ನಾಯಕನಹಟ್ಟಿ:: ಆಗಸ್ಟ್ 8.
ಬೆಂಕಿ ಅವಘಡ ಸಂಭವಿಸುವ ಮುನ್ನ ಮುಂಜಾಗೃತ ಕ್ರಮಗಳ ಕುರಿತು ತಾಲೂಕಿನ ವಿವಿಧ ಹಳ್ಳಿಗಳ ಶಾಲೆ ಮತ್ತು ಕಾಲೇಜು ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಚಳ್ಳಕೆರೆ ಅಗ್ನಿಶಾಮಕ ದಳದ ಠಾಣಾಧಿಕಾರಿ ನಿಜಗುಣ ಹೇಳಿದ್ದಾರೆ.
ಗುರುವಾರ ಸಮೀಪದ ಎನ್ ದೇವರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೆಂಕಿ ಅವಘಡಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ವಾರಕ್ಕೆ ಮೂರು ದಿನ ತಾಲೂಕಿನ ವಿವಿಧ ಹಳ್ಳಿಗಳ ಶಾಲಾ-ಕಾಲೇಜು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬೆಂಕಿ ಅವಘಡಗಳ ಬಗ್ಗೆ ಮತ್ತು ಬೆಂಕಿ ನಂದಿಸುವ ಕುರಿತು ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ ಮನವರಿಕೆ ಮಾಡಿಕೊಡಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಎನ್ ದೇವರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ್ ಎಸ್ ಹುರಕಡ್ಲಿ. ಸಹಶಿಕ್ಷಕರಾದ ಆರ್ ಶ್ರೀನಿವಾಸ್, ಅರುಣ್ ಕುಮಾರ್, ಡಿ ಸುರೇಶ್,ಎ. ಡಿ ಶರಣಪ್ಪ, ಆರ್ ಚಂದ್ರಣ್ಣ, ಎಂ. ಚನ್ನಮಲ್ಲರೆಡ್ಡಿ,ಎಂ.ಆರ್. ಅರುಣ್ ಕುಮಾರ್, ಡಿ.ಕೆ. ಮಂಜುನಾಥ್, ಕೆ.ಕಾಂತಪ್ಪನಾಯ್ಕ, ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ತಿಪ್ಪೇಶ್, ಸಂತೋಷ್ ,ಅರವಿಂದ, ಬಸವನಗೌಡ, ಚೇತನ್ ಸೇರಿದಂತೆ ಶಾಲೆಯ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಇದ್ದರು
0 Comments