ಚಳ್ಳಕೆರೆ ಆ.13 ಬಾಲ್ಯ ವಿವಾಹ ಸಮಾಜದಲ್ಲಿ ದೊಡ್ಡ ಪಿಡುಗಾಗಿದ್ದು ಬಾಲ್ಯ ವಿವಾಹ ತಡೆಗಟ್ಟಿ ಮಕ್ಕಳ ಬಾಳನ್ನು ಬೆಳಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು, ಜೆ.ಎಂ.ಎಫ್.ಸಿ ಹಾಗೂ ಅಧ್ಯಕ್ಷರು, ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ, ಶ್ರೀ ಶಮೀರ್ ಪಿ ನಂದ್ಯಾಲ್ ಹೇಳಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಇವರ ಸಂಯುಕ್ತಾಶ್ರಯದಲ್ಲಿ ಷೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ
ಹಾಗೂ ಮಕ್ಕಳ ರಕ್ಷಣಾ ಕಾಯ್ದೆಗಳ”ಕುರಿತು
ವಿವಿಧ ಇಲಾಖೆಯ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ಕೊರತೆಯಿಂದಾಗಿ ಇಂತಹ ಪಿಡುಗುಗಳು ಸಮಾಜದಲ್ಲಿ ಇಂದಿಗೂ ಕಾಡುತ್ತಿವೆ. ಈ ಹಿಂದೆ ಬಾಲ್ಯವಿವಾಹಗಳು ಬೆಳಕಿಗೆ ಬರುತ್ತಿಲ್ಲ ಕಳೆದ ಹತ್ತು ವರ್ಚಗಳಿಂದ ಪತ್ತೆಯಾಗುತ್ತಿದ್ದು ಹೆಚ್ಚಿನ ಶಿಕ್ಷಣ ಪಡೆಯುವ ಮೂಲಕ ಜ್ಞಾನ ವೃದ್ಧಿಸಿಕೊಂಡು ಸಮಾಜದ ಆಗುಹೋಗುಗಳ ಬಗ್ಗೆ ಅರಿಯಬೇಕು. ಬಾಲ್ಯ ವಿವಾಹಕ್ಕೆ ಮುಂದಾಗುವವರಿಗೆ ಶಿಕ್ಷೆ ನೀಡುವ ಮೂಲಕ ಬಾಲ್ಯ ವಿವಾಹ ತಡೆಗಟ್ಟಲು ಮುಂದಾಗಬೇಕು ಎಂದು ತಿಳಿದಿದರು.
ಶ್ರೀಮತಿ ಹೇಮ ಹೆಚ್.ಆರ್.ಗೌರವಾನ್ವಿತ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು, ಜೆ.ಎಂ.ಎಫ್.ಸಿ.
ಹಾಗೂ ಸದಸ್ಯ ಕಾರ್ಯದರ್ಶಿಗಳು ಕಾನೂನು ಸೇವಾ ಪ್ರಾಧಿಕಾರ,ಮಾತನಾಡಿ 21 ವರ್ಷ ಒಳಗಿನ ಹುಡುಗ ಹಾಗೂ 18 ವರ್ಷ ಒಳಗಿನ ಹುಡುಗಿಯರ ನಡುವೆ ಇಲ್ಲವೆ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿದ್ದರೂ ಪ್ರೀತಿ ಪ್ರೇಮದ ಬಲೆಗೆ ಬಿದ್ದು ಮದುವೆಯನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗುತ್ತದೆ.
ಮನೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಮಾಡಿದರೂ ಮಕ್ಕಳಕಾಯ್ದೆ ಉಲ್ಲಂಘನೆ.ಮನೆ.ಬೀದಿ ಊರಿನಲ್ಲಿಬಾಲ್ಯವಿವಾಹ ತಡೆದರೆ ರಾಜ್ಯದಲ್ಲಿ ತಡೆದಂತೆ. ಆದಷ್ಟು ತಡೆಗಟ್ಟಿ ಬಾಲ್ಯವಿವಾಹ ಸಂಪೂರ್ಣವಾಗಿ ತೊಲಗಿಸಬೇಕು.
ಪೋಷಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಮೂಲಕ ಬಾಲ್ಯ ವಿವಾಹ ತಡೆಗಟ್ಟಲು ಇಲಾಖೆ ಅಷ್ಟೇ ಅಲ್ಲದೆ ಎಲ್ಲರೂ ಮುಂದಾಗಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಭಾರತಿ ಬಣಕಾರ್ ಮಾತನಾಡಿ, 2006ರ ವಿಶೇಷ ಕಾಯ್ದೆಯನ್ನು ಬಾಲ್ಯ ವಿವಾಹದಲ್ಲಿ ತರಲಾಗಿದೆ. ರಾಜ್ಯ, ಜಿಲ್ಲಾ, ತಾಲೂಕು ಮಟ್ಟದಲ್ಲಿ ಕಮಿಟಿ ಇದ್ದು, ಬಾಲ್ಯ ವಿವಾಹದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವಿದೆ.
ಬಾಲ್ಯ ವಿವಾಹ ನಿಗದಿಪಡಿಸುವವರು, ಪುರೋಹಿತರು, ಮದುವೆ ಮಂಟಪದ ಮಾಲೀಕರು ಹಾಗೂ ಪೋಷಕರು, ಸಂಬಂಧಿಕರ ಮೇಲೆ ಪ್ರಕರಣ ದಾಖಲಿಸ ಬಹುದಾಗಿದೆ
ರಾಘವೇಂದ್ರ ಭಟ್,ಪ್ರಾದೇಶಿಕ ಸಂಯೋಜಕರು, ಯುನಿಸೆಪ್ ಮಕ್ಕಳ ಸಂರಕ್ಷಣ ಯೋಜನೆ
ಜಿಲ್ಲಾಧಿಕಾರಿಗಳ ಕಛೇರಿ, ಕೊಪ್ಪಳ ವಿಶೇಷ ಉಪನ್ಯಾಸ ನೀಡಿದರು.
ಡಿವೈಎಸ್ಪಿ ಕೆ.ರಾಜಣ್ಣ. ಕೆ.ಎಂ. ನಾಗರಾಜ್
ಅಧ್ಯಕ್ಷರು, ವಕೀಲರ ಸಂಘ, ಡಾ. ಪ್ರಭಾಕರ್ .ಆರ್
ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ, ಡಿ.ಕೆ ಶೀಲಾ
ಸದಸ್ಯರು, ಮಕ್ಕಳ ಕಲ್ಯಾಣ ಸಮಿತಿ,
ಜಿ.ಟಿ ಬಸವರಾಜ್ಮಕ್ಕಳ ಕಲ್ಯಾಣ ಸಮಿತಿ, ಸುಮನ ಎಸ್. ಅಂಗಡಿ ಸದಸ್ಯರು ಬಾಲನ್ಯಾಯ ಮಂಡಳಿ.ಮಧುಕರ್ಸ ದಸ್ಯರು ಬಾಲನ್ಯಾಯ ಮಂಡಳಿ, ಹರಿಪ್ರಸಾದ್.ಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ. ಸುರೇಶ್.ಕೆ.ಎಸ್. ಕ್ಷೇತ್ರ ಶಿಕ್ಷಣಾಧಿಕಾರಿ.
ಡಾ.ಕಾಶಿ ತಾಲ್ಲೂಕು ಆರೋಗ್ಯಾಧಿಕಾರಿಗಳು,
ಸವಿತ ಸಿ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಚಿತ್ರದುರ್ಗ.ತಾಪಂ ಸಹಾಯಕ ನಿರ್ದೇಶಕ ಸಂಪತ್ ಕುಮಾರ್ ಇತರರಿದ್ದರು.
0 Comments