ಚಳ್ಳಕೆರೆ ಮಾ.19 ಬಿಜೆಪಿ ಸರ್ಕಾರಗಳ ಆಡಳಿತ ವೈಫಲ್ಯ ಹಾಗೂ ಶಾಸಕರ ದುರಾಡಳಿತಕ್ಕೆ ಬೇಸತ್ತು ಕಾರ್ಯಕರ್ತರೇ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಚಳ್ಳಕೆರೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವರ್ತಕರಯ. ವಿವಿಧ ಪಕ್ಷದ ಮುಖಂಡು ಸ್ವಯಂ ಪ್ರೇರಿತರಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿವಿಧ ಪಪಕ್ಷಗಳ ಕಾರ್ಯಕರ್ತರು ಮುಖಂಡರು ಹೆಚ್ಚಿನ ಸಂಖದಯೆಯಲ್ಲಿ ಕಾಂಗ್ರಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದರಿಂದ ಪಕ್ಷಕ್ಕೆ ಆನೆ ಬಲ ಬಂತಾ್ಇದ್ದು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ನಿಶ್ಚಿತ ಎಂದರು
ಬಿಜೆಪಿ .ಜೆಡಿಎಸ್ ತೊರೆದ ತಾಲೂಕಿನ ನಾನಾ ಗ್ರಾಮಗಳ ನೂರಾರು ಕಾರ್ಯಕರ್ತರನ್ನುಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.ದೇಶ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಬಂದರೆ ಅಭಿವೃದ್ಧಿಯಾಗುತ್ತದೆ ಎಂದು ಹುಸಿ ಭರವಸೆಗಳನ್ನು ಹುಟ್ಟಿಸಿದ್ದ ಬಿಜೆಪಿ ನಾಯಕರ ಬಣ್ಣ ಬಯಲಾಗಿದೆ. ಅಧಿಕಾರಕ್ಕೆ ಬಂದಾಗಿನಿಂದ ದೇಶ ಹಾಗೂ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋವಿಡ್-19 ಸೋಂಕು ನಿಯಂತ್ರಣದಲ್ಲಿ ವಿಫಲ, ಅವೈಜ್ಞಾನಿಕ ಲಾಕ್‌ಡೌನ್, ಉದ್ಯೋಗ ಕುಸಿತ, ಬೆಲೆ ಹೆಚ್ಚಳ ಹಾಗೂ ಸಾರ್ವಜನಿಕ ಉದ್ದಿಮೆಗಳ ಮಾರಾಟದಿಂದ ದೇಶವನ್ನೇ ದಾರಿದ್ರ್ಯಕ್ಕೆ ನೂಕಿದ್ದಾರೆ. ಇದರಿಂದ ಜನ ಬೇಸತ್ತು ಕಾಂಗ್ರೆಸ್ ಪಕ್ಷದತ್ತ ಒಲವು ತೋರಿಸುತ್ತಿದ್ದಾರೆ ಎಂದರು. ಚಳ್ಳಕೆರೆ ನಗರದ ಅಂಬೇಡ್ಕರ್ ನಗರದಲ್ಲಿ ನಡೆದ ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ಮತ್ತು ಆಮ್ ಆದ್ಮಿ ಪಕ್ಷಗಳ ಮುಖಂಡರುಗಳಾದ ಲಕ್ಷ್ಮಣ, ಮಾಲಿಕಣ್ಣ. ಟಿಪ್ಪು, ಸನಾವುಲ್ಲ, ಖಾಸಿಂ, ದಾದು, ನಾಗರಾಜ್, ಸಮೀವುಲ್ಲಾ, ವೆಂಕಟೇಶ್, ಶ್ರೀನಿವಾಸ್, ಜಬಿವುಲ್ಲಾ, ಮಾರಣ್ಣ ಮತ್ತು ಇವರ ಸಮ್ಮುಖದಲ್ಲಿ ನೂರಾರು ಕಾರ್ಯಕರ್ತರು ಹಾಗೂ ಮುಖಂಡರುಗಳು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಆಧರಿಸಿ ಮತ್ತು ಮಾನ್ಯ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ಮತ್ತು ಆಮ್ ಆದ್ಮಿ ಪಕ್ಷಗಳನ್ನು ತೊರೆದು ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಮಾನ್ಯ ಶಾಸಕರು ಬಿ.ಜೆ.ಪಿ. ಜೆ.ಡಿ.ಎಸ್. ಮತ್ತು ಆಮ್ ಆದ್ಮಿ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರುಗಳನ್ನು ಸನ್ಮಾನಿಸಿ ಕಾಂಗ್ರೆಸ್ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಸುಮಕ್ಕ ಅಂಜಿನಪ್ಪ, ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಪ್ಪ, ನಗರಸಭೆ ಸದಸ್ಯರುಗಳಾದ ಶ್ರೀಮತಿ ಜೖೆತುಂಬಿ ಮಾಲಿಕ್ ಸಾಬ್, ವಿರುಪಾಕ್ಷಿ, ರಮೇಶ್ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಘವೇಂದ್ರ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಗೀತಾ ಬಾಯಿ, ಮುಖಂಡರುಗಳಾದ ಎಚ್ಎಸ್ ಸೈಯದ್, ಹಾಯ್ಕಲ್ ಪ್ರಕಾಶ್, ಕೃಷ್ಣಣ್ಣ, ಬಡಗಿ ಪಾಪಣ್ಣ, ದಳವಾಯಿ ಮೂರ್ತಿ, ಲಕ್ಷ್ಮಣ, ಮಾರಣ್ಣ, ಕವಿತಾ ದಳವಾಯಿ ಮೂರ್ತಿ, ಜಬಿನಾ, ಉಷಾ, ಜಮರೂನ್ನಿಸಾ, ಕೃಷ್ಣಮೂರ್ತಿ, ಪ್ರಹ್ಲಾದ್ , ಶಂಶದ್ ಬಾನು, ನಿಂಗಮ್ಮ, ನಾಗಲಿಂಗಮ್ಮ, ಹಾಗೂ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಬಿಜೆಪಿ. ಜೆಡಿಎಸ್ ಪಕ್ಷದ ತೊರೆದು ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆಸೇರ್ಪಡೆ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments