ಜನಧ್ವನಿ ಮೀಡಿಯಾ ಎಫೆಕ್ಟ್ ವರದಿ ಫಲಶೃತಿ
ಚಳ್ಳಕೆರೆ ಜನಧ್ವನಿ ವಾರ್ತೆ ಸೆ.14. ಮುಸುಕಿನ ಜೋಳದ ಬೆಳೆ ನಷ್ಟವಾದ ರೈತನ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನೆಡೆಸಿ ಸಂಬಂಧ ಪಟ್ಟ ಬೀಜ ವಿತರಕರಿಗೆ ನೋಟಿಸ್ ನೀಡುವುದಾಗಿ ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ್ ತಿಳಿಸಿದ್ದಾರೆ.
ತಾಲೂಕಿನ ಗಂಜಿಗುಂಟೆ ಗ್ರಾಮದ ರೈತ ರೇವಣ್ಣ ಸೋಮಗುದ್ದು ಗ್ರಾಮದ ಗೌರವ ಶಿವಕಾಶಿ ಉತ್ಪಾದಕರ ಸಂಘ ದಲ್ಲಿ ಮುಸುಕಿನ ಜೋಳದ ಬೀಜ ಖರೀದಿಸಿ ಬಿತ್ತನೆ ಮಾಡಿ ಬೆಳೆ ಎತ್ತರಕ್ಕೂ ಬೆಳೆಯದೆ ಒಂದು ಜೋಳದ ಪೈರಿನಲ್ಲಿ ಎರಡು ಮೂರು ತನೆ ಬಿಟ್ಟು ತನೆಯಲ್ಲಿ ಕಾಳು ಸಹ ಪೂರ್ತಿ ಕಟ್ಟದೆ ಇಳುವರಿ ಕುಂಠಿತವಾಗಿ ಹಾಕಿದ ಬಂಡವಾಳವೂ ಕೈ ಸೇರದೆ ರೈತ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಜನಧ್ವನಿ ಡಿಜಿಟಲ್ ಮೀಡಿಯಾ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಸಹಾಯಕ ಕೃಷಿ ನಿರ್ದೇಶ ಡಾ.ಅಶೋಕ್ ಗ್ರಾಮಕ್ಕೆ ಭೇಟಿ ನೀಡಿ ರೈತನ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ ಸಂಬಂಧ ಪಟ್ಟ ಕಂಪನಿ ಗೆ ನೋಟೀಸ್ ನೀಡಲಾಗುವುದು ಹಾಗೂ ಕೃಷಿ ವಿಶ್ವ ವಿದ್ಯಾನಿಲಯದ ವಿಜ್ಞಾನಿಗಳಿಂದ ಪರಿಶೀಲಿಸಿ ವರದಿ ನೀಡುತ್ತೇವೆ ಎಂದು ಸಹಾಯಕ ಕೃಷಿನಿರ್ದೇಶಕ ಡಾ.ಅಶೋಕ್ ಜನಧ್ವನಿ ಮೀಡಿಯಾ ಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ತಿಪ್ಪೇಸ್ವಾಮಿ ಹಾಗೂ ರೈತರು ಉಪಸ್ಥಿತರಿದ್ದರು.
ಬೆಳೆ ನಷ್ಟದ ಜಮೀನಿಗೆ ಸಹಾಯಕ ಕೃಷಿ ನಿರ್ದೇಶಕ ಅಶೋಕ್ ಭೇಟಿ ಬೀಜ ವಿತರಕರಿಗೆ ನೋಟಿಸ್ ಜಾರಿ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments