೆ ಮಾಡಿಸಿಕೊಂಡಿರುವುದು ತಿಳಿದುಬಂದಿರುತ್ತದೆ. ಆದ್ದರಿಂದ ನಮ್ಮ ಪಹಣಿಯ ಹಣವನ್ನು ಕೊಡಿಸಿಕೊಟ್ಟು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಎಫ್.ಐ.ಡಿ. ಮಾಡಿಸಿಕೊಂಡವರ ಹಾಗೂ ಎಫ್.ಐ.ಡಿ. ಮಾಡಿಕೊಟ್ಟರ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸುವರ್ಣ ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಬೇಡರಡ್ಡಿಹಳ್ಳಿ ನವೀನ್ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ದೂರು ನೀಡಿದ್ದಾರೆ.

ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ್ ಜನಧ್ವನಿ ಸಂಪರ್ಕಿಸಿದಾಗ ಬೆಳೆ ವಿಮೆ ಕಟ್ಟಲು ಹೋದಾಗ ಬೇರೆಯವರು ಕಟ್ಟಿದ್ದಾರೆ ಎಂಬ ಮಾಹಿತಿ ತಿಳಿದಾಗ ಕೃಷಿ ಇಲಾಖೆಗೆ ಮಾಹಿತಿ ಅಥವಾ ದೂರು ನೀಡಿದ್ದರೆ ಆಗಲೆ ಎಫ್ ಐಡಿ ಯನ್ನು ರದ್ದು ಮಾಡುತ್ತಿದ್ದೆವೆ ಈಗ ಬೆಳೆ ವಿಮೆ ಅವರ ಖಾತೆ ಜಮೆ ಆದಮೇಲು ದೂರು ನೀಡಿದ್ದಾರೆ ಬೆಳೆ ವಿಮೆ ಪಡೆದ ರೈತರಿಗೆ ತಿಳುವಳಿಗೆ ನೀಡಿದ್ದೇವೆ ಅದಕ್ಕೆ ಏನು ಉತ್ತರ ನೀಡುತ್ತಾರೆ ನೋಡ ಬೇಕಿದೆ ಎಂಬ ಮಾಹಿತಿ ನೀಡದರು.

ಕಂಪ್ಯೂಟರ್ ಕೇಂದ್ರಗಳಲ್ಲಿ ಬೆಳೆ ಪರಿಹಾರ, ಬೆಳೆವಿಮೆಗೋಲ್ ಮಾಡಿರುವ ಪ್ರಕರಣಗಳು ಮಾಸುವ ಮುನ್ನವೇ ಬೇರೆ ರೈತರ ಹೆಸರಿನ ಜಮೀನಿಗೆ ಎಫ್ ಐಡಿ ಮಾಡಿರುವುದು ಬೆಳಕಿಗೆ ಬಂದಿದೆ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇಂತಹ ನಕಲಿ ದಾಖಲೆಗಳನ್ನು ಮಾಡುವ ಕಂಪ್ಯೂಟರ್ ಸೆಂಟರ್ ಮಾಲಿಕರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳ ಬೇಕಾಗಿದೆ.

Latest News >>

ಹೊಸ ನ್ಯಾಯಬೆಲೆ ಅಂಗಡಿಗೆ ಪಡಿತರ ಚೀಟಿದಾರರನ್ನು ವರ್ಗಾಯಿಸಿದಂತೆ ಗ್ರಾಮಸ್ಥರ ಆಗ್ರಹ 

ಚಳ್ಳಕೆರೆ: ತಾಲೂಕಿನ ಜಾಜೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳು ವಾಸಿಸುವ ಕಾಲೋನಿಯ ಪಡಿತರ ಚೀಟಿದಾರರ ಅನುಮತಿ ಪಡೆಯದೆ...

ಪಹಣಿಗೆ ಆಧಾರ್ ಜೋಡಣಿ: ತಿಂಗಳಾಂತ್ಯಕ್ಕೆ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

ಚಳ್ಳಕೆರೆ ಜು.16 ಪಹಣಿಗೆ ಆಧಾರ್ ಜೋಡಣೆ ಕಾರ್ಯವನ್ನು ಪ್ರಥಮಾಧ್ಯತೆಯಾಗಿ ಪರಿಗಣಿಸಿ, ತಿಂಗಳಾಂತ್ಯಕ್ಕೆ ತಾಲ್ಲೂಕಿನಲ್ಲಿ ಪ್ರಗತಿ ಸಾಧಿಸಬೇಕು...

ನಗರದ ಪಾದಾಚಾರಿಗಳ ರಸ್ತೆ ಮೇಲಿರುವ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿಗೆ ವೆಂಕಟೇಶ್ ಬಳಿ ದೂರು.

ಚಳ್ಳಕೆರೆ ಜು.16 ಪುಟ್ ಬಾತ್ ನಲ್ಲಿ ಅಕ್ರಮ ಪೆಟ್ಟಿಗೆ ಅಂಗಡಿಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತದೆ ಕೂಡಲೆ...

ಗೃಹ ಲಕ್ಷ್ಮೀ ಯೋಜನೆ: ಲಿಂಗತ್ವ ಅಲ್ಪಸಂಖ್ಯಾತರಿಂದ ಅರ್ಜಿ ಆಹ್ವಾನ

ಚಿತ್ರದುರ್ಗ ಜು.16: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರು ಸಹ ಯೋಜನೆಯ ಸೌಲಭ್ಯ...

ಸಿದ್ದು ಬೆನ್ನಿಗೆ ಇದೆ ದಲಿತ ಶಕ್ತಿ ಟೀಕೆ, ಆರೋಪಗಳಿಗೆ ಎದೆಗುಂದದಿರಿ ಮಾಜಿ ಸಚಿವ ಎಚ್.ಆಂಜನೇಯ ಅಭಯ ಆಂಜನೇಯ ಅವರಿಗೆ ಬೆಳ್ಳಿಗಧೆ ನೀಡಿ ಗೌರವಿಸಿದ ದಲಿತ ಮುಖಂಡರು*

ಚಿತ್ರದುರ್ಗ: ಅಹಿಂದ ವರ್ಗದ ಕಣ್ಮಣಿ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ನಿರ್ಭಯವಾಗಿ ಕಾರ್ಯನಿರ್ವಹಿಸಬೇಕು. ಈ ಕಾರ್ಯಕ್ಕೆ ಇಡೀ ದಲಿತ...

ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಜನರನ್ನ ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖಪಾತ್ರ ವಹಿಸುತ್ತವೆ:ರಾಜ್ಯಾಧ್ಯಕ್ಷರಾದ ಬಂಗ್ಲೆಮಲ್ಲಿಕಾರ್ಜುನ್

ಹಿರಿಯೂರು: ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಸಮಾಜದ ಜನರನ್ನು ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ...

ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ ತಂದು ಮನುಕುಲಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದು ಭಗೀರಥ ಗುರುಪೀಠದ ಜಗದ್ಗುರು ಶ್ರೀ ಶ್ರೀ ಡಾ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ

ಪರಶುರಾಮಪುರ ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ...

ಪೀರಲು ದೇವರು ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ

ಹಿರಿಯೂರು: ನಗರದ ಚಿಕ್ಕಪೇಟೆ ಬಳಿ ಇರುವ ಪೀರಲು ದೇವರುಗಳ ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ ನಡೆಯುತ್ತಿದ್ದು...

ತ್ಯಾಗ ಬಲಿದಾನ ನೆನೆಯುವ ಭಾವೈಕ್ಯತೆಯ ಹಬ್ಬವೇ ಮೊಹರಂ ಮೈಲನಹಳ್ಳಿ ದಿನೇಶ್ ಕುಮಾರ್

ತ್ಯಾಗ ಬಲಿದಾನ ನೆನೆಯುವ ಭಾವೈಕ್ಯತೆಯ ಹಬ್ಬವೇ ಮೊಹರಂ ಮೈಲನಹಳ್ಳಿ ದಿನೇಶ್ ಕುಮಾರ್ ಜಾನಪದ ಕುಣಿತ ಪ್ರಕಾರಗಳಲ್ಲಿ ಮೊಹರಂ ಕುಣಿತ ಕೂಡ ಒಂದು....

ಬೆಸ್ಕಾಂ: ನೀರಾವರಿ ಪಂಪ್‍ಸೆಟ್ ಬಳಕೆದಾರರು ಆರ್ ಆರ್ ಸಂಖ್ಯೆಗೆ ಆಧಾರ್ ಜೋಡಣೆ ಕಡ್ಡಾಯ

ಚಿತ್ರದುರ್ಗಜು 15 ಚಿತ್ರದುರ್ಗ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೃಷಿ ನೀರಾವರಿ ಪಂಪ್‍ಸೆಟ್ ಬಳಕೆದಾರರು ತಮ್ಮ ನೀರಾವರಿ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page