ಬಿಸಿಎಂ ವಿದ್ಯಾರ್ಥಿನಿಲಯದಲ್ಲಿ ಊಟದ ಅವ್ವಸ್ಥೆ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಸಿಬ್ಬಂಧಿಗಳ ವಿರುದ್ದ ಅಕ್ರೋಶವ್ಯಕ್ತಪಡಿಸಿದರು.

by | 21/10/23 | ಪ್ರತಿಭಟನೆ


ಚಳ್ಳಕೆರೆ ಅ.21 ನಗರದ ಹೊರವಲದ ದೇವರಾಜ್ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿ ನಿಲಯದಲ್ಲಿ ಊಟದ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಅಕ್ರೋಷ ವ್ಯಕ್ತ ಪಡಿಸಿದ್ದಾರೆ.
ನಗರದ ದೊಡ್ಡೇರಿ ರಸ್ತೆಯಲ್ಲಿರುವ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಊಟವನ್ನು ನೀಡುತ್ತಿಲ್ಲ ಊಟದ ಸಮಯ ಸಂಜೆ 7 ಗಂಟೆಯಿಂದ 8 ಗಂಟೆಯವರೆಗೂ ಇದ್ದರೆ ಕೇವಲ 10 ನಿಮಿಷದಲ್ಲಿ ಊಟ ಬಡಿಸಿ ಅಡುಗೆ ಸಿಬ್ಬಂದಿಗಳು ಮನೆಗೆ ಹೋಗುತ್ತಾರೆ.


ಇದರಿಂದ ವಿದ್ಯಾರ್ಥಿಗಳಿಗೆ ರಾತ್ರಿ ಸಮಯ ಊಟದ ಸಮಸ್ಯೆ ಉಂಟಾಗುತ್ತಿದ್ದು ಹೊಟ್ಟೆ ತುಂಬ ಊಟವಿಲ್ಲದೆ ಹಸಿವಿನಿಂದ ವಿದ್ಯಾರ್ಥಿಗಳು ಖಾಲಿ ಹೊಟ್ಟೆಯಲ್ಲಿ ರಾತ್ರಿ ಸಮಯ ಮಲಗುವಂತಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ ಇದರಿಂದ ವಿದ್ಯಾರ್ಥಿಗಳು ಊಟವಿಲ್ಲದೆ ಹಸಿವಿನಿಂದ ಬಳಲುವಂತಾಗಿದೆ.

ಸಿಬ್ಬಂದಿಗಳು ವಿದ್ಯಾರ್ಥಿಗಳ ಮೇಲೆ ದರ್ಪವನ್ನು ತೋರಿ ಸರಿಯಾದ ಸಮಯಕ್ಕೆ ಊಟದ ವ್ಯವಸ್ಥೆಯನ್ನು ಮಾಡುತ್ತಿಲ್ಲ ವಾರ್ಡನ್ ಬಳಿ ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು ಹೇಳಿಕೊಂಡರೆ ವಾರ್ಡನ್ ಮಾತಿಗೂ ಕೂಡ ಸಿಬ್ಬಂದಿಗಳು ಕ್ಯಾರೆ ಅನ್ನುತ್ತಿಲ್ಲ ಇದರಿಂದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಊಟದ ವ್ಯವಸ್ಥೆ ಇಲ್ಲದಂತಾಗಿದೆ

ಇದರಿಂದ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ ಇನ್ನಾದರೂ ಹಾಸ್ಟೆಲ್ ವಾರ್ಡನ್ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸುತ್ತಾರೆ ಕಾದು ನೋಡಬೇಕಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *