ಚಳ್ಳಕೆರೆ ಜನಧ್ವನಿ ವಾರ್ತೆ ನ. 8 ಶಾಲಾ ಕಾಲೇಜ್ ಸಮೀಪ ಗುಟ್ಕಾ .ಧೂಮಪಾನ ಹಾಗೂ ಮದ್ಯಮಾರಟ ಹಾಗೂ ಸೇವನೆ ಮಾಡುವುದು ನೀಶೇದ ಎಂಬ ಕಾನೂನು ಇದೆ ಇದು ನಮಗೆ ಅನ್ವಹಿಸಿತ್ತಿಲ್ಲ ಎಂಬಂತೆ ಅಧಿಕಾರಿಗಳು ಮಾತ್ರ ಮೌನಕ್ಕೆ ಜಾರಿರುವುದು ಅನುಮಾನಕ್ಕೆ ಎಡೆಮಾಡಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ಮತ್ಸಮುದ್ರ ಗ್ರಾಮದಲ್ಲಿನ ಸರಕಾರಿಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಬಳಿ ಕೆಟಿಂಗ್ ಶಾಪ್ ಇದೆ. ಈ ಬರುವ ಯುವಕರು ಶಾಲಾ ಕಾಂಪೌಂಡ್ ಮೇಲೆ ಕುಳಿತು ಸೀಗರೇಟ್ ಹಾಗೂ ಗುಟ್ಕಸೇವಿಸುತ್ತಾರೆ ಇದರ ಘಾಟು ಶಾಲಾ ಕೊಠಡಿಯಲ್ಲಿ ಕುಳಿತ ಮಕ್ಕಳಿಗೆ ಹಾಗೂ ಶಿಕ್ಷಕರ ಮೂಗಿಗೆ ಬಡಿತುತ್ತದೆ. ಕಟಿಂಗ್ ಶಾಪಿನಲ್ಲಿ ಕಟ್ಟಿಂಗ್ ಮಾಡಿದ
ಕೂದಲುಗಳು ಹಾರಿಬಂದು ಶಾಲ ಮಕ್ಕಳ ಮಧ್ಯಾಹ್ನದ ಬಿಸಿಯೂಟದಲ್ಲಿ ಬಿಳುತ್ತಿವೆ. ಇದು ಮಕ್ಕಳ
ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಶಾಲಾ ಅವಧಿಯಲ್ಲಿ ಕಟಿಂಗ್ ಶಾಪ್ ಗೆ ಬಂದ ಯುವಕರು ಶಾಲಾ ಕಾಂಪೌಂಡ್ ಗೋಡೆ ಮೇಲೆ ಕುಳಿತು ಮೊಬೈಲ್ ನಲ್ಲಿ ಹಾಡು ಹಾಕಿ ಶಬ್ದಮಾಲಿನ್ಯ ದಿಂದ ಮಕ್ಕಳ ಕಲಿಕೆ ಮೇಲೆ ದುಷ್ಟಪರಿಣಾಮ ಬೀರುತ್ತಾದೆ ಇದರಿಂದ ಪೋಷಕರು ಮತ್ತು ಗ್ರಾಮಸ್ಥರಆತಂಕಕ್ಕೆ ಕಾರಣವಾಗಿದೆ.
ಸಲೂನ್ ಶಾಪ್‌ಗೆ ಬರುವ ಜನರಿಂದ ಶಾಲಾ ವಿದ್ಯಾರ್ಥಿಗಳಿಗೆ ಸಮಸ್ಯೆ
ಆಗುತ್ತಿರುವ ಕುರಿತು ಈಗಾಗಲೇ ಗ್ರಾಮ ಪಂಚಾಯಿತಿಗೆ ಸಾಕಷ್ಟು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ .
ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 100ಕ್ಕೂ ಹೆಚ್ಚು
ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಶಾಲೆಯ ಕಾಂಪೌಂಡ್‌ಗೆ ಹೊಂದಿಕೊಂಡು
ಇರುವ ಕಟಿಂಗ್ ಶಾಪ್‌ಗೆ ನಮ್ಮೂರಿನ ಜನರಲ್ಲದ ಹಾಲಿಗೊಂಡನಹಳ್ಳಿ, ಚಟ್ಟೆ ಕಂಬ,
ಚನ್ನಮ್ಮನಾಗತಿಹಳ್ಳಿ ಗ್ರಾಮದಿಂದಲೂ ಬರುತ್ತಾರೆ.


ಇಲ್ಲಿಗೆ ಬರುವ ಯುವಕರು ಶಾಲೆ ಕಾಂಪೌಂಡ್ ಮೇಲೆ ಕುಳಿತು ಮೊಬೈಲ್‌ನಲ್ಲಿ
ಹಾಡು ಹಾಕಿಕೊಂಡು ಬೀಡಿ, ಸಿಗರೇಟು ಮತ್ತು ಗುಟ್ಕಾ ಹಾಕುತ್ತಾ ಕಾಲ ಕಳೆಯು
ತ್ತಾರೆ. ಇದು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬಿರುತ್ತದೆ. ಜತೆಗೆ
ಕಿಟಕಿಯ ಮೂಲಕವು ಸಿಗರೇಟ್ ಹೊಗೆ ಶಾಲೆ ಒಳಗೆ ಹೋಗುವುದರಿಂದಶಿಕ್ಷಕರಿಗೆ ಪಾಠ ಮಾಡಲು ಮುಜುಗರವಾಗುತ್ತದೆ. ಮಕ್ಕಳ ಊಟದ ತಟ್ಟೆಗಳಲ್ಲೂಗಾಳಿ ಮೂಲಕ ಕೂದಲುಗಳು ಹಾರಿಬಂದು ಸೇರುತ್ತಿವೆ ಎಂದು ಶಾಲಾಭಿವೃದ್ಧಿ ಸಮಿತಿ . ಗ್ರಾಮಸ್ಥರು ಹಾಗೂ ಶಾಲೆಯ ಮುಖ್ಯ ಶಿಕ್ಷಕರು ಅಧಿಕಾರಿಗಳಿಗೆ ಮನವಿ ನೀಡಿದರೂ ಶಾಲಾ ಕಾಂಪೌಂಡ್ ಗೆ ಹೊಂದಿಕೊಂಡ ಕಟಿಂಗ್ ಶಾಪ್ ತೆರವುಗೊಳಿಸಲು ಮುಂದಾಗಿತ್ತಿಲ್ಲ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಕಟಿಂಗ್ ಶಾಪ್ ಸ್ಥಳಾಂತರಿಸುವರೇ ಕಾದು ನೋಡ ಬೇಕಿದೆ.
0 Comments