ಹಿರಿಯೂರು :
ತಾಲ್ಲೂಕಿನ ಬೀರೇನಹಳ್ಳಿ ಗ್ರಾಮದ ಬಳಿ ಇರುವ ವಿದ್ಯುತ್ ಕೇಂದ್ರ ಘಟಕದಲ್ಲಿ ಸಂಪೂರ್ಣವಾಗಿ ಹಿಂದಿ ಮತ್ತು ಆಂಗ್ಲ ನಾಮಫಲಕಗಳನ್ನು ಹಾಕಲಾಗಿದೆ, ಇದು ನಿಜಕ್ಕೂ ಸರಿಯಾದ ಕ್ರಮವಲ್ಲ, ಇದನ್ನು ಖಂಡಿಸುವ ಮೂಲಕ ಕನ್ನಡನಾಡಿನಲ್ಲಿ ಇದೆಲ್ಲವನ್ನೂ ಕನ್ನಡದಲ್ಲೇ ಬರೆಸಬೇಕು ಎಂಬುದಾಗಿ ಕರ್ನಾಟಕ ನವನಿರ್ಮಾಣ ಸೇನೆ ತಾಲ್ಲೂಕು ಅಧ್ಯಕ್ಷರಾದ ಲಕ್ಷ್ಮಿಕಾಂತ್ ಒತ್ತಾಯಿಸಿದರು.
ತಾಲ್ಲೂಕಿನ ಬೀರೇನಹಳ್ಳಿ ಗ್ರಾಮದ ಬಳಿ ಇರುವ ವಿದ್ಯುತ್ ಕೇಂದ್ರ ಘಟಕದಲ್ಲಿ ಹಿಂದಿ ಮತ್ತು ಆಂಗ್ಲ ನಾಮಫಲಕಗಳನ್ನು ಕನ್ನಡಕ್ಕೆ ಬದಲಾಯಿಸಬೇಕು ಎಂಬುದಾಗಿ ಒತ್ತಾಯಿಸಿ, ವಿದ್ಯುತ್ ಘಟಕದ ವ್ಯವಸ್ಥಾಪಕರಿಗೆ ಮನವಿ ಅರ್ಪಿಸಿ ಅವರು ಮಾತನಾಡಿದರು.
ಈ ವಿದ್ಯುತ್ ಕೇಂದ್ರದ ವ್ಯವಸ್ಥಾಪಕರು ಈ ಎಲ್ಲಾ ಹಿಂದಿ ಹಾಗೂ ಇಂಗ್ಲೀಷ್ ನಾಮಫಲಕಗಳನ್ನು ಒಂದು ವಾರದ ಒಳಗಾಗಿ ಬದಲಾಯಿಸಿ ಕನ್ನಡ ನಾಮಫಲಕವನ್ನು ಅಳವಡಿಸಬೇಕು ಇಲ್ಲವಾದರೆ ಈ ವಿದ್ಯುತ್ ಕೇಂದ್ರದ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಹಿಂದಿ ಹಾಗೂ ಇಂಗ್ಲೀಷ್ ನಾಮಫಲಕ್ಕೆ ಕಪ್ಪುಮಸಿ ಬಳಿಯಬೇಕಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ನವನಿರ್ಮಾಣ ಸೇನೆಯ ತಾಲ್ಲೂಕು ಅಧ್ಯಕ್ಷರಾದ ಲಕ್ಷ್ಮಿಕಾಂತ್, ಪ್ರಧಾನ ಕಾರ್ಯದರ್ಶಿ ಶಿವು, ವಾರ್ಡ್ ಅಧ್ಯಕ್ಷರಾದ ಸಂತೋಷ್, ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಪವನ್ ಹಾಗೂ ಸದಸ್ಯರಾದ ಆಸಿಫ್, ಸಿದ್ದೇಶ್, ತಿಮ್ಮಯ್ಯ ಇತರರು ಉಪಸ್ಥಿತರಿದ್ದರು.
ಬೀರೇನಹಳ್ಳಿ ವಿದ್ಯುತ್ ಕೇಂದ್ರದಲ್ಲಿ ಹಿಂದಿ ಹಾಗೂ ಆಂಗ್ಲ ನಾಮಫಲಕ ತೆಗೆದು ಕನ್ನಡನಾಮಫಲಕ ಹಾಕಲು ಆಗ್ರಹ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments