ತಳಕು :: ಆಗಸ್ಟ್ 22. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಲಾಭದಾಯಕವಾಗಿಸಲು ಸರ್ವ ಸದಸ್ಯರ ಸಹಕಾರ ಅತಿ ಮುಖ್ಯ ಎಂದು ದೇವ ರೆಡ್ಡಿಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚನ್ನಬಸಪ್ಪ ಹೇಳಿದ್ದಾರೆ.
ಗುರುವಾರ ತಳಕು ಹೋಬಳಿಯ ದೇವರಡ್ಡಿಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ 2023 -24ನೇ ಸಾಲಿನ 75ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಗುರುವಾರ ನಡೆಯಿತು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚನ್ನಬಸಪ್ಪ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ರೈತರು ಸದಾ ಕಾಲ ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ರೈತರ ಏಳಿಗೆಗಾಗಿ ಕೃಷಿ ಪತ್ತಿನ ಸಹಕಾರ ಸಂಘಗಳು ಸದಾ ಶ್ರಮಿಸುತ್ತಿದೆ ಮುಂದಿನ ದಿನಗಳಲ್ಲಿಯೂ ಸಂಘದ ಸರ್ವ ಸದಸ್ಯರು ಇದೇ ರೀತಿ ಸಹಕಾರ ನೀಡಿದರೆ ಇನ್ನಷ್ಟು ಲಾಭದಾಯಕವಾಗಿ ಮುನ್ನಡೆಸಲು ಸಾಧ್ಯ ಎಂದರು.
ಇನ್ನೂ ಸಭೆಯಲ್ಲಿ 2023 24ನೇ ಸಾಲಿನ ಅಯ-ವ್ಯಯಗಳನ್ನು ಓದಿ ತಿಳಿಸಲಾಯಿತು. ದೇವರಡ್ಡಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023- 24ನೇ ಸಾಲಿನ 75,000 ಸಂಘದ ಲಾಭದಾಯಕವಾಗಿದೆ.
ಇದೇ ಸಂದರ್ಭದಲ್ಲಿ ದೇವರಡ್ಡಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಚ್ ತಿಮ್ಮಪ್ಪ, ನಿರ್ದೇಶಕರಾದ ಜಿ.ಬಿ. ನಾರಾಯಣರೆಡ್ಡಿ, ಕೆ ಎನ್ ವಿಶ್ವನಾಥ್ ರೆಡ್ಡಿ, ಎಚ್ ತಿಪ್ಪಾರೆಡ್ಡಿ ,ಬಿ.ಟಿ ರಾಘವರೆಡ್ಡಿ, ಡಿ ಎನ್ ನಾಗರಾಜ್, ಕೆ. ತಿಪ್ಪೇಸ್ವಾಮಿ, ಟಿ ಹೊನ್ನೂರಪ್ಪ, ಶ್ರೀಮತಿ ಸಾವಿತ್ರಮ್ಮ, ಶ್ರೀಮತಿ ಮೀನಾ ಕುಮಾರಿ, ಎನ್ ಮಂಜುನಾಥ್, ಜಿ.ವಿ. ಸತೀಶ್,
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಷೇರುದಾರರಾದ ಓಬಣ್ಣ, ಬೋರಯ್ಯ, ಮೀಸೆ ನಾಗಯ್ಯ, ನಾಗರಾಜ್ ರೆಡ್ಡಿ, ಪಾತಯ್ಯ, ಗೋವಿಂದರೆಡ್ಡಿ ,ಭದ್ರಪ್ಪ,
ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆರ್ ತಿಪ್ಪೇಸ್ವಾಮಿ, ಸಿಬ್ಬಂದಿಗಳಾದ ಬಿ.ಓಬಣ್ಣ, ಎಂ ಉಮೇಶ್, ವಿ. ಅಭಿಷೇಕ್, ಕೆ ಜಿ ತಿಪ್ಪೇಸ್ವಾಮಿ, ಬೇಡರಡ್ಡಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಷೇರುದಾರರು ಹಾಗೂ ರೈತರು ಇದ್ದರು
0 Comments