ಚಳ್ಳಕೆರೆ ಅ22 ನಾಡಿನೆಲ್ಲೆಡೆ ಆಯುಧ ಪೂಜೆ ಹಬ್ಬದ ಸಂಭ್ರಮ ಮನೆ ಮಾಡಿದೆ. ಆಯುಧ ಪೂಜೆ ಹಿನ್ನೆಲೆ ಹೂ, ಹಣ್ಣು, ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ.
ತರಕಾರಿ ಮಾರುಕಟ್ಟೆ ಸೇರಿದಂತೆ ಮುಖ್ಯರಸ್ತೆಯಲ್ಲಿ ಜನರಿಂದ ತುಂಬಿ ಹೋಗಿದೆ. ಹಬ್ಬ ಹಿನ್ನೆಲೆ ಹೂ, ಹಣ್ಣಿನ ದರ ಕೊಂಚ ಏರಿಕೆಯಾಗಿದೆ. ಆಯಧ ಪೂಜೆಯ ಸಾಮಗ್ರಿಗಳಿಗೆ ಡಿಮ್ಯಾಂಡ್ ಹೆಚ್ಚಿದೆ. ಬೂದು ಕುಂಬಳಕಾಯಿ, ಹೂವು, ಹಣ್ಣು, ಬಾಳೆಕಂದು, ಮಾವಿನ ಸೊಪ್ಪು ಸೇರಿದಂತೆ ಆಯುಧ ಪೂಜೆಗೆ ಅಗತ್ಯವಾಗಿರುವ ವಸ್ತುಗಳ ಖರೀದಿಯಲ್ಲಿ ಜನ ತೊಡಗಿದ್ದಾರೆ.ತಾಲೂಕಿನಾದ್ಯಂತ ಆಯುಧಪೂಜೆ, ವಿಜಯದಶಮಿಗೆ ಭರದ ಸಿದ್ಧತೆ ಗ್ರಾಮೀಣ ಭಾಗದ ಸಾರಿಗೆ ಬಸ್ಸು ಗಳಿಗಾಗಿ ಕಾದು ಸುಸ್ತಾದ ಪ್ರಯಾಣಿಕರು
ನವರಾತ್ರಿಯ ಪ್ರಮುಖ ಹಬ್ಬಗಳಾದ ಆಯುಧ ಪೂಜೆ, ವಿಜಯದಶಮಿ ಆಚರಣೆಗೆ ಸಂಭ್ರಮದ ಸಿದ್ಧತೆಗಳು ಭರದಿಂದ ಸಾಗಿವೆ. ಭಾನುವಾರ ನಗರದಲ್ಲಿ ಖರೀದಿ ಜೋರಾಗಿತ್ತು. ಮತ್ತೊಂದೆಡೆ, ವಾಹನಗಳ ಸ್ವಚ್ಛತೆ, ಅಲಂಕಾರದಲ್ಲಿ ಸಾರ್ವಜನಿಕರು ನಿರತರಾಗಿದ್ದರು.
ಹೂವು, ಬಾಳೆ, ಬೂದುಗುಂಬುಳಕಾಯಿ, ಹಣ್ಣುಗಳ ಬೆಲೆ ಗಗನಕ್ಕೇರಿತ್ತು. ಏರಿದ ಬೆಲೆ, ಗ್ರಾಹಕರ ಹಬ್ಬದ ಸಂಭ್ರಮಕ್ಕೆ ಶಾಕ್ ನೀಡಿತ್ತಾದರೂ ಖರೀದಿ ಮಾತ್ರ ಜೋರಾಗಿಯೇ ಇತ್ತು.
ಹೂವಿಗೆ ಬಂಪರ್ ಬೆಲೆ, ರೈತರ ಮೊಗದಲ್ಲಿ ಮಂದಹಾಸ: ಹೂವಿನ ಬೆಲೆ ಇಳಿಮುಖದಿಂದ ಹಾಕಿದ ಬಂಡವಾಳ ಕೈಸೇರದೆ ರೈತರು ಬೆಳೆದ ಹೂವನ್ನು ತಿಪ್ಪೆಗೆ ಸುರಿದ ಬೆನ್ನಲ್ಲೇ ದಸರ ಹಬ್ಬದ ಹಂಗವಾಗಿ ಹೂ ಬೆಳದ ರೈತರಿಗೆ ಶುಕ್ರದೆಶೆ ತಿರುಗಿದೆ. ಈ ಬಾರಿಯ ನವರಾತ್ರಿ ತಾಲೂಕಿನ ಹೂ ಬೆಳೆಗಾರರಿಗೆ ಸಂಭ್ರಮ ಮೂಡಿಸಿದ್ದರೆ, ಗ್ರಾಹಕರಿಗೆ ಜೇಬಿಗೆ ಕತ್ತರಿ . ದುರ್ಗಾಷ್ಟಮಿಯಂದು ತಾಲೂಕಿನ ವಿವಿಧೆಡೆಯಿಂದ ರೈತರು ತಂದಿದ್ದ ಸೇವಂತಿಗೆ , ಗುಲಾಬಿ, ಚೆಂಡು ಹೂ ಜತೆಗೆ ಅಲಂಕಾರಿಕ ಹೂವುಗಳು ಉತ್ತಮ ಬೆಲೆಗೆ ಮಾರಾಟವಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತ್ತು.
ಮಳೆಯಿಲ್ಲದೇ ತಾಲೂಕಿನಲ್ಲಿ ಬರಗಾಲದ ಛಾಯೆ ಆವರಿಸಿದ್ದರೂ ಹಬ್ಬದ ಸಂಭ್ರಮಕ್ಕೆ ಹೂವಿನ ವ್ಯಾಪಾರ ನಡೆಯಿತು. ಪಂಪ್ ಸೆಟ್ಟ್ ಗಳ ಮೂಲಕ ನೀರು ಹಾಯಿಸಿ ಬೆಳೆದಿದ್ದ ಹೂವಿನ ಬೆಳೆಗೆ ಈ ಬಾರಿ ಬಂಪರ್ ಬೆಲೆ ಬಂದಿದ್ದರಿಂದ ಬೆಳೆಗಾರರು ಖುಷಿಯಿಂದಲೇ ವ್ಯಾಪಾರ ನಡೆಸಿದರು.
ಗೌರಿಗಣೇಶ ಹಬ್ಬದ ವೇಳೆ ಬೆಲೆ ಸಿಗದೇ ಕಂಗಾಲಾಗಿದ್ದ ಹೂ ಬೆಳೆದ ರೈತರಿಗೆ ಈ ಬಾರಿ ಉತ್ತಮ ಬೆಲೆ ಸಿಕ್ಕು ಪಟ್ಟ ಶ್ರಮಕ್ಕೆ ತಕ್ಕ ಫಲ ಸಿಕ್ಕಂತಾಗಿತ್ತು. ಸೇವಂತಿಗೆ ಮಾರಿಗೋಲ್ಡ್ ಮಾರಿಗೆ 100 ರಿಂದ 150ರೂ. ವರೆಗೆ ಮಾರಾಟವಾಯಿತು. ರಾಜಾವೈಟ್(ಬಿಳಿ ಸೇವಂತಿಗೆ 200ರೂ ಮುಟ್ಟಿತ್ತು. ಚೆಂಡು ಹೂವು 40 ರಿಂದ 50ರೂ. , ರೋಸ್ ನ ವೆರೈಟಿಗಳಾದ ರೂ ಬಿರೆಡ್ ಮೆರಾಬುಲ್ ಮುಂತಾದವು ನೂರೂ ರೂ. ಗಳಿಸಿದವು.
ಚಿಲ್ಲರೆ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಎಂದು ಸಗಟು ಮಾರಾಟದ ಮಾರುಕಟ್ಟೆಯಲ್ಲಿ ಒಂದೆರಡು ಮಾರು. ಹೂವು ಖರೀದಿಸಲು ಬಂದ ಗ್ರಾಹಕರಂತೂ ಹೂ ಬೆಲೆ ಕೇಳಿ ದಂಗಾಗಿದ್ದಾರೆ. ಐದಾರು ಮಾರು ಕೊಳ್ಳುವ ಹುಮ್ಮಸ್ಸಿನಲ್ಲಿ ಬಂದವರು ಒಂದರೆಡು ಮಾರು ಹೂವು ಕೊಂಡು ತೃಪ್ತಿಪಟ್ಟರು.
ಹೂವಿನ ಮಾರುಕಟ್ಟೆಯಲ್ಲಿ ವಾಹನ ಮತ್ತು ಜನದಟ್ಟಣೆಯಾಗಿದ್ದರಿಂದ ಬೆಂಗಳೂರು,ಬಳ್ಳಾರಿ, ಚಿತ್ರದುರ್ಗ ಹಾಗೂ ಪಾವಗಡ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಹಿರಿಯರ ಆರಾಧನೆ: ಕುಟುಂಬಗಳಲ್ಲಿ ನಿಧನ ಹೊಂದಿದ ಹಿರಿಯರಿಗೆ ಪೂಜೆ ಸಲ್ಲಿಸುವುದು ಬಯಲು ಸೀಮೆಯ ಜನರ ವಾಡಿಕೆಯಾಗಿದೆ ಹೀಗಾಗಿ ಪೂಜಾ ಸಾಮಗ್ರಿಗಳನ್ನು ಕೊಳ್ಳಲು ಜನರು ಅಂಗಡಿಗಳಲ್ಲಿ ಸಾಲುಗಟ್ಟಿ ನಿಂತಿದ್ದರು.
ಜವಳಿ ಅಂಗಡಿಗಳಲ್ಲಿ ಫುಲ್ ರಶ್: ನಗರದ ಜವಳಿ ಅಂಗಡಿಗಳಲ್ಲಿ ಹಾಗೂ ರೆಡಿಮೇಡ್ ಶಾಪುಗಳಲ್ಲಿ ಸಾರ್ವಜನಿಕರು ಬಟ್ಟೆ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸಾರಿಗೆ ಅಸ್ಥವ್ಯಸ್ಥ: ದಸರಾ ಹಬ್ಬದ ಪ್ರಯುಕ್ತ ಸಾಲ ಸಾಲು ರಜೆ ಇರುವುದರಿಂದ ಬೆಂಗಳೂರು ದಾವಣಗೆರೆ ಹಾಗೂ ಇತರೆ ನಗರಗಳಿಂದ ಸೇರಿದಂತೆ ಜನರು ತಮ್ಮ ಊರುಗಳಿಗೆ ತೆರಳಲು ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಸುಗಳಲ್ಲಿ ತೆರಳಲು ನಗರದ ಬಸ್ ನಿಲ್ದಾಣಗಳಲ್ಲಿ ಕಾದು ನಿಂತು ಸುಸ್ತಾದ ದೃಶ್ಯ ಕಂಡುಬಂದಿತು
ಪೊಲೀಸರು ಮತ್ತು ಗೃಹರಕ್ಷಕ ಸಿಬ್ಬಂದಿ ಸಂಚಾರ ವ್ಯವಸ್ಥೆ ನಿಯಂತ್ರಿಸಲು ಹರಸಾಹಸಪಟ್ಟರು.
0 Comments