ಬೆಳಕಿನ ಹಬ್ಬ ದೀಪಾವಳಿಯಲ್ಲಿ ರಾಷ್ಟ್ರಧ್ವಜದ ಬಣ್ಣಗಳಿಂದ ಎತ್ತುಗಳನ್ನು ಅಲಂಕರಿಸಿದ ರೈತ ಮಂಜುನಾಥ

by | 20/11/23 | ಸುದ್ದಿ

ಚಳ್ಳಕೆರೆ ನ.20 ಗ್ರಾಮೀಣ ಸೊಗಡಿನ ಎತ್ತಿಮ ಹಬ್ಬದ ಅಚರಣೆ ಎತ್ತುಗಳ ಕೊರತೆಯಿಂದ ಎತ್ತುಗಳಹಬ್ಬ ಕಣ್ಮರೆಯಾಗುವ ಬೆನ್ನಲ್ಲೇ ಇಲ್ಲೊಬ್ಬ ರೈತ ಎತ್ತಿಗೆ ರಾಷ್ಟ್ರದ್ವಜದ ಬಣ್ಣದಿಂದ ಶೃಂಗರಿಸಿ ದೀಪಾವಳಿ ಹಬ್ಬಕ್ಕೆ ಮೆರಗು ತುಂಬಿದ್ದಾನೆ.


ಬೆಳಕಿನ ಹಬ್ಬ ದೀಪಾವಳಿಯನ್ನು ಗ್ರಾಮೀಣ ಭಾಗಗಳಲ್ಲಿ ಒಂದು ತಿಂಗಳುಗಳ ಕಾಲ ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಾರೆ. ಈ ಬಾರಿಯ ದೀಪಾವಳಿ ಹಬ್ಬವನ್ನು ಚಳ್ಳಕೆರೆ ತಾಲೂಕಿನ ಸಾಣಿಕೆರೆ ಗ್ರಾಮದ ರೈತನದ ಮಂಜುನಾಥ ಅವರು ತಮ್ಮ ಎತ್ತುಗಳಿಗೆ ರಾಷ್ಟ್ರಧ್ವಜದ ಬಣ್ಣಗಳಾದ ಕೇಸರಿ, ಬಿಳಿ, ಹಸಿರು, ಎಂಬ ಹೂಗಳಿಂದ ಅಲಂಕಾರವನ್ನು ಮಾಡಿದ್ದು ಅದರ ಜೊತೆಯಲ್ಲಿ ಕೇಸರಿ ಬಿಳಿ ಹಸಿರು ಎಂಬ ಬಲೂನುಗಳನ್ನು ಕಟ್ಟಿ ಎತ್ತುಗಳನ್ನು ಸಿಂಗಾರ ಮಾಡಿ ದೀಪಾವಳಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿದ್ದಾರೆ.

ಈ ಬಾರಿಯ ದೀಪಾವಳಿ ಹಬ್ಬದಲ್ಲಿ ರಾಷ್ಟ್ರ ಧ್ವಜದ ಬಣ್ಣಗಳಿಂದ ಅಲಂಕಾರಗೊಂಡ ಎತ್ತುಗಳನ್ನು ನೋಡಲು ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಎತ್ತುಗಳನ ನೋಡಿ ಅದರ ಜೊತೆ ಫೋಟೋವನ್ನು ತೆಗೆಸಿಕೊಳ್ಳಲು ಮುಗಿ ಬಿದ್ದರು. ಕೇಸರಿ ಬಿಳಿ ಹಸಿರು ಬಣ್ಣಗಳಿಂದ ಅಲಂಕಾರಗೊಂಡಿದ್ದ ಎತ್ತುಗಳು ಈ ಬಾರಿಯ ದೀಪಾವಳಿಯಲ್ಲಿ ಆಕರ್ಷಣೆಯಾಗಿ ಗಮನ ಸೆಳೆದವು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *