ಚಳ್ಳಕೆರೆ
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ 2020-21ನೇ ಸಾಲಿನ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಬೆಳೆ ಸಮೀಕ್ಷೆಯ ದತ್ತಾಂಶಗಳನ್ನು ಬೆಳೆವಿಮೆಗೆ ನೊಂದಣ ಯಾದ ಪ್ರಸಾವನೆಗಳೊಂದಿಗೆ ಹೋಲಿಕೆ ಮಾಡಿದಾಗ ತಾಳೆಯಾಗದೇ ಇರುವ ಪ್ರಸ್ತಾವನೆಗಳನ್ನು ಬೆಳೆಸಮೀಕ್ಷೆಯಲ್ಲಿ ರೈತರ ಜಮೀನಿನಲ್ಲಿ ದಾಖಲಾದ ಛಾಯಚಿತ್ರದೊಂದಿಗೆ ಪರಿಶೀಲಿಸಿ ಅಂತಿಮವಾಗಿ ತಾಳೆಯಾಗದೇ ಇರುವ ಚಳ್ಳಕೆರೆ ತಾಲ್ಲೂಕಿನ ಒಟ್ಟು 807 ಪ್ರಸ್ತಾವನೆಗಳು ತಿರಸ್ಕೃತಗೊಂಡಿದ್ದು ಸದರಿ ರೈತರ ಪಟ್ಟಿಯನ್ನು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿರುತ್ತದೆ. ಹಾಗೂ ಸದರಿ ವಿಷಯದ ಬಗ್ಗೆ ಯಾವುದಾದರೂ ಆಕ್ಷೇಪಣೆಯಿದ್ದಲ್ಲಿ ಆಯಾ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಸಲ್ಲಿಸಲು ರೈತರಿಗೆ ನವೆಂಬರ್ 21 ರಿಂದ ಡಿಸೆಂಬರ್ 5 ರವರೆಗೆ ಅವಕಾಶ ನೀಡಲಾಗಿದೆ.
ರೈತರು ಡಿಸೆಂಬರ್ 5ರೊಳಗೆ ಅರ್ಜಿ ಸಲ್ಲಿಸದೇ ಇದ್ದಲ್ಲಿ ಎಲ್ಲಾ ಪ್ರಸ್ತಾವನೆಗಳು ತಿರಸ್ಕೃತಗೊಳ್ಳುತ್ತವೆ. ಆಕ್ಷೆಪಣೆ ಸಲ್ಲಿಸುವಂತಿದ್ದಲ್ಲಿ 2020-21 ನೇ ಸಾಲಿನಲ್ಲಿನ ಪಹಣಿ ಪತ್ರಿಕೆಯಲ್ಲಿ ವಿಮೆಗೆ ನೊಂದಾಯಿಸಿದ ಬೆಳೆ ಇರಬೇಕು, ಬೆಂಬಲ ಬೆಲೆ ಪ್ರಯೋಜನ ಪಡೆದಿದ್ದಲ್ಲಿ ರಶೀದಿ, ವಿಮೆಗೆ ನೊಂದಾಯಿಸಿದ ಬೆಳೆಯ ಉತ್ಪನ್ನವನ್ನು ಎ.ಪಿ.ಎಂ.ಸಿ ಮಾರುಕಟ್ಟೆಗೆ ಮಾರಾಟ ಮಾಡಿದ್ದಲ್ಲಿ ಸದರಿ ದಾಖಲೆ ನೀಡಿ ಅರ್ಜಿ ಸಲ್ಲಿಸಬಹುದು ಎಂದು
ಸಹಾಯಕ ಕೃಷಿ ನಿರ್ದೇಶಕ ಡಾ ಅಶೋಕ್ ತಿಳಿಸಿದ್ದಾರೆ
0 Comments