ಬಿಸಿಯೂಟ ನೌಕರರಿಗೆ ಯಾವುದೇ ಪರಿಹಾರ ಕೊಡದೇ ಕೆಲಸದಿಂದ ತೆಗೆದಿರುವ ಸರ್ಕಾರದಪ್ರವೃತ್ತಿ ಸಾಮಾಜಿಕ ನ್ಯಾಯಕ್ಕೆವಿರುದ್ಧವಾಗಿದೆ :ಸಂಘದಅಧ್ಯಕ್ಷರಾದ ನಿಂಗಮ್ಮ

by | 21/02/23 | ಪ್ರತಿಭಟನೆ

ಹಿರಿಯೂರು :
ಬಿಸಿಯೂಟ ನೌಕರರಾಗಿ ಕಾರ್ಯನಿರ್ವಹಿಸಿ, ನಿವೃತ್ತಿಯಾದವರಿಗೆ ಮತ್ತು ಕೆಲಸದಿಂದ ತೆಗೆಯುವ ನೌಕರರಿಗೆ ಯಾವುದೇ ಪರಿಹಾರ ಕೊಡದೇ ಇರುವ ಸರ್ಕಾರದ ಪ್ರವೃತ್ತಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂಬುದಾಗಿ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷರಾದ ನಿಂಗಮ್ಮ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ತಾಲ್ಲೂಕು ಸಮಿತಿ ವತಿಯಿಂದ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ವೇತನವನ್ನು ಹೆಚ್ಚಿಸಲು ಒತ್ತಾಯಿಸಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿ, ಅವರು ಮಾತನಾಡಿದರು.
ಈಗಾಗಲೇ ನಿವೃತ್ತಿ ಹೊಂದಿದ ಬಿಸಿಯೂಟ ನೌಕರರಿಗೆ ಸರ್ಕಾರ ನಿವೃತ್ತಿ ವೇತನ ಅಥವಾ ಇಡಿಗಂಟು 1 ಲಕ್ಷ ರೂಗಳನ್ನು ನೀಡಬೇಕು, ಬಜೆಟ್ ನಲ್ಲಿ ಹೆಚ್ಚಳವಾದ 1000 ರೂ 2023 ಜನವರಿಯಿಂದ ಅರಿಯರ್ಸ್ ಆಗಿ ನೀಡಬೇಕು, ಸಾದಿಲ್ವಾರು ಜಂಟಿ ಖಾತೆಗೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಂದ ಎಸ್.ಡಿ.ಎಂ.ಸಿ ಗೆ ವರ್ಗಾವಣೆ ಮಾಡಿರುವ ಕ್ರಮ ವಾಪಾಸ್ಸು ಪಡೆಯಬೇಕು ಎಂಬುದಾಗಿ ಒತ್ತಾಯಿಸಿದರಲ್ಲದೆ,
ನಿವೃತ್ತಿ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನಿರ್ವಹಿಸಲು ಅವಕಾಶ ನೀಡಬೇಕು, ಅಲ್ಲದೆ ಅಪಘಾತದಲ್ಲಿ ಮರಣ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಅಪಘಾತ ಪರಿಹಾರ ನೀಡಬೇಕು, ಮತ್ತು ಅವರ ಕುಟುಂಬ ವರ್ಗದವರಿಗೆ ಕೆಲಸ ಒದಗಿಸಬೇಕು ಜೊತೆಗೆ ಪ್ರತಿ ಶಾಲೆಗೆ ಇಬ್ಬರು ಅಡುಗೆಯವರು ಕಡ್ಡಾಯವಾಗಿ ಇರಬೇಕು ಎಂಬುದಾಗಿ ಹೇಳಿದರು.
ಬಿಸಿಯೂಟ ನೌಕರರನ್ನು ಶಕ್ತಿ ಇದ್ದಾಗ ದುಡಿಸಿಕೊಂಡು ಅಶಕ್ತತೆ ಕಾಡುವ 60 ರ ವಯಸ್ಸಿನ, ನಂತರ ನಿವೃತ್ತಿ ಸೌಲಭ್ಯ ಮತ್ತು ಇಡಿಗಂಟು ಕೊಡುವುದು ಒಂದು ಪ್ರಭುತ್ವದ ಕರ್ತವ್ಯವಾಗಬೇಕು, ಆದರೆ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ತನ್ನ ಬಜೆಟ್ ನಲ್ಲಿ ಈ ನೌಕರರಿಗೆ ಕೊಡಬೇಕಾದ ಇಡಿಗಂಟು ಮರೆತಿರುವುದನ್ನು ಅಕ್ಷರ ದಾಸೋಹ ನೌಕರರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು.
ಈ ಪ್ರತಿಭಟನೆಯಲ್ಲಿ ಬಿಸಿಯೂಟ ನೌಕರರ ಸಂಘದ ಕಾರ್ಯದರ್ಶಿ ಟಿ.ರಾಜಮ್ಮ, ಖಜಾಂಚಿ ಮಂಜುಳಾ, ಶಾರದಮ್ಮ, ಕೆಂಚಮ್ಮ, ಯಲ್ಲಮ್ಮ, ರತ್ನಮ್ಮ, ಶಿವಮ್ಮ, ವಿಜಯಮ್ಮ, ತಿಮ್ಮಕ್ಕ, ಲಕ್ಷ್ಮೀ, ಗಂಗಮ್ಮ, ಜಯಮ್ಮ, ಮಂಜಮ್ಮ, ಶಾಂತಮ್ಮ, ಸೇರಿದಂತೆ ಅನೇಕ ಬಿಸಿಯೂಟ ನೌಕರರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

Latest News >>

ಹಾಸ್ಯನಟ ಸಂಗೀತ ನಿರ್ದೇಶಕ ಸಾಧುಕೋಕಿಲ ಸೂರನಹಳ್ಳಿ ಗ್ರಾಮಕ್ಕೆ ಭೇಟಿ.

ಚಳ್ಳಕೆರೆ ಜು.14ಚಳ್ಳಕೆರೆ ತಾಲೂಕಿನ‌ ಸೂರನಹಳ್ಳಿ‌ಗ್ರಾಮದ ಶ್ರೀ ಆಂಜನೇಸ್ವಾಮಿ ದೇವಸ್ಥಾನ ಕ್ಕೆ ಹಾಸ್ಯನಟ, ಸಂಗೀತಗಾರ, ಚಲನಚಿತ್ರ ನಿರ್ದೇಶಕ...

ಮೊಳಕಾಲ್ಮೂರಿಗೆ ಇಎಸ್ ಐ ಆಸ್ಪತ್ರೆ ಹಾಗೂ ಜವಳಿ ಪಾರ್ಕ್ ಮಂಜುರಾತಿ ನೀಡುವಂತೆ ಕೇಂದ್ರ ಸಚಿವರಿಗೆ ಜೆ.ಡಿ.ಎಸ್ ಮುಖಂಡ ಟಿ.ವೀರಭದ್ರಪ್ಪ ಮನವಿ

ಬೆಂಗಳೂರು ಜು. 14ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರವು ತುಂಬಾ ಹಿಂದುಳಿದ ಪ್ರದೇಶವಾಗಿದ್ದು ಹಾಗೂ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ ಇಲ್ಲಿ...

ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಮಾಳಜ್ಜಯ್ಯನವರಿಗೆ ಸನ್ಮಾನ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಪಿ. ತಿಪ್ಪೇಸ್ವಾಮಿ ,

ನಾಯಕನಹಟ್ಟಿ. ಜುಲೈ 14 . ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗ್ರಾಮೀಣ ಪ್ರದೇಶದ ರೈತರಿಗೆ ಸಹಕಾರವಾಗಲಿ ಎಂದು ಪಟ್ಟಣ...

ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮತದಾನ ಮಾಡಲು ಸರತಿ ಸಾಲಿನಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಚಳ್ಳಕೆರೆ ಜು.13 ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ ಮತದಾನದ ಮೂಲಕ ಸಾಗಿದ್ದು ಮಕ್ಕಳಿಗೆ ಚಿಕ್ಕಂದಿನಿಂದಲೇ ಚುನಾವಣಾ ಮಜಲುಗಳನ್ನು...

ಲೋಕ ಅದಾಲತ್ ಮೂಲಕ ಪ್ರಕರಣಗಳು ಇತ್ಯರ್ಥ ಗೊಂಡರೆ ದ್ವೇಷ ಭಾವನೆ ದೂರವಾಗಿ ಸಂಬಂಧಗಳು ಸುಧಾರಿಸಲಿವೆ: ಕೆಎಂ ನಾಗರಾಜ್ 

ಚಳ್ಳಕೆರೆ: ಲೋಕ ಅದಾಲಾತ್ ಕಾರ್ಯಕ್ರಮವು ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಇಡೀ ದೇಶದಾದ್ಯಂತ ನಡೆಯುತ್ತಿದ್ದು ಕಕ್ಷಿದಾರರು ಇದರ...

ಕರ್ನಾಟಕರಾಜ್ಯವೆಂದು ನಾಮಾಕರಣ ಮಾಡಿ 50ವರ್ಷಗಳುಸಂದ ಹಿನ್ನಲೆಯಲ್ಲಿ ಇಂದು ಸುವರ್ಣಾಕರ್ನಾಟಕಉತ್ಸವವನ್ಆಚರಿಸುತ್ತಿದ್ದೇವೆ:ತಹಶೀಲ್ದಾರ್ ರಾಜೇಶ್ ಕುಮಾರ್

ಹಿರಿಯೂರು: ಅಂದಿನ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ನಾಮಾಕರಣ ಮಾಡಿ 50 ವರ್ಷಗಳು ಸಂದ...

ಪತ್ರಿಕಾ ದಿನಾಚರಣೆಯಲ್ಲಿ ಸಚಿವ ಡಿ.ಸುಧಾಕರ್ ಹೇಳಿಕೆಸತ್ಯಕ್ಕೆ ಹತ್ತಿರವಾದ ಸುದ್ದಿಗಳಿಗೆ ಮಾತ್ರ ಜನಮನ್ನಣೆ

ಚಿತ್ರದುರ್ಗ ಜುಲೈ.13: ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಸತ್ಯಕ್ಕೆ ಹತ್ತಿರವಾದ ಸುದ್ದಿಗಳಿಗೆ ಮಾತ್ರ ಜನಮನ್ನಣೆ...

ಅಧಿಕಾರಿಗಳ ಸಭೆಯಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸೂಚನೆ ಡೆಂಗ್ಯೂ ಪರೀಕ್ಷೆ: ಖಾಸಗಿ ಲ್ಯಾಬ್‍ಗಳು ವಿಧಿಸುವ ದರ ಸಾರ್ವಜನಿಕರಿಗೆ ಹೊರೆಯಾಗದಿರಲಿ

ಚಿತ್ರದುರ್ಗ ಜು.13 ಡೆಂಗ್ಯೂ ಪರೀಕ್ಷೆಗೆ ಖಾಸಗಿ ನರ್ಸಿಂಗ್ ಹೋಂ, ಲ್ಯಾಬ್‍ಗಳು ವಿಧಿಸುವ ದರದ ಬಗ್ಗೆ ನಿಗಾವಹಿಸಿ, ಸರ್ಕಾರ ನಿಗಧಿಪಡಿಸಿದ ದರ...

ಡಾ. ಬಾಬು ಜಗಜೀವನ್ ರಾಮ್ ಭವನ ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಹಾಗೂ ಸಂಶೋಧಕರ ಕೇಂದ್ರವಾಗಿ ಹೊರಹೊಮ್ಮಲಿ. ಹಿರಿಯ ದಲಿತ ಮುಖಂಡ ತೊರೆಕೋಲಮ್ಮನಹಳ್ಳಿ ಆರ್. ಬಸಪ್ಪ,

ನಾಯಕನಹಟ್ಟಿ:: ಜುಲೈ 13 . ಡಾ. ಬಾಬು ಜಗಜೀವನ್ ರಾಮ್ ಸಂಶೋಧನ ಕೇಂದ್ರ ರಾಜ್ಯದ ದಲಿತ ಜನಾಂಗದ ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ಅಧ್ಯಯನ...

ಪ್ರತಿಭೋತ್ಸವದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ವಿದ್ಯಾರ್ಥಿಗಳು ವೈಯಕ್ತಿಕ ಹಿತಾಸಕ್ತಿ ಅರಿತು ಉದಯೋನ್ಮುಖರಾಗಿ ಬೆಳೆಯಬೇಕು

ಚಿತ್ರದುರ್ಗ ಜುಲೈ.12: ವಿದ್ಯಾರ್ಥಿಗಳು ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ತಮ್ಮ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page